Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ| ನಾಗಮೋಹನದಾಸ ಸಮಿತಿ ವೀರಶೈವ ಧರ್ಮದ ಇತಿಹಾಸ ಕುರಿತು ಅಧ್ಯಯನ ಮಾಡದೆ ಸರಕಾರದ ಅಣತಿಯಂತೆ ವರದಿ ಮಂಡಿಸಿದೆ ಎಂದು ಆರೋಪಿಸಿದರು. ಲಿಂಗಾಯತ ಧರ್ಮದಲ್ಲಿ 99 ಒಳಪಂಗಡಗಳನ್ನು ಸೇರಿಸಿದ್ದು, ಅಷ್ಟು ಜಾತಿಗಳಿರುವುದೇ ಸುಳ್ಳು. ಆಯಾ ಜಾತಿಯ ಮುಖಂಡರನ್ನು ಕೇಳಿದಾಗಲೇ ಸತ್ಯ ಬಯಲಾಗುತ್ತದೆ. ರಾಜ್ಯ ಸರಕಾರವು ವೀರಶೈವ/ಲಿಂಗಾಯತ ಧರ್ಮ ಒಡೆಯುವುದಕ್ಕೆ ತೋರಿದ ಇಚ್ಛಾಶಕ್ತಿಯನ್ನು ಮಹದಾಯಿ ಹಾಗೂ ಕಾವೇರಿ ವಿಷಯವಾಗಿ ತಲೆದೋರಿದ ಸಮಸ್ಯೆಗೆ ಆದ್ಯತೆ ನೀಡಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ವೇಷಧಾರಿಗಳನ್ನು ಮುಂದಿಟ್ಟುಕೊಂಡು ಧರ್ಮ ಇಬ್ಭಾಗ ಮಾಡುವ ಕಾರ್ಯ ಕೈಗೊಂಡಿದ್ದಾರೆ. ಸಿದ್ದರಾಮಯ್ಯ ಧರ್ಮ ಒಡೆದ ಅಪವಾದ ಹೊತ್ತುಕೊಂಡಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಗೊತ್ತಾಗಲಿದೆ ಎಂದರು. Advertisement
ಮುಂದಿನ ಹೋರಾಟ: ಶೀಘ್ರ ನಿರ್ಧಾರ
06:15 AM Mar 20, 2018 | |
Advertisement
Udayavani is now on Telegram. Click here to join our channel and stay updated with the latest news.