Advertisement
ಬಿಜೆಪಿ ಜಯಭೇರಿ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಗೆ ಆಗಮಿಸಿದ ಸಿಎಂ, ನಮ್ಮೆಲ್ಲರಿಗೂ ಇಂದು ಬಹಳ ಸಂತೋಷ ಆಗಿದೆ. ಭಾರತ ದೇಶಕ್ಕೆ ಅತ್ಯಂತ ಸಂತೋಷ ಸಿಕ್ಕಿದೆ. ಈ ಜಯ ಮುಂಬರುವ ಭಾರತ ದೇಶದ ದಿಕ್ಸೂಚಿ ತೋರಿಸಿದೆ.ಕೆಲವು ಶಕ್ತಿಗಳು ತಮ್ಮ ಸ್ವಾರ್ಥ, ರಾಜಕೀಯ ಲಾಭಕ್ಕಾಗಿ ದೇಶದ ಸುರಕ್ಷತೆ ಬಗ್ಗೆಯೂ ಚಿಂತನೆ ಮಾಡದೆ ಸಾಮಾನ್ಯ ಜನರು ಆತಂಕಕ್ಕೊಳಗಾಗಿದ್ದಾರೆ. ವಿಚಿತ್ರ ಕಾರಿ ಶಕ್ತಿ ಹೊಗಲಾಡಿಸಲು ಸ್ವಾತಂತ್ರ್ಯ ಸಿಕ್ಕಿದೆ ಎಂದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಎತ್ತರದಲ್ಲಿದೆ.ಉಕ್ರೇನ್, ರಷ್ಯಾ ಯುದ್ಧ ನಡೆಯುತ್ತಿದ್ದು, ನಿಲ್ಲಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಅಂತ ಹೇಳುವ ಧೈರ್ಯ ಅವರಿಗಿದೆ.ಅಮೇರಿಕಾಗೂ ಇಲ್ಲ ಎಂದರು. ಸಮಾಜವಾದಿ ಪಕ್ಷ ಗೆದ್ದೇ ಬಿಡ್ತು ಅಂತ ಜಾತಿ ಲೆಕ್ಕಾಚಾರ ಹಾಕಿ ಗೆದ್ದೇ ಬಿಟ್ಟ ಅಖಿಲೇಶ್ ಅಂತ ಮಾಡಿದರು.ಕಿಸಾನ್ ಯೋಜನೆ, ಪ್ರಧಾನ ಮಂತ್ರಿ ಗೃಹ ನಿರ್ಮಾಣ, ಉಜ್ವಲ ಯೋಜನೆ ಜನರಿಗೆ ಮುಟ್ಟಿದೆ. ಯಾರು ಮೋದಿ ಯೋಜನೆ ಮುಟ್ಟಿದೆ, ಎಂದೂ ಬೇರೆಯವರಿಗೆ ಮತ ನೀಡಲ್ಲ.
ಬಿಜೆಪಿ ಕಮಲ ಐದರಲ್ಲಿ ನಾಲ್ಲು ಕಡೆ ಅರಳಿದೆ. ರಾಜಕೀಯವಾಗಿ ನಮಗೂ ಗೊತ್ತಿದೆ. ಆಪ್ ಗೆದ್ದಿದ್ರೂ ಕೂಡ ಬರುವ ದಿನಗಳಲ್ಲಿ ಪಂಜಾಬ್‌ನಲ್ಲಿ ಬಿಜೆಪಿಯಿಂದ ಹೆಚ್ಚು ಸಂಸದರು ಆಯ್ಕೆಯಾಗಲಿದ್ದಾರೆ ಎಂದರು.
Related Articles
Advertisement
ಕಾಂಗ್ರೆಸ್ ನಾಯಕರು ಗೋವಾಗೆ ಹೋಗಿದ್ದಾರೆ. ಅವರು ಕಾಲಿಟ್ಟಿರೋ ಪರಿಸ್ಥಿತಿ ಸರಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಅವರ ಕಾಲೆಳೆದರು.
ಸಿಟಿ ರವಿ, ದೇವೇಂದ್ರ ಫಡ್ನವೀಸ್ ಅವರಿಗೆ ಗೋವಾ ಉಸ್ತುವಾರಿ ವಹಿಸಿದ್ದರು, ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಶೋಭಾ ಕರಂದ್ಲಾಜೆ ಅವರು ನಿರಂತರವಾಗಿ ಶ್ರಮಿಸಿದ್ದಾರೆ. 2023ಕ್ಕೆ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲಿದ್ದೇವೆ. ಬಜೆಟ್ ಕಾರ್ಯಾದೇಶ ಆಗಬೇಕು ಅಂತ ಸೂಚಿಸಿದ್ದೇನೆ. ಈಗಿನಿಂದಲೇ ಎಲ್ಲಾ ಯೋಜನೆ ಆರಂಭಿಸ್ತೇವೆ. ಕಾರ್ಯಕ್ರಮ ಮುಟ್ಟುವ ಲಾಭವನ್ನ ಜನರಿಗೆ ತಲುಪಬೇಕು.ಬಿಜೆಪಿ ಸದೃಢ ಸಂಘಟನೆ, ಜನರ ಹೃದಯ ಗೆದ್ದು, 2023ರಲ್ಲಿ ಬಿಜೆಪಿ ಬಾವುಟ ಹಾರಿಸಿ ಸುಭೀಕ್ಪ ಆಡಳಿತ ಕೊಟ್ಟೇ ಕೊಡುತ್ತೇವೆ ಎಂದರು. ಅಧಿವೇಶನ ಮುಗಿದ ಬಳಿಕ, ರಾಜ್ಯ ಸುತ್ತುತ್ತೇವೆ. ಯಡಿಯೂರಪ್ಪ ಹಾಗೂ ಕೇಂದ್ರ ನಾಯಕರ ಜೊತೆ ಸಂಘಟನೆ ಮಾಡುತ್ತೇವೆ. ಪಕ್ಷ ಸಂಘಟನೆ ಇಲ್ಲದ ಕಡೆ ಸುತ್ತಿ, ಸಂಘಟನೆ ಮಾಡುತ್ತೇವೆ. ಕಾಂಗ್ರೆಸ್ ಎಲ್ಲೆಡೆ ಧೂಳೀಪಟ ಆಗಿದ್ದು, ನೆಲಕಚ್ಚಿದೆ. ದೇಶದ ಭವಿಷ್ಯಕ್ಕಾಗಿ ಬಿಜೆಪಿ ಹೋರಾಟ ಮಾಡ್ತಿದೆ, ಕಾಂಗ್ರೆಸ್ ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡ್ತಿದೆ. ಮುಂದಿನ ವಿಜಯ ಗುಜರಾತ್ ನಲ್ಲಿ ಆಗಲಿದೆ, ನಂತರ ಸೂರ್ಯ ಚಂದ್ರ ಹೇಗೆ ಸತ್ಯವೋ ಹಾಗೆ ಬಿಜೆಪಿ ರಾಜ್ಯದಲ್ಲೂ ಅಧಿಕಾರಕ್ಕೆಬಂದೇ ಬರಲಿದೆ ಅದು ಸತ್ಯ ಎಂದರು.