Advertisement
“ಕಾಂಗ್ರೆಸ್‌ನವರು ಹೇಡಿಗಳು. ಭಯೋತ್ಪಾದಕ ದಾಳಿ ನಡೆದಾಗೆಲ್ಲ ಹಿಂದಿನ ಕಾಂಗ್ರೆಸ್ ಸರಕಾರ ಜಾಗತಿಕ ವೇದಿಕೆಯಲ್ಲಿ ಹೋಗಿ ಅಳುತ್ತಿತ್ತು. ಆದರೆ ನಮ್ಮ ಸರಕಾರ ಬಂದ ಬಳಿಕ ಪರಿಸ್ಥಿತಿ ಬದಲಾಗಿದೆ. ಈಗ ಪಾಕಿಸ್ಥಾನವೇ ಅಳುತ್ತಾ, ಸಹಾ ಯಕ್ಕಾಗಿ ಬೊಬ್ಬಿರಿ ಯುತ್ತಿದೆ’ ಎಂದರು. ಕಾಂಗ್ರೆಸ್ ಸರಕಾರವು ಶಾಂತಿಯ ನಿರೀಕ್ಷೆಯಲ್ಲಿ ಪಾಕಿಸ್ಥಾನಕ್ಕೆ ಲವ್ ಲೆಟರ್ ಬರೆಯುತ್ತಿತ್ತು. ಅದಕ್ಕೆ ಬದಲಾಗಿ ನೆರೆರಾಷ್ಟ್ರವು ಮತ್ತಷ್ಟು ಉಗ್ರರನ್ನು ಇಲ್ಲಿಗೆ ಕಳುಹಿಸುತ್ತಿತ್ತು. ಈಗಿ ರುವುದು ನವ ಭಾರತ. ಇಲ್ಲಿ ನಾವು ಉಗ್ರರ ನೆಲಕ್ಕೇ ನುಗ್ಗಿ ಹೊಡೆದು ಬರುತ್ತೇವೆ. ಅದೇ ಕಾರಣಕ್ಕೆ ಪಾಕಿ ಸ್ಥಾನವು “ಶೆಹಜಾದಾ'(ರಾಹುಲ್) ಪ್ರಧಾನಿಯಾಗ ಲೆಂದು ಬೇಡುತ್ತಿದೆ’ ಎಂದಿದ್ದಾರೆ.
“ದಿಲ್ಲಿಯಲ್ಲಿ ಒಬ್ಬ ಶೆಹಜಾದಾ(ರಾಜಕುಮಾರ) ಇರುವಂತೆ ಪಟ್ನಾದಲ್ಲೂ ಇದ್ದಾರೆ. ದಿಲ್ಲಿಯ ಶೆಹಜಾದಾ ಇಡೀ ದೇಶವನ್ನೇ ತನ್ನ ಆಸ್ತಿ ಎಂದು ಭಾವಿಸಿದ್ದರೆ, ಪಟ್ನಾದ ರಾಜಕುಮಾರ ಇಡೀ ಬಿಹಾರವೇ ತನ್ನ “ಆಸ್ತಿ’ ಎಂದು ಭಾವಿಸಿದ್ದಾರೆ’ ಎಂದು ಮೋದಿ ಟೀಕಿಸಿದ್ದಾರೆ. “ಮನೆ, ಸೈಕಲ್ ಕೂಡ ಇಲ್ಲ’
25 ವರ್ಷಗಳಲ್ಲಿ ನನ್ನ ಮೇಲೆ ಭ್ರಷ್ಟಾಚಾರದ ಒಂದೇ ಒಂದು ಕಪ್ಪುಚುಕ್ಕೆಯೂ ಇಲ್ಲ. ನನ್ನ ಬಳಿ ಸ್ವಂತ ಮನೆ ಯೂ ಇಲ್ಲ, ಒಂದು ಸೈಕಲ್ ಕೂಡ ಇಲ್ಲ. ಆದರೆ ಕಾಂಗ್ರೆಸ್ ಮತ್ತು ಜೆಎಂಎಂ ನಾಯಕರು ತಮ್ಮ ಮಕ್ಕ ಳಿಗಾಗಿ ಪ್ರಮಾಣದ ಆಸ್ತಿಪಾಸ್ತಿಗಳನ್ನು ಮಾಡಿ ಟ್ಟು ಕೊಂಡಿದ್ದಾರೆ ಎಂದ ಮೋದಿ ಆರೋಪಿಸಿದರು.