Advertisement
ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಈ ಸಾಧನೆ ಮಾಡಿದ್ದು, ಗಲ್ಫ್ ಆಫ್ ಮೆಕ್ಸಿಕೋ ಬಳಿ ಕೈಗೊಂಡ ಪರೀಕ್ಷಾರ್ಥ ಉಡಾವಣೆಯ ರಾಕೆಟ್ ಬೂಸ್ಟರನ್ನು ಸ್ಪೇಸ್ ಎಕ್ಸ್ ನಿರ್ಮಾಣ ಮಾಡಿದ್ದ ಯಾಂತ್ರಿಕ ತೋಳುಗಳು ಕ್ಯಾಚ್ ಮಾಡಿವೆ. ಇದನ್ನು ಬಾಹ್ಯಾಕಾಶ ಕ್ಷೇತ್ರದ ಅದ್ಭುತ ಎಂದು ಬಣ್ಣಿಸಲಾಗಿದೆ.
ಬೂಸ್ಟರ್ ಕ್ಯಾಚ್ ಮಾಡಲು ನಿರ್ಮಾಣ ಮಾಡ ಲಾಗಿದ್ದ, 400 ಅಡಿ ಉದ್ದದ ಯಾಂತ್ರಿಕ ತೋಳುಗಳಿಗೆ ಮೆಕಾಜಿಲ್ಲಾ ಎಂದು ಹೆಸರಿಡಲಾಗಿದ್ದು, ಬೂಸ್ಟರ್ ಭೂಮಿಗೆ ಇಳಿಯುತ್ತಿರುವಾಗಲೇ ಮಧ್ಯಭಾಗದಲ್ಲಿ ಕ್ಯಾಚ್ ಮಾಡುವಂತೆ ನಿರ್ಮಾಣ ಮಾಡಲಾಗಿತ್ತು. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಮಸ್ಕ್, “ಇದೊಂದು ಅದ್ಭುತ ಸಾಧನೆ, ಬೂಸ್ಟರ್ ಸಾಗರದ ನೀರಿನಲ್ಲಿ ಬೀಳ ದಂತೆ ಕ್ಯಾಚ್ ಮಾಡಲಾಗಿದೆ. ಇಂತಹ ಸಾಧನೆ ಇದೇ ಮೊದಲು. ಇದು ಭವಿಷ್ಯದ ಉಡ್ಡಯನಕ್ಕೆ ಮಾದರಿ ಎಂದು ಹೇಳಿದ್ದಾರೆ.