ನ್ಯೂಯಾರ್ಕ್: ಜಗತ್ತಿನ ಮೊದಲ ಟಿವಿ ನ್ಯೂಸ್ ಸೂಪರ್‌ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ನಿರೂಪಕಿ, ಸಂದರ್ಶಕಿ ಮತ್ತು ಪ್ರೋಗ್ರಾಂ ಹೋಸ್ಟ್ ಬಾರ್ಬರಾ ವಾಲ್ಟರ್ಸ್(93) ಶುಕ್ರವಾರ ರಾತ್ರಿ ಅಮೆರಿಕದಲ್ಲಿ ನಿಧನರಾಗಿದ್ದಾರೆ.
ನ್ಯೂಯಾರ್ಕ್‌ನ ಮನೆಯಲ್ಲಿ ಬಾರ್ಬರಾ ಅವರು ಅಸುನೀಗಿದ್ದಾರೆ. ಪತ್ರಿಕೋದ್ಯಮಕ್ಕೆ ತಮ್ಮದೇ ಕೊಡುಗೆಯನ್ನು ನೀಡಿರುವ ಇವರು, ಮಹಿಳಾ ಪತ್ರಕರ್ತರಿಗೆ ಮಾದರಿಯಾಗಿದ್ದರು.
ಮೊದಲು ಎನ್‌ಬಿಸಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ ಬಾರ್ಬರಾ, ನಂತರ ಸುದೀರ್ಘ 4 ದಶಕಗಳ ಕಾಲ ಎಬಿಸಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ್ದರು. ಬಾರ್ಬರಾ ಅವರು ಅನೇಕ ರಾಜಕೀಯ ನಾಯಕರು, ಚಿತ್ರ ತಾರೆಯರು ಹಾಗೂ ಸೆಲೆಬ್ರೆಟಿಗಳನ್ನು ಸಂದರ್ಶಿಸಿದ್ದರು.
ಎಬಿಸಿ ಸುದ್ದಿವಾಹಿನಲ್ಲಿ 1997ರಲ್ಲಿ ಮಹಿಳೆಯರಿಗಾಗಿಯೇ ಆರಂಭಿಸಿದ್ದ “ದಿ ವೀವ್’ ಲೈವ್ ಕಾರ್ಯಕ್ರಮವು ಖ್ಯಾತಿ ಪಡೆದಿತ್ತು. ಇದರಲ್ಲಿ ವಿಶ್ವದ ಪ್ರಮುಖ ನಾಯಕಿಯರು ಮತ್ತು ಜನಪ್ರಿಯ ತಾರೆಯರು ಭಾಗವಹಿಸಿದ್ದರು. ಇನ್ನೊಂದೆಡೆ, ಆ ಕಾಲದಲ್ಲೇ 10 ಲಕ್ಷ ಅಮೆರಿಕನ್ ಡಾಲರ್ ವೇತನ ಪಡೆಯುವ ಮೂಲಕ ಬಾರ್ಬರಾ ಸುದ್ದಿ ಮಾಡಿದ್ದರು.
ಇದನ್ನೂ ಓದಿ : ಆಕಸ್ಮಿಕ ಬೆಂಕಿಯಿಂದ ಭಸ್ಮವಾದ ಕಾರು; ಪ್ರಾಣಾಪಾಯದಿಂದ ಪಾರಾದ ಮೂವರು