Advertisement

ನ್ಯೂಯಾರ್ಕ್‌: ರಿಪಬ್ಲಿಕನ್‌ ಅಭ್ಯರ್ಥಿ ಟ್ರಂಪ್‌ಗೆ ಚುನಾವಣೆಯಲ್ಲಿ 60 ದಾಟಿದವರ ಬೆಂಬಲ

09:59 AM Nov 03, 2020 | sudhir |

ನ್ಯೂಯಾರ್ಕ್‌: ಏಷ್ಯಾ, ಆಫ್ರಿಕಾ ಮತ್ತು ಹಿಸ್ಪ್ಯಾನಿಕ್‌ ಮೂಲದ ಅಮೆರಿಕನ್ನರು ಪ್ರಸಕ್ತ ಚುನಾವಣೆಯಲ್ಲಿ ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬೈಡೆನ್‌ ಅವರನ್ನು ಬೆಂಬಲಿಸಿದ್ದರೆ, ಶ್ವೇತ ವರ್ಣೀಯ ಅಮೆರಿಕನ್ನರು ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರನ್ನು ಬೆಂಬಲಿಸಿದ್ದಾರೆ ಎಂದು ಮತದಾರರ ಪ್ರಾಥಮಿಕ ದತ್ತಾಂಶಗಳನ್ನು ಸಂಗ್ರಹಿಸಿ ಮಾಡಿರುವ ಸಮೀಕ್ಷೆಯೊಂದು ತಿಳಿಸಿದೆ.

Advertisement

ಸೆಪ್ಟೆಂಬರ್‌ನಿಂದ ಅಕ್ಟೋಬರ್‌ ಅಂತ್ಯ ದವರೆಗೆ ಸುಮಾರು 71 ಸಾವಿರ ಮಂದಿ ಯನ್ನು “2020 ಕೋಆಪರೇಟಿವ್‌ ಎಲೆಕ್ಷನ್‌ ಸ್ಟಡಿ’ ಎಂಬ ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ. ಈ ಪೈಕಿ ಶೇ.51ರಷ್ಟು ಮತದಾರರು ಜೋ ಬೈಡೆನ್‌ ಅವರೇ ಮುಂದಿನ ಅಧ್ಯಕ್ಷರಾಗಬೇಕು ಎಂದರೆ, ಶೇ.43ರಷ್ಟು ಮಂದಿ ಟ್ರಂಪ್‌ ಅಧ್ಯಕ್ಷರಾಗಿ ಮುಂದುವರಿಯಲಿ ಎಂದಿದ್ದಾರೆ.

18-29 ಮತ್ತು 30-44ರ ವಯೋ ಮಾನದವರು ಬೈಡೆನ್‌ರನ್ನು ಬೆಂಬಲಿಸಿ ದರೆ, 65 ವರ್ಷ ದಾಟಿದ ಶೇ.53ರಷ್ಟು ಮಂದಿ ಟ್ರಂಪ್‌ರನ್ನು ಬೆಂಬಲಿಸಿದ್ದಾರೆ. ಕಪ್ಪುವರ್ಣೀಯ ಮತದಾರರಲ್ಲಿ ಶೇ.86 ಮಂದಿ ಬೈಡೆನ್‌ ಪರ ಮಾತನಾಡಿದ್ದಾರೆ. ಅದೇ ರೀತಿ, ಶೇ.55ರಷ್ಟು ಮಹಿಳೆಯರು ಬೈಡೆನ್‌ ಪರ, ಶೇ.39ರಷ್ಟು ಮಹಿಳೆ ಯರು ಟ್ರಂಪ್‌ ಪರ ಒಲವು ವ್ಯಕ್ತಪಡಿಸಿ ದ್ದಾರೆ ಎಂದೂ ಸಮೀಕ್ಷೆ ಹೇಳಿದೆ.

ಇದನ್ನೂ ಓದಿ:ಅದಾನಿ ಸಮೂಹ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಹಸ್ತಾಂತರ

ಬೈಡೆನ್‌ ಭ್ರಷ್ಟ ಎಂದ ಟ್ರಂಪ್‌
ಡೆಮಾಕ್ರಾಟ್‌ ಅಭ್ಯರ್ಥಿ ಬೈಡೆನ್‌ ಅವರೊಬ್ಬ ಭ್ರಷ್ಟ. ಅವರು ಕಳೆದ 47 ವರ್ಷಗಳಲ್ಲಿ ಅಮೆರಿಕಕ್ಕೆ ದ್ರೋಹ ಬಗೆದಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಟ್ರಂಪ್‌ ಆರೋಪಿಸಿದ್ದಾರೆ. ರೋಚ್‌ಸ್ಟರ್‌ನಲ್ಲಿ ಶನಿವಾರ ಚುನಾವಣ ಪ್ರಚಾರ ರ್ಯಾಲಿ ನಡೆಸಿ ಮಾತನಾಡಿದ ಟ್ರಂಪ್‌, “ಬೈಡೆನ್‌ ನಿಮ್ಮ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡುತ್ತಾರೆ. ನಂತರ ಅಕ್ಕಪಕ್ಕ ಯಾರಿದ್ದಾರೆ ಎಂದು ನೋಡಿ, ನಿಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಅವರಿಗೆ ರಾಜಕೀಯ ಅಧಿಕಾರ ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ಚಿಂತೆ ಯಿಲ್ಲ’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next