Advertisement

ನ್ಯೂಸ್ ಪೇಪರ್ ನಿಂದ ಕೋವಿಡ್ 19 ವೈರಸ್ ಹರಡೋದಿಲ್ಲ: ಖ್ಯಾತ ವಿಜ್ಞಾನಿಗಳ ಪ್ರತಿಕ್ರಿಯೆ ಓದಿ

11:10 AM Mar 27, 2020 | Nagendra Trasi |

ನವದೆಹಲಿ: ಕೋವಿಡ್ 19 ವೈರಸ್ ಸತ್ಯ ದರ್ಶನದ ಜತೆಗೆ ಕೆಲವೊಂದು ಸುಳ್ಳು ಸುದ್ದಿಗಳನ್ನು ಹೊತ್ತು ತರಲಾರಂಭಿಸಿದೆ. ಏತನ್ಮಧ್ಯೆ ಪತ್ರಿಕೆಗಳು ನಿಮ್ಮ ಕೈಯಲ್ಲಿದ್ದರೆ ಯಾವುದೇ ತೊಂದರೆ ಇಲ್ಲ. ಅಷ್ಟೇ ಅಲ್ಲ ಪತ್ರಿಕೆಗಳಿಂದ ಕೋವಿಡ್ 19 ವೈರಸ್ ಹರಡುವುದಿಲ್ಲ ಎಂಬುದನ್ನು ಭಾರತದ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಕೋವಿಡ್ 19 ಅಟ್ಟಹಾಸದ ನಡುವೆ ಕಳೆದ ಒಂದು ವಾರದಿಂದ ವಾಟ್ಸಪ್ ಗಳಲ್ಲಿ ಫಾರ್ವರ್ಡ್ಸ ಸಂದೇಶಗಳದ್ದೇ ಕಾರುಬಾರು. ಅದೇನೆಂದರೆ ದಿನಪತ್ರಿಕೆಯನ್ನು ಓದುವುದರಿಂದ ಕೋವಿಡ್ 19 ಹರಡುತ್ತದೆ ಎಂಬುದಾಗಿ! ಆದರೆ ಈ ವಿಚಾರವನ್ನು ಭಾರತದ ವಿಜ್ಞಾನಿಗಳು ಹಾಗೂ ಆರೋಗ್ಯ ತಜ್ಞರು ಇದನ್ನು ಸಾರಸಗಟಾಗಿ ತಳ್ಳಿಹಾಕಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನ ಮುಖ್ಯ ವೈದ್ಯಾಧಿಕಾರಿ ನಿವೇದಿತಾ ಗುಪ್ತಾ ಈ ಕುರಿತು ಇಟಿ(ಎಕಾನಾಮಿಕ್ಸ್ ಟೈಮ್ಸ್) ಜತೆ ಮಾತನಾಡಿದ್ದು, ಕೋವಿಡ್ 19 ವೈರಸ್ ಶ್ವಾಸಕೋಶಕ್ಕೆ ತಗಲುವ ಸೋಂಕು. ಹೀಗಾಗಿ ಪೇಪರ್ ಓದುವುದರಿಂದ ಯಾವುದೇ ಅಪಾಯ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next