ಹೊಸದಿಲ್ಲಿ: “ವೃತ್ತಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳೇ ಅತ್ಯಂತ ವಿಶ್ವಾಸಾರ್ಹ. ಎಸ್ಸೆಮ್ಮೆಸ್ ಜಾಹೀರಾತುಗಳ ಮೇಲೆ ನಮಗೆ ನಂಬಿಕೆಯಿಲ್ಲ.’
ಇದು ದೇಶದ ಗ್ರಾಹಕರು ಜಾಹೀರಾತುಗಳ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯ. ಜನರು ಯಾವ ಮಾಧ್ಯಮ ದಲ್ಲಿ ಪ್ರಕಟವಾಗುವ ಜಾಹೀರಾತುಗಳನ್ನು ಹೆಚ್ಚು ನಂಬುತ್ತಾರೆ ಎಂಬ ಕುರಿತು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ(ಎಎಸ್‌ಸಿಐ), ಭಾರತೀಯ ಜಾಹೀ ರಾತುದಾರರ ಸೊಸೈಟಿ (ಐಎಸ್‌ಎ) ಮತ್ತು ನೀಲ್ಸನ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ.
ಶೇ.86ರಷ್ಟು ಗ್ರಾಹಕರು “ಪತ್ರಿಕೆಗಳಲ್ಲಿ ಬರುವ ಜಾಹೀರಾತುಗಳೇ ವಿಶ್ವಾಸಾರ್ಹವಾದದ್ದು’ ಎಂದು ಹೇಳಿದ್ದಾರೆ. ಅದರ ಅನಂತರ ಟಿವಿ ಮತ್ತು ರೇಡಿಯೋ ಜಾಹೀರಾ ತುಗಳನ್ನು ನಂಬುತ್ತೇವೆ. ಟೆಕ್ಸ್ಟ್ ಮತ್ತು ಎಸ್ಸೆಮ್ಮೆಸ್‌ಗಳ ಮೂಲಕ ಬರುವ ಜಾಹೀರಾತುಗಳು ಹೆಚ್ಚು ನಂಬಲರ್ಹವಾಗಿಲ್ಲ ಎಂದು ಗ್ರಾಹಕರು ಹೇಳಿದ್ದಾರೆ.
ಇದೇ ವೇಳೆ, ಶೈಕ್ಷಣಿಕ ಸಂಸ್ಥೆಗಳ ಕುರಿತ ಜಾಹೀರಾತುಗಳ ಮೇಲೆ ಹೆಚ್ಚಿನ ಮಟ್ಟದ ನಂಬಿಕೆಯಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಮಾರ್ಜಕಗಳು, ಸೊಳ್ಳೆ ನಿವಾರಕ ಸೇರಿದಂತೆ ಗೃಹಬಳಕೆ ಉತ್ಪನ್ನಗಳು ಕೂಡ ಹೆಚ್ಚು ನಂಬಿಕೆಗೆ ಅರ್ಹವಾಗಿವೆ. ಶೇ.70ರಷ್ಟು ಗ್ರಾಹಕರು ಸೆಲೆಬ್ರಿಟಿಗಳು ನೀಡುವ ಜಾಹೀರಾತನ್ನು ನಂಬುವುದಾಗಿ ಹೇಳಿದ್ದಾರೆ.
ಹೆಚ್ಚು ವಿಶ್ವಾಸಾರ್ಹ ಜಾಹೀರಾತು ಮಾಧ್ಯಮ
ಪತ್ರಿಕೆಗಳು 86%
ಟಿವಿ 83%
ರೇಡಿಯೋ 83%
ಟೆಕ್ಸ್ಟ್/ಎಸ್ಸೆಮ್ಮೆಸ್- 52%