Advertisement

ನ್ಯೂಸ್‌ ಪ್ರಿಂಟ್‌ ಆಮದು ಶುಲ್ಕ ರದ್ದು ಮಾಡಿ

09:13 AM Apr 03, 2020 | sudhir |

ಹೊಸದಿಲ್ಲಿ: ಕೋವಿಡ್ 19 ನಿಂದಾಗಿ ಭಾರತೀಯ ಪತ್ರಿಕಾ ಕ್ಷೇತ್ರವು ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ, ನ್ಯೂಸ್‌ ಪ್ರಿಂಟ್‌ ಮೇಲೆ ವಿಧಿಸಲಾಗುವ ಎಲ್ಲ ಆಮದು ಶುಲ್ಕವನ್ನು ರದ್ದು ಮಾಡಬೇಕು. ಎರಡು ವರ್ಷಗಳ ತೆರಿಗೆ ರಜೆ ನೀಡಬೇಕು ಎಂದು ಕೋರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಇಂಡಿಯನ್‌ ನ್ಯೂಸ್‌ ಪೇಪರ್‌ ಸೊಸೈಟಿ ಪತ್ರ ಬರೆದಿದೆ.

Advertisement

ಸದ್ಯಕ್ಕೆ ಪತ್ರಿಕಾ ವಲಯವು ಮೂರು ರೀತಿಯ ಸಂಕಷ್ಟಕ್ಕೆ ಒಳಗಾಗಿದೆ. ಒಂದೆಡೆ ಕೋವಿಡ್ 19 ವೈರಸ್‌ ದಾಳಿ, ಮತ್ತೂಂದೆಡೆ ಜಾಹೀರಾತಿನಲ್ಲಿ ಗಣನೀಯ ಇಳಿಕೆ ಮತ್ತು ನ್ಯೂಸ್‌ ಪ್ರಿಂಟ್‌ ಮೇಲಿನ ಕಸ್ಟಮ್ಸ… ಶುಲ್ಕವು ಪತ್ರಿಕಾ ರಂಗವನ್ನು ಊಹಿಸಲಾಗದಷ್ಟು ಬಿಕ್ಕಟ್ಟಿಗೆ ಸಿಲುಕಿದೆ. ಸ್ಥಳೀಯ ಪತ್ರಿಕೆಗಳಂತೂ ಅಲ್ಪಾವಧಿಯÇÉೇ ಸಂಪೂರ್ಣ ಪತನಗೊಳ್ಳುವ ಸ್ಥಿತಿಗೆ ತಲುಪಿವೆ.

ದೇಶಾದ್ಯಂತ ಲಾಕ್‌ ಡೌನ್‌ ನಿಂದಾಗಿ ಪತ್ರಿಕೆಯ ಪ್ರಸರಣವು ಕುಸಿದಿದೆ. ಜತೆಗೆ, ಜಾಹೀರಾತು ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಕಾರಣ ಪತ್ರಿಕೆಗೆ ಅತ್ಯಗತ್ಯವಾದ ಆದಾಯದ ಮೂಲವೇ ಇಲ್ಲದಂತಾಗಿದೆ ಎಂದು ಪತ್ರದಲ್ಲಿ ಉÇÉೇಖೀಸಲಾಗಿದೆ.

ಕಳೆದ ವರ್ಷ, ನ್ಯೂಸ್‌ ಪ್ರಿಂಟ್‌ ಮೇಲೆ ಶೇ.10 ಆಮದು ಶುಲ್ಕ ವಿಧಿಸಿದ್ದರಿಂದ, ಒಟ್ಟು ಕಸ್ಟಮ್ಸ… ಶುಲ್ಕ ಶೇ.15ಕ್ಕೇರಿತ್ತು. ಪ್ರಸಕ್ತ ವರ್ಷ, ಕೇಂದ್ರ ಬಜೆಟ್‌ ನಲ್ಲಿ ಶೇ.10ರ ಶುಲ್ಕವನ್ನು ತೆಗೆದುಹಾಕಲಾಗಿದೆಯಾದರೂ, ಪತ್ರಿಕೆಗಳು ಈಗಲೂ ಶೇ.5 ಶುಲ್ಕ ಪಾವತಿಸಲೇಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯನ್ನು ಮನಗಂಡು ಈ ಶುಲ್ಕವನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದೂ ವಿತ್ತ ಸಚಿವರಿಗೆ ಮಾಡಿದ ಮನವಿಯಲ್ಲಿ ಕೋರಲಾಗಿದೆ.

ಎಂಥ ಪ್ರತಿಕೂಲ ಸನ್ನಿವೇಶದಲ್ಲೂ ಮಾಧ್ಯಮಗಳ ಜವಾಬ್ದಾರಿ ಮಹತ್ವ¨ªಾಗಿರುತ್ತದೆ. ಅಂತೆಯೇ, ಕೋವಿಡ್ 19 ನಂತಹ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲೂ ನಮ್ಮೆಲ್ಲ ಪತ್ರಿಕೆಗಳೂ ಕರ್ತವ್ಯನಿಷ್ಠೆ ಮೆರೆಯುತ್ತಿವೆ. ಪತ್ರಿಕಾರಂಗದಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಜೀವವನ್ನೇ ಪಣಕ್ಕಿಟ್ಟು, ಸಾರ್ವಜನಿಕರಿಗೆ ನೈಜ ಸುದ್ದಿಗಳನ್ನು ತಲುಪಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದೂ ಪತ್ರದಲ್ಲಿ ವಿವರಿಸಲಾಗಿದೆ.

Advertisement

ಇದೇ ವೇಳೆ, ಕಳೆದ ವರ್ಷ ಡಿಎನ್‌ಎ ಮತ್ತು ಫೈನಾನ್ಶಿಯಲ್‌ ಕ್ರೋನಿಕಲ್‌ ನಂಥ ಆಂಗ್ಲ ಪತ್ರಿಕೆ ಗಳು ತಮ್ಮ ಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿ ಸಿರುವುದು ಮತ್ತು ಮುಂಬಯಿನ ಆಫ್ಟರ್‌ನೂನ್‌ ಡಿಸ್ಪಾಚ್‌ ಮತ್ತು ಕೊರಿಯರ್‌
ಪತ್ರಿಕೆಗಳು ಸಂಪೂರ್ಣವಾಗಿ ಮುದ್ರಣ ನಿಲ್ಲಿಸಿರುವ ಕುರಿತೂ ಪತ್ರದಲ್ಲಿ ಉÇÉೇಖೀಸಿದ್ದು, ಈ ಕ್ಷೇತ್ರದ ಬಿಕ್ಕಟ್ಟಿನ ಕುರಿತು ಗಮನ ಸೆಳೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next