Advertisement

ಶ್ರೀಲಂಕಾ ಕ್ರಿಕೆಟ್‌ ಸತ್ತಿದೆ ಎಂಬ ಮರಣ ವಾರ್ತೆ!

12:24 PM Mar 23, 2017 | Harsha Rao |

ಕೊಲಂಬೊ: “ಶ್ರೀಲಂಕಾ ಕ್ರಿಕೆಟ್‌ ಸತ್ತಿದೆ, ಶವವನ್ನು ದಹನ ಮಾಡಲಾಗುತ್ತದೆ. ಬೂದಿಯನ್ನು ಬಾಂಗ್ಲಾಕ್ಕೊಯ್ಯಲಾಗುತ್ತದೆ…’ ಹೀಗೊಂದು ಮರಣವಾರ್ತೆ ಶ್ರೀಲಂಕಾದ “ದಿ ಐಲ್ಯಾಂಡ್‌’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಜತೆಗೆ ಶವಪೆಟ್ಟಿಗೆಯನ್ನು ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆ ಹೊತ್ತು ಸಾಗುತ್ತಿರುವ ಚಿತ್ರವನ್ನೂ ಪ್ರಕಟಿಸಿದೆ. ಇದಕ್ಕೆ ಕಾರಣ, ಮಾ. 19ರಂದು ಮುಗಿದ 2ನೇ ಟೆಸ್ಟ್‌ ನಲ್ಲಿ ಪ್ರವಾಸಿ ಬಾಂಗ್ಲಾ ವಿರುದ್ಧ ಲಂಕಾ ಸೋತದ್ದು!

Advertisement

ಇದು ಬಾಂಗ್ಲಾದ 100ನೇ ಟೆಸ್ಟ್‌ ಎನ್ನುವುದು ಗಮನಾರ್ಹ. ಈ ಸೋಲು ಶ್ರೀಲಂಕಾದ ಕ್ರಿಕೆಟ್‌ ಅಭಿಮಾನಿಗಳನ್ನು ಕಂಗೆಡಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಷ್ಟೇ ಬಲಿಷ್ಠವಾಗುತ್ತಿರುವ ಬಾಂಗ್ಲಾ ವಿರುದ್ಧ ತನ್ನದೇ ನೆಲದಲ್ಲಿ ಮಂಡಿಯೂರಿದ್ದನ್ನು “ದಿ ಐಲ್ಯಾಂಡ್‌’ ಪತ್ರಿಕೆ ಗಂಭೀರವಾಗಿ ಪರಿಗಣಿಸಿ ಮರಣವಾರ್ತೆ ಪ್ರಕಟಿಸುವ ಮಟ್ಟಕ್ಕೆ ಹೋಗಿದೆ.
ಇಂಥ ಘಟನೆ 135 ವರ್ಷಗಳ ಹಿಂದೊಮ್ಮೆ ನಡೆದಿತ್ತು. 1882ರಲ್ಲಿ ಆ್ಯಶಸ್‌ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್‌ ತಂಡ ಸೋತಿತ್ತು. ಆಗ ರೊಚ್ಚಿಗೆದ್ದಿದ್ದ ಬ್ರಿಟನ್‌ನ “ನ್ಪೋರ್ಟಿಂಗ್‌ ಟೈಮ್ಸ್‌’ ಪತ್ರಿಕೆ ಇಂಗ್ಲೆಂಡ್‌ ಕ್ರಿಕೆಟ್‌ ಸತ್ತಿದೆ ಎಂದು ಮರಣವಾರ್ತೆ ಹಾಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next