Advertisement
ಹರಿಯಾಣದ ನುಹ್ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆ ದಿದ್ದು, ಹತ್ಯೆ ಗೀಡಾದ ಅಧಿ ಕಾರಿ ಯನ್ನು ಸುರೇಂದ್ರ ಸಿಂಗ್ ಬಿಷ್ಣೋಯ್ ಎಂದು ಗುರುತಿಸಲಾಗಿದೆ. ಕೃತ್ಯ ಎಸಗಿದ ಲಾರಿಯ ಚಾಲಕ ನನ್ನು ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.
Related Articles
Advertisement
ರಾಜಕೀಯವಾಗಿಯೂ ಈ ಘಟನೆ ಬಿರುಸು ಪಡೆದುಕೊಂಡಿದೆ. ಅಧಿಕಾರಿಯನ್ನು ಹತ್ಯೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಕಲ್ಲು ಗಣಿ ಮಾಫಿಯಾಕ್ಕೆ ಕಠಿನ ಸಂದೇಶ ರವಾನಿಸಬೇಕು ಎಂದು ಬಿಜೆಪಿ ಸಂಸದ ಬೃಜೇಂದ್ರ ಸಿಂಗ್ ಒತ್ತಾಯಿಸಿದ್ದಾರೆ. ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಪೊಲೀಸ್ ಅಧಿಕಾರಿಯ ಹತ್ಯೆ ರಾಜ್ಯದಲ್ಲಿ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಹರಿಯಾಣದಲ್ಲಿ ಶಾಸಕರಿಗೆ ಮತ್ತು ಪೊಲೀಸರಿಗೇ ಭದ್ರತೆ ಇಲ್ಲ ಎಂದಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
1 ಕೋಟಿ ರೂ. ಪರಿಹಾರಹತ್ಯೆಯಾಗಿರುವ ಡಿವೈಎಸ್‌ಪಿ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಹೇಳಿದ್ದಾರೆ. ಜತೆಗೆ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಮಟ್ಟ ಹಾಕಲಾಗುತ್ತದೆ ಎಂದಿದ್ದಾರೆ.