Advertisement

ನವವಿವಾಹಿತೆ ಮೇಲೆ ಪತಿ ಸೇರಿ 7 ಜನರಿಂದ ಸಾಮೂಹಿಕ ಅತ್ಯಾಚಾರ!

05:08 PM Sep 29, 2018 | Team Udayavani |

ಹರ್ಯಾಣ: ವಿವಾಹದ ಮರುದಿನವೇ ಪತ್ನಿಯ ಮೇಲೆ ಪತಿ ಸೇರಿದಂತೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಹರ್ಯಾಣದ ಕುರುಕ್ಷೇತ್ರದ ಬಾಬೈನ್ ಎಂಬ ಪ್ರದೇಶದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಘಟನೆ ಬಗ್ಗೆ ಸಂತ್ರಸ್ತೆ ನವವಿವಾಹಿತೆಯ ತಂದೆ ಕುರುಕ್ಷೇತ್ರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಪತಿ, ಪತಿಯ ಸಹೋದರ, ತಂಗಿ ಗಂಡ, ಮಾವ, ಅತ್ತೆ ಹಾಗೂ ಅಪರಿಚಿತ ನಾಲ್ವರು ಮಾಂತ್ರಿಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಏನಿದು ಘಟನೆ:

ದೂರಿನ ಪ್ರಕಾರ ಸೆಪ್ಟೆಂಬರ್ 12ರಂದು ಮಗಳ ವಿವಾಹ ನಡೆದಿತ್ತು. 2ದಿನದ ನಂತರ ಪತಿಯ ತಂದೆ ಕರೆ ಮಾಡಿ, ನಿಮ್ಮ ಮಗಳು ಮಾನಸಿಕ ಅಸ್ವಸ್ಥೆ ಅವಳನ್ನು ಕರೆದುಕೊಂಡು ಹೋಗಿ ಎಂದು ಯುವತಿಯ ತಂದೆಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು.

ತಂದೆ ಯುಮುನಾನಗರಕ್ಕೆ ಬಂದು ನೋಡಿದಾಗ ನವವಿವಾಹಿತೆ ಮಗಳು ನೆಲದ ಮೇಲೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಬಳಿಕ ಮಗಳು ತಂದೆ ಬಳಿ ನಡೆದ ಘಟನೆ ಬಗ್ಗೆ ಆಘಾತಕಾರಿ ವಿಷಯ ಹೇಳಿದ್ದಳು.

Advertisement

ಸೆಪ್ಟೆಂಬರ್ 13ರಂದು ರಾತ್ರಿ ಗಂಡ,  ಅತ್ತೆ, ನಾದಿನಿ ಕರೆದು ಅಮಲು ಪದಾರ್ಥ ಬೆರೆಸಿದ್ದ ಹಾಲನ್ನು ಕೊಟ್ಟಿದ್ದರು. ಪ್ರಜ್ಞೆ ತಪ್ಪಿದ ನಂತರ ಕೋಣೆಯೊಂದಕ್ಕೆ ತಳ್ಳಿ ಬಿಟ್ಟಿದ್ದರು. ಆಗ ಪತಿ, ಪತಿಯ ಸಹೋದರ, ಸಹೋದರಿಯ ಗಂಡ ಅತ್ಯಾಚಾರ ಎಸಗಿದ್ದರು. ಅಷ್ಟೇ ಅಲ್ಲ ಸೆಪ್ಟೆಂಬರ್ 14ರಂದು ಪೂಜೆ ನೆರವೇರಿಸಲು ಬಂದ ನಾಲ್ವರು ಅಪರಿಚಿತ ಮಾಂತ್ರಿಕರೂ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ವಿವರಿಸಿದ್ದಳು.

ಅತ್ತೆ, ಮಾವ ಹಾಗೂ ಪತಿಯ ಸಹೋದರಿ ಸಂಚು ರೂಪಿಸಿ ಸಾಮೂಹಿಕ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡಿರುವುದಾಗಿ ಸಂತ್ರಸ್ತೆ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುರುಕ್ಷೇತ್ರ ಮಹಿಳಾ ಠಾಣಾಧಿಕಾರಿ ಶೀಲಾವತಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದ್ದು, ಮುಂದಿನ ತನಿಖೆಗಾಗಿ ಯುಮುನಾ ನಗರ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next