Advertisement
ಈ ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಇದುವರೆಗೆ 34 ಮಂದಿ ಮೃತಪಟ್ಟಿದ್ದಾರೆ. ಕೆಲವರು ಸುಟ್ಟು ಕರಕಲಾಗಿದ್ದು, ಇನ್ನು ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಮೃತಪಟ್ಟಿದ್ದಾರೆ.
Related Articles
Advertisement
ದಂಪತಿ ಈ ವರ್ಷದ ಡಿಸೆಂಬರ್‌ನಲ್ಲಿ ಹಿಂದೂ ಸಂಪ್ರದಾಯಗಳ ಪ್ರಕಾರ ಕುಟುಂಬಗಳ ಸಮ್ಮುಖದಲ್ಲಿ ಮದುವೆ ಆಗುವ ಯೋಜನೆಯನ್ನು ಹಾಕಿಕೊಂಡಿದ್ದರು.
ಘಟನೆಯ ನಂತರ ಯುಎಸ್ ನಲ್ಲಿ ವಾಸಿಸುವ ಅಕ್ಷಯ್ ಪೋಷಕರು ರಾಜ್ ಕೋಟ್ ಗೆ ತೆರಳಿ ಪೊಲೀಸರು ಹೇಳಿದಂತೆ ಗುರುತನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಮಾದರಿಗಳನ್ನು ಕೊಟ್ಟಿದ್ದಾರೆ.
ಅಕ್ಷಯ್ , ಖ್ಯಾತಿ ಹಾಗೂ ಅಕ್ಷಯ್ ಅವರ ಸಂಬಂಧಿ ಬೆಂಕಿ ಅವಘಡದಲ್ಲಿ ಸುಟ್ಟು ಕರಕಲಾಗಿದ್ದಾರೆ.
ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡಕ್ಕೆ ತನಿಖೆಯನ್ನು ವಹಿಸಿದೆ.
ಒಂದೇ ನಿರ್ಗಮನ ಬಾಗಿಲು, 3,500 ಲೀ. ಇಂಧನ ಸಂಗ್ರಹ!ಬೆಂಕಿ ಅವಘಡಕ್ಕೀಡಾದ ರಾಜಕೋಟ್‌ನ ಟಿಆರ್‌ಪಿ ಗೇಮಿಂಗ್ ಜೋನ್‌ಗೆ ಪರವಾನಿಗೆ ಹಾಗೂ ಎನ್‌ಒಸಿ ಕೂಡ ಇರಲಿಲ್ಲ. 99 ರೂ. ಟಿಕೆಟ್ ರಿಯಾಯಿತಿ ನೀಡಿದ್ದರಿಂದ ಹೆಚ್ಚಿನ ಜನರು ಕೂಡ ಬಂದಿದ್ದರು. ವಿಶೇಷ ಎಂದರೆ, ಈ ಗೇಮಿಂಗ್ ಜೋನ್‌ನಲ್ಲಿ ಒಂದೇ ಹೊರ ಹೋಗುವ ಬಾಗಿಲು ಇತ್ತು. ಜನರೇಟರ್‌ಗಳಿಗಾಗಿ 3,500 ಲೀ. ಇಂಧನವನ್ನು ಸಂಗ್ರಹಿಸಿಡಲಾಗಿತ್ತು. ಇದು ಕೂಡ ಬೆಂಕಿಯು ತೀವ್ರತೆಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಶಾರ್ಟ್ ಸರ್ಕಿಟ್ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆಯಾ ದರೂ ಇನ್ನೂ ನಿಖರ ಕಾರಣ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಗೇಮಿಂಗ್ ಸೆಂಟರ್‌ಗೆ ಅಗ್ನಿಶಾಮಕ ಇಲಾಖೆ ಯಿಂದ ಪರವಾನಿಗೆ ಪಡೆದುಕೊಂಡಿಲ್ಲದ ಅಂಶ ಕೂಡ ಬೆಳಕಿಗೆ ಬಂದಿದೆ. ಈ ಸಂಬಂಧ ಗೇಮಿಂಗ್ ಜೋನ್ 6 ಪಾಲುದಾರರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಗುಜರಾತ್ ಹೈಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿದೆ.