Advertisement

ಸೈಕಲ್ ತುಳಿಯುತ್ತಲೇ ಒಡಿಶಾ ಸುತ್ತಿದ್ದ ಸಾರಂಗಿ

12:05 PM Jun 01, 2019 | Sriram |

ಒಡಿಶಾದ ಬಾಲಸೋರ್‌ನಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು ತನ್ನ ಸರಳ ಜೀವನ ಶೈಲಿಯಿಂದಲೇ ಮನೆಮಾತಾದ ಪ್ರತಾಪ್‌ ಚಂದ್ರ ಸಾರಂಗಿ ಸಹಾಯಕ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ಒಡಿಶಾದಲ್ಲಿ ಇವರು ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಗೆ ಹೆಸರಾದವರು. ಪ್ರಖರ ವಾಗ್ಮಿ, ಸಂಸ್ಕೃತ ಪಂಡಿತ ಹಾಗೂ ಆರ್‌ಎಸ್‌ಎಸ್‌ ಕಾರ್ಯಕರ್ತ ಸಾರಂಗಿ ಸೈಕಲ್ನಲ್ಲೇ ಹಳ್ಳಿಗಳಿಗೆ ಸುತ್ತುವ ಸರಳ ಜೀವಿ. ಇವರ ಎದುರು ಬಾಲಸೋರ್‌ನಲ್ಲಿ ಬಿಜೆಡಿಯಿಂದ ಮಾಧ್ಯಮ ದೊರೆ, ಕೋಟ್ಯಧಿಪತಿ ಎಂದೇ ಕರೆಯಲ್ಪಟ್ಟ ರವೀಂದ್ರ ಕುಮಾರ್‌ ಜೇನಾ ವಿರುದ್ಧ 12 ಸಾವಿರ ಮತಗಳಿಂದ ಜೇನಾರನ್ನು ಸೋಲಿಸಿದ್ದಾರೆ. ಕಾಂಗ್ರೆಸ್‌ನಿಂದ ನಬಜ್ಯೋತಿ ಪಟ್ನಾಯಕ್‌ ಕೂಡ ಕಣಕ್ಕೆ ಇಳಿದಿದ್ದರು.

ಬಾಲಸೋರ್‌ನಲ್ಲಿ ಪ್ರಧಾನಿ ಮೋದಿ ಕೂಡ ಪ್ರಚಾರ ನಡೆಸಿದ್ದರು. ಅಂದಹಾಗೆ ಇದಕ್ಕೂ ಮೊದಲು ಎರಡು ಬಾರಿ ನೀಲಗಿರಿ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಶಾಸಕರಾಗಿದ್ದರು. 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರಾದರೂ, 1.42 ಲಕ್ಷ ಮತಗಳಿಂದ ಜೇನಾ ವಿರುದ್ಧ ಸೋತಿದ್ದರು. ಜೇನಾ ಐಷಾರಾಮಿ ಕಾರುಗಳಲ್ಲಿ ಸುತ್ತಾಡಿ ಮತಯಾಚನೆ ಮಾಡುತ್ತಿದ್ದರೆ, ಇತ್ತ ಸಾರಂಗಿ ಬಾಡಿಗೆಗೆ ಪಡೆದ ರಿಕ್ಷಾದಲ್ಲಿ ಸುತ್ತುತ್ತಾ ಮತ ಯಾಚಿಸುತ್ತಿದ್ದರು. ಇವರನ್ನು ಇಲ್ಲಿನ ಜನರು ನಾನಾ ಎಂದೇ ಕರೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next