Advertisement

MOBILE ಬಳಸಿದ್ದಕ್ಕೆ ಅತ್ತೆಯ ಕಿರಿಕ್:‌ ಮದುವೆಯಾದ ನಾಲ್ಕೇ ದಿನಕ್ಕೆ ಗಂಡನನ್ನು ತೊರೆದ ನವವಧು

11:10 AM Jun 01, 2023 | Team Udayavani |

ಪಾಟ್ನಾ: ಮದುವೆಯಾಗಿ ಆಗಷ್ಟೇ ಗಂಡನ ಮನೆಗೆ ಸೇರಿದ್ದ ನವವಧುಯೊಬ್ಬಳು ಗಂಡನ ಮನೆಯನ್ನೇ ತೊರೆದು ಬಂದಿರುವ ಘಟನೆ ಬಿಹಾರದಲ್ಲಿ ನಡೆದಿದೆ.

Advertisement

ಸಬಾ ಖಾತೂನ್ ಹಾಗೂ ಇಲಿಯಾಸ್ ಅವರ ವಿವಾಹ ಇತ್ತೀಚೆಗೆ ನಡೆದಿದೆ. ಮದುವೆ ನಡೆದು ನಾಲ್ಕು ದಿನಗಳಷ್ಟೇ ಕಳೆದಿದೆ. ಅಷ್ಟರಲ್ಲೇ ಸಬಾ ತನ್ನ ಗಂಡನ ಮನೆಯನ್ನೇ ತೊರೆದಿದ್ದಾಳೆ.

ಸಬಾ ಮದುವೆಯಾಗಿ ಗಂಡನ ಮನೆಗೆ ಬಂದಾಗಿನಿಂದ ದಿನ ಮೊಬೈಲ್‌ ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಳು. ಫೇಸ್‌ ಬುಕ್‌ ಹಾಗೂ ಇನ್ಸ್ಟಾಗ್ರಾಮ್‌ ನ್ನು ಹೆಚ್ಚಾಗಿ ಬಳಸುತ್ತಿದ್ದ ಸೊಸೆಯನ್ನು ಅತ್ತೆ ನೋಡುವಾಗ ಕೆಂಡಾಮಂಡಲರಾಗುತ್ತಿದ್ದರು. ಅತ್ತೆ ಸಬಾಳಿಗೆ ಮೊಬೈಲ್‌ ಬಳಸಬೇಡ ಎಂದು ಹೇಳುತ್ತಿದ್ದರು.

ಇದನ್ನೂ ಓದಿ:  Richest Person: ಅರ್ನಾಲ್ಟ್ ಹಿಂದಿಕ್ಕಿ ವಿಶ್ವದ ಶ್ರೀಮಂತ ಉದ್ಯಮಿಯಾದ ಎಲಾನ್ ಮಸ್ಕ್

ಇದೇ ವಿಚಾರವಾಗಿ ಗಂಡ ಇಲಿಯಾಸ್‌ ಕೂಡ ತನ್ನ ಪತ್ನಿ ಸಬಾಳಿಗೆ ಜೋರು ಮಾಡಿ ಬುದ್ದಿವಾದ ಹೇಳಿದ್ದಾನೆ. ಇದರಿಂದ ಸಿಟ್ಟಾದ ಸಬಾ ಈ ವಿಚಾರವನ್ನು ತನ್ನ ಸಹೋದರನಿಗೆ ಹೇಳಿದ್ದಾಳೆ. ಸಹೋದರ ತಂಗಿಯ ಮನೆಗೆ ಬಂದು ಇಲಿಯಾಸ್‌ ಅವರ ಹಣೆಗೆ ಗನ್‌ ತೋರಿಸಿದ್ದಾರೆ. ಇಬ್ಬರ ನಡುವೆ ಜಗಳ ಉಂಟಾಗಿದೆ.

Advertisement

ಈ ಬಗ್ಗೆ ಇಲಿಯಾಸ್‌ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಆ ಬಳಿಕ ಸಬಾಳ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.

ಎರಡೂ ಮನೆಯವರನ್ನು ಪೊಲೀಸರು ಠಾಣೆಗೆ ಕರೆಸಿ ಸಮಸ್ಯೆಯನ್ನು ಆಲಿಸಿದ್ದಾರೆ. ತನ್ನ ಮಗಳ ಮೊಬೈಲ್ ಫೋನ್ ನ್ನು ಆಕೆಯ ಮನೆಯವರು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ, ಅವರು ತಮ್ಮ ಕುಟುಂಬದೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಸಬಾ ಅವರ ತಾಯಿ ರಜಿಯಾ ಖಾನ್ ಹೇಳಿದ್ದಾರೆ.

ತಾನು ಗಂಡ ಹಾಗೂ ಅತ್ತೆಯಿಂದ ದೂರವಾಗುವುದಾಗಿ ಪೊಲೀಸರಿಗೆ ಸಬಾ ಹೇಳಿದ್ದಾಳೆ. ಸದ್ಯ ಗಂಡನನ್ನು ತೊರೆದು ಸಬಾ ಪೋಷಕರೊಂದಿಗೆ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next