Advertisement
ಮಾ. 25 ರಂದು ನಲಸೋಪರ ಪಶ್ಚಿಮದ ಗ್ಯಾಲಕ್ಸಿ ಸಭಾಂಗಣದಲ್ಲಿ ನಲಸೋಪರ ಪರಿಸರದಲ್ಲಿ ನೆಲೆಸಿರುವ ತುಳುವರನ್ನು ಒಟ್ಟುಗೊಡಿಸಲು ಸ್ಥಾಪನೆಯಾದ ತುಳುಕೂಟ ನಲಸೋಪರ ಸಂಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಶುಭಹಾರೈಸಿದರು.
Related Articles
Advertisement
ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ, ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್, ಮಣಿಕಂಠ ಸೇವಾ ಸಮಿತಿ ವಸಾಯಿ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ ಅವರು ಮಾತನಾಡಿ ನೂತನ ಸಂಸ್ಥೆಗೆ ಶುಭಹಾರೈಸಿದರು. ಸಮಾರಂಭದ ವೇದಿಕೆಯಲ್ಲಿ ಅತಿಥಿಗಳಾಗಿ ಉದ್ಯಮಿ, ಸಮಾಜ ಸೇವಕ ಪ್ರವೀಣ್ ಶೆಟ್ಟಿ, ಉದ್ಯಮಿ ಮಂಜುನಾಥ ಶೆಟ್ಟಿ ವಸಾಯಿ, ರಜಕ ಸಂಘ ಮೀರಾರೋಡ್-ವಿರಾರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ದೇವೇಂದ್ರ ಬುನ್ನನ್, ತುಳುಕೂಟ ನಲಸೋಪರ ಸಂಸ್ಥೆಯ ಪದಾಧಿಕಾರಿಗಳಾದ ಸಂಸ್ಥೆಯ ಉಪಾಧ್ಯಕ್ಷ ಗಣೇಶ್ ವಿ. ಸುವರ್ಣ, ಕಾರ್ಯದರ್ಶಿ ಜಗನ್ನಾಥ ಡಿ. ಶೆಟ್ಟಿ, ಕೋಶಾಧಿಕಾರಿ ಸುರೇಂದ್ರ ಜೆ. ಶೆಟ್ಟಿ, ಜತೆ ಕಾರ್ಯದರ್ಶಿ ಯಶವಂತ್ ಸಾಲ್ಯಾನ್, ಜತೆ ಕೋಶಾಧಿಕಾರಿ ದಿವಾಕರ ಶೆಟ್ಟಿ ನಿಟ್ಟೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ತಾರನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿ ಕೆ. ಚೌಟ ಮೊದಲಾದವರು ಉಪಸ್ಥಿತರಿದ್ದರು. ಪ್ರವೀಣ್ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್ ಸುವರ್ಣ ವಂದಿಸಿದರು. ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳುಕೂಟದ ಸದಸ್ಯ ಬಾಂಧವರಿಂದ ನೃತ್ಯ ವೈವಿಧ್ಯ ನಡೆಯಿತು.ಕೊನೆಯಲ್ಲಿ ನಾಗರಾಜ ಗುರುಪುರ ರಚಿಸಿ, ರಹೀಂ ಸಚ್ಚರಿಪೇಟೆ ನಿರ್ದೇಶನದಲ್ಲಿ ಎಂಕ್ ಪುರೊÕತ್ತಿಜ್ಜಿ ತುಳು ನಾಟಕ ಪ್ರದರ್ಶನಗೊಂಡಿತು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಲಘು ಉಪಾಹಾರ ಮತ್ತು ಕೊನೆಯಲ್ಲಿ ಭೋಜನದ ವ್ಯವಸೆœಯನ್ನು ಆಯೋಜಿಸಲಾಗಿತ್ತು. ತುಳುಕೂಟ ನಲಸೋಪರ ಸ್ಥಾಪನೆಯ ಬಗ್ಗೆ ಹಲವು ವರ್ಷಗಳ ಹಿಂದೆಯೇ ಕನಸು ಕಂಡವರು ನಾವು. ನಮ್ಮ ಈ ಕನಸು ಇದೀಗ ನನಸಾದಂತಾಗಿದೆ. ಸಾವಿರಾರು ತುಳುವರ ಉಪಸ್ಥಿತಿಯಲ್ಲಿ ಸಂಸ್ಥೆಗೆ ಚಾಲನೆ ದೊರೆತಿರುವುದು ಬಹಳ ಸಂತೋಷ ತಂದಿದೆ. ಈ ಪರಿಸರದಲ್ಲಿ ಅಪಾರ ಸಂಖ್ಯೆಯಲ್ಲಿ ತುಳುವರು ನೆಲೆಸಿದ್ದು, ಅವರ ಅಶೋತ್ತರಗಳಿಗೆ ಸ್ಪಂದಿ ಸುವ ಉದ್ಧೇಶವನ್ನು ಸಂಸ್ಥೆಯು ಹೊಂದಿದೆ. ಎಲ್ಲಾ ತುಳುವರು ಸಂಸ್ಥೆಯ ಸದಸ್ಯತನವನ್ನು ಪಡೆದು ಸಂಘ ಟನೆಯ ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ರೀತಿಯ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡದೆ ತುಳುವರ ಸೇವೆಗೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಮುಂದಾಗಬೇಕು. ಸಂಸ್ಥೆಯಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಸ್ಥೆಯನ್ನು ಬೆಳೆಸೋಣ
ಶಶಿಧರ ಕೆ. ಶೆಟ್ಟಿ (ಸಂಸ್ಥೆ ಸ್ಥಾಪನೆಯ ರೂವಾರಿ).