Advertisement

Tata Motors ನೂತನ ಸುಧಾರಿತ ಟಾಟಾ ನೆಕ್ಸಾನ್‌, ನೆಕ್ಸಾನ್‌ ಇವಿ ಮಾರುಕಟ್ಟೆಗೆ

10:09 PM Sep 23, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಟಾಟಾ ಕಂಪನಿಯ ಅಧಿಕೃತ ಡೀಲರ್‌ ಆಗಿರುವ ಅಟೋಮ್ಯಾಟ್ರಿಕ್ಸ್‌ ಮಂಗಳೂರು ಹಾಗೂ ಉಡುಪಿ ಮಾರುಕಟ್ಟೆಗೆ ನೂತನ ಟಾಟಾ ನೆಕ್ಸಾನ್‌ ಹಾಗೂ ನೆಕ್ಸಾನ್‌ ಇವಿ 3.0 ವಾಹನಗಳನ್ನು ಬಿಡುಗಡೆ ಮಾಡಿದೆ.

Advertisement

ಮಂಗಳೂರಿನ ಅಟೊಮ್ಯಾಟ್ರಿಕ್ಸ್‌ ಮಳಿಗೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ನೂತನ ವಾಹನಗಳನ್ನು ಟಾಟಾ ಗ್ರಾಹಕರಾದ ವ್ಯಾಪಾರಿ ವರದರಾಜ ಶೆಣೈ, ಕಂಟೆಂಟ್‌ ಕ್ರಿಯೇಟರ್‌ಗಳಾದ ಶರಣ್‌ ಚಿಲಿಂಬಿ, ಪ್ರಿಯಾ ಮೋನಿಕಾ ಡಿ’ಸೋಜ ಅವರು ಬಿಡುಗಡೆಗೊಳಿಸಿದರು. ಟಾಟಾ ವಾಹನಗಳ ಉನ್ನತ ಮಟ್ಟದ ಸುರಕ್ಷತಾ ರೇಟಿಂಗ್‌,ವೈಶಿಷ್ಟ್ಯಗಳು, ಚಾಲನೆಯ ಸುಖದ ಬಗ್ಗೆ ಅವರು ಶ್ಲಾಘನೆ ವ್ಯಕ್ತಪಡಿಸಿದರು. ಈ ವೇಳೆ ಅಟೊಮ್ಯಾಟ್ರಿಕ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್‌ ಮಯ್ಯ ಉಪಸ್ಥಿತರಿದ್ದರು. ಟಾಟಾ ಮೋಟಾರ್ಸ್‌ ವಿಠಲದಾಸ್‌ ಅವರು ನೂತನ ವಾಹನಗಳ ವೈಶಿಷ್ಟ್ಯಗಳನ್ನು ಪರಿಚಯಿಸಿದರು.

ಟಾಟಾ ನೆಕ್ಸಾನ್‌
2017ರಲ್ಲಿ ಬಿಡುಗಡೆಯಾಗಿದ್ದ ನೆಕ್ಸಾನ್‌ 2020ರಲ್ಲಿ ಸುಧಾರಣೆ ಕಂಡಿತ್ತು. ಪ್ರಸ್ತುತ ದೇಶದಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಎಸ್‌ಯುವಿ ಎನಿಸಿರುವ ನೆಕ್ಸಾನ್‌ ಈಗ ಆಲ್‌ ನ್ಯೂ ನೆಕ್ಸಾನ್‌ ಮತ್ತು ನೆಕ್ಸಾನ್‌ ಇವಿ ಸುಧಾರಿತ ಆವೃತ್ತಿಗಳೊಂದಿಗೆ ಉನ್ನತ ವೈಶಿಷ್ಟ್ಯ ಗಳು ಹಾಗೂ ಪರಿಚಯಾತ್ಮಕ ಎಕ್ಸ್‌-ಶೋರೂಂ ದರವಾದ 8.09 ಲಕ್ಷ ರೂ(ಪೆಟ್ರೋಲ್‌).ಗಳೊಂದಿಗೆ ಬಂದಿದೆ.

ಇಂಪಾಕ್ಟ್ 3.0 ವಿನ್ಯಾಸವು ಸಮಕಾಲೀನ ವಿನ್ಯಾಸ, ಆಕರ್ಷಕ ಒಳಾಂಗಣ ಹೊಂದಿದ್ದು ಗಮನಸೆಳೆಯುವ ಮುಂಭಾಗದ ಗ್ರಿಲ್‌, ಬೈ ಎಲ್‌ಇಡಿ ಹೆಡ್‌ಲೈಟ್‌, ಏರೋಡೈನಾಮಿಕ್‌ ಆಗಿ ವಿನ್ಯಾಸವಿರುವ ಬಂಪರ್‌, ಆಲಾಯ್‌ ವೀಲ್‌, ಎಲ್‌ಇಡಿ ಟೈಲ್‌ಲೈಟ್‌ನೊಂದಿಗೆ ಸಂಪೂರ್ಣ ನವೀಕರಿಸಲಾಗಿರುವ ಎಕ್ಸ್‌ ಫ್ಯಾಕ್ಟರ್‌ ಶೈಲಿಯ ಹಿಂಭಾಗ, ಸ್ವಾಗತ ಹಾಗೂ ವಿದಾಯ ಕೋರುವ ವಿನ್ಯಾಸದ ಭಾಷೆಯನ್ನೂ ಹೊಂದಿದೆ.

10.25 ಇಂಚ್‌ ಅಲ್ಟಾ ಎಚ್‌ಡಿ ಟಚ್‌ ಸ್ಕ್ರೀನ್ ಸಿನೆಮಾಟಿಕ್‌ ಇನ್ಫೊಟೈನ್‌ಮೆಂಟ್‌ ವ್ಯವಸ್ಥೆ, ಫ್ಯೂಚರಿಸ್ಟಿಕ್‌ ಇನ್ಫೊಟೈನ್‌ಮೆಂಟ್‌ ಸಿಸ್ಟಂ ಜೊತೆ 3ಡಿ ನೇವಿಗೇಶನ್‌ ಸಿಸ್ಟಂ, ಸನ್‌ರೂಫ್‌, ವೈರ್‌ಲೆಸ್‌ ಚಾರ್ಜರ್‌, 360 ಡಿಗ್ರಿ ಕ್ಯಾಮೆರಾ ಸಿಸ್ಟಂ ಹೊಂದಿದೆ. 1.2 ಲೀಟರ್‌ ಟಬೋ ಚಾರ್ಜ್‌ಡ್‌ ಪೆಟ್ರೋಲ್‌ ಇಂಜಿನ್‌ 6 ಸ್ಪೀಡ್‌ನ‌ ಮ್ಯಾನ್ಯುವಲ್‌ ಅಥವಾ 7 ಸ್ಪೀಡ್‌ನ‌ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಹೊಂದಿದೆ. 6 ಏರ್‌ಬ್ಯಾಗ್‌, ಎಬಿಎಸ್‌ ವಿತ್‌ ಇಬಿಡಿ, ಇಎಸ್‌ಪಿ ಹೊಂದಿದ್ದು ಸುರಕ್ಷಿತವಾಗಿದೆ.

Advertisement

ಜೆನ್‌-2 ಮೋಟಾರ್‌ನೊಂದಿಗೆ ಬಂದಿರುವ ನೆಕ್ಸಾನ್‌ ಇವಿ ಒಂದು ಚಾರ್ಜ್‌ನಲ್ಲಿ 456 ಕಿ.ಮೀ ವರೆಗೂ ಸಂಚರಿಸುವ ಕ್ಷಮತೆ ಹೊಂದಿದ್ದು ವೆಹಿಕಲ್‌-ಟು-ವೆಹಿಕಲ್‌ ಚಾರ್ಜಿಂಗ್‌, ವಿ2ಎಲ್‌ ಟೆಕ್ನಾಲಜಿ, ಆರ್ಕೇಡ್‌ ಇವಿ ಆ್ಯಪ್‌ ಸುಟ್‌, ಪ್ಯಾಡಲ್‌ ಶಿಫ್ಟರ್, ಮಲ್ಟಿ ಡ್ರೈವ್‌ ಮೋಡ್‌ಗಳನ್ನು ಹೊಂದಿದೆ. ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಲಿಕ್ವಿಡ್‌ ಕೂಲ್ಡ್‌ ಬ್ಯಾಟರಿ ಪ್ಯಾಕ್‌ ಇದರ ವೈಶಿಷ್ಟ್ಯ.

ಹೆಚ್ಚಿನ ಮಾಹಿತಿಗಾಗಿ ಬಿಜೈ ಮಂಗಳೂರು, ಉಡುಪಿ ಗುಂಡಿಬೈಲ್‌, ಪುತ್ತೂರು ಬೊಳುವಾರು, ಸುರತ್ಕಲ್‌, ಬಿ.ಸಿ.ರೋಡ್‌ನ‌ಲ್ಲಿರುವ ಅಟೊಮ್ಯಾಟ್ರಿಕ್ಸ್‌ ಶೋರೂಂಗಳನ್ನು ಸಂದರ್ಶಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next