Advertisement

ಪ್ಲಾಸ್ಟಿಕ್ ನಲ್ಲಿ ಸುತ್ತಿದ್ದ ನವಜಾತ ಹೆಣ್ಣು ಶಿಶು ರಸ್ತೆಯಲ್ಲಿ ಪತ್ತೆ

09:53 AM Sep 17, 2019 | keerthan |

ಮೈಸೂರು: ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ನವಜಾತ ಹೆಣ್ಣು ಶಿಶುವೊಂದನ್ನು ರಸ್ತೆಯಲ್ಲಿ ಬಿಸಾಡಿ ಹೋದ ಅಮಾನವೀಯ ಘಟನೆ ಸೋಮವಾರ ಬೆಳಿಗ್ಗೆ ಮೈಸೂರು ನಗರದ ಶ್ರೀರಾಮಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

Advertisement

ಮುಖ್ಯರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಮಗುವನ್ನು ಬಿಸಾಡಿ ಹೋಗಿದ್ದು, ಬೆಳಿಗಿನ ಜಾವ ದಾರಿಹೋಕರು ಸಾಗುತ್ತಿದ್ದಾಗ ಮಾರ್ಗದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕವರ್ ಪರಿಶೀಲಿಸಿದಾಗ ನವಜಾತ ಶಿಶುವಿರುವುದು ತಿಳಿದು ಬಂದಿದೆ.

ಕುವೆಂಪುನಗರ ಪೊಲೀಸ್ ಠಾಣೆಗೆ ಮಾಹಿತಿ ಮಾಹಿತಿ ನೀಡಿದ್ದು, ಧಪೇದಾರ್ ಸುಂದರಿ ಅವರು ಸ್ಥಳಕ್ಕೆ ತೆರಳಿ ಶಿಶುವನ್ನು ಪರೀಕ್ಷಿಸಿ ಚೆಲುವಾಂಬಾ ಆಸ್ಪತ್ರೆಗೆ ಕರೆ ತಂದಿದ್ದಾರೆ. ಶಿಶು ಆರೋಗ್ಯವಾಗಿದ್ದು, ಚೆಲುಂವಾಬ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ಇರಿಸಲಾಗಿದೆ.

ಹೆಣ್ಣು ಮಗು ಎಂಬ ಕಾರಣಕ್ಕೆ ಈ ರೀತಿ ಹೃದಯ ಹೀನ ಕೃತ್ಯ ಮಾಡಿದ್ದಾರಾ? ಅಥವಾ ಪ್ರೀತಿಯ ಬಲೆಯಲ್ಲಿ ಸಿಲುಕಿ ಈ ಅವಸ್ಥೆ ತಂದು ಕೊಂಡವರದ್ದಾ, ಅಥವಾ ಅಪ್ರಾಪ್ತರದ್ದಾ? ಎಂಬ ಅನುಮಾನದ ಮಾತುಗಳು ಪರಿಸರದಲ್ಲಿ ಕೇಳಿ ಬರುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next