Advertisement

ವಾರಣಾಸಿ: ನವಜಾತ ಶಿಶುವಿಗೆ ಕೋವಿಡ್ 19 ಪಾಸಿಟಿವ್, ತಾಯಿಗೆ ಕೋವಿಡ್ ನೆಗೆಟಿವ್…

12:20 PM May 29, 2021 | Team Udayavani |

ವಾರಣಾಸಿ:ಹೆರಿಗೆಗೂ ಮೊದಲು ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ ತಾಯಿಗೆ ನೆಗೆಟಿವ್ ವರದಿ ಬಂದಿದ್ದು, ಹೆರಿಗೆ ನಂತರ ನವಜಾತ ಶಿಶುವಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಬಂದಿರುವ ಘಟನೆ ಬನಾರಸ್ ಹಿಂದೂ ಯೂನಿರ್ವಸಿಟಿಯ ಸರ್ ಸುಂದರ್ ಲಾಲ್ ಆಸ್ಪತ್ರೆಯಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಬ್ರೇಕ್ ಫಾಸ್ಟ್ ಬಿಲ್ ನಲ್ಲಿ ಅಕ್ರಮ ಶಂಕೆ: ಫಿನ್ ಲ್ಯಾಂಡ್ ಪ್ರಧಾನಿ ವಿರುದ್ಧ ತನಿಖೆ ಆರಂಭ!

ವೈದ್ಯಕೀಯ ಅಧೀಕ್ಷಕ ಡಾ.ಕೌಶನ್ ಕುಮಾರ್ ಗುಪ್ತಾ ಅವರ ಪ್ರಕಾರ, ಮೇ 24ರಂದು ಹೆರಿಗೆಗೆ ಮೊದಲು ತಾಯಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿತ್ತು. ಮರುದಿನ ಆಕೆ ಹೆಣ್ಣು ಮಗುವಿಗೆ ಜನ್ಮನೀಡಿದ್ದು, ಆ ಶಿಶುವನ್ನು ಪರೀಕ್ಷಿಸಿದಾಗ ಕೋವಿಡ್ ಪಾಸಿಟಿವ್ ಇದ್ದಿರುವುದು ದೃಢಪಟ್ಟಿತ್ತು ಎಂದು ತಿಳಿಸಿದ್ದಾರೆ.

ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿಯೂ ಕೆಲವು ನ್ಯೂನತೆಗಳಿರುವುದಾಗಿ ಡಾ. ಗುಪ್ತಾ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ತಾಯಿ ಆರೋಗ್ಯವಾಗಿದ್ದು, ಮಗುವಿಗೆ ಚಿಕಿತ್ಸೆ ನೀಡುವ ಬಗ್ಗೆ ಸಮಾಲೋಚನೆ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next