Advertisement
ನವಜಾತ ಶಿಶುಗಳ ಶ್ರವಣ ಪರೀಕ್ಷೆ ಅನ್ನುವುದು ನಿಮ್ಮ ಮಗುವಿಗೆ ಸರಿಯಾಗಿ ಕಿ ವಿ ಕೇಳಿಸುತ್ತಿದೆಯೇ ಇಲ್ಲವೇ ಅನ್ನುವುದನ್ನು ದೃಢಪಡಿಸುವ ಒಂದು ತಪಾಸಣಾ ವಿಧಾನ. ಯೂನಿವರ್ಸಲ್ ನಿಯೋನೇಟಲ್ ಹಿಯರಿಂಗ್ ಸ್ಕ್ರೀನಿಂಗ್ (UNHs) ಎಂಬುದು ಮಕ್ಕಳಲ್ಲಿನ ಜನ್ಮಜಾತ ಕಿವುಡುತನವನ್ನು ಆರಂಭದಲ್ಲೇ ಪತ್ತೆ ಮಾಡುವ ಒಂದು ಕಾರ್ಯ ವಿಧಾನ. ಮಗುವಿನ ಕಿವಿಯ ಒಂದು ನಿರ್ದಿಷ್ಟ ಕ್ಷೇತ್ರದ ಶ್ರವಣಶಕ್ತಿಯನ್ನು ಪರೀಕ್ಷಿಸಲು ಬಳಸುವ ಅಬೆjಕ್ಟಿವ್ ವಿಧಾನಗಳನ್ನು (ಸಾಮಾನ್ಯವಾಗಿ ಓಟೋ ಅಕೌಸ್ಟಿಕ್ ಎಮಿಷನ್, OAE ಅಥವಾ ಆಡಿಟರಿ ಬ್ರೆ„ನ್ಸೆಮ್ ರೆಸ್ಪಾನ್ಸಸ್, ABR) ಅದು ವಿವರಿಸುತ್ತದೆ. ನುರಿತ ಶ್ರವಣ ತಜ್ಞರು ಈ ಪರೀಕ್ಷೆಯನ್ನು ನಡೆಸುತ್ತಾರೆ.
Related Articles
Advertisement
ಕೆಲವು ಮಕ್ಕಳಲ್ಲಿ ಹುಟ್ಟುವಾಗ ಕಿವಿ ಕೇಳುವಿಕೆಯು ಸಹಜವಾಗಿದ್ದು, ಆ ಬಳಿಕ ಅಂದರೆ ನವಜಾತ ಶಿಶು ವಿನ ಹಂತದ ಅನಂತರ ಕಿವಿ ಕೇಳಿಸದಿರುವ ತೊಂದರೆ ಕಾಣಿಸಿಕೊಳ್ಳ ಬಹುದು. ವಿವಿಧ ಅಸ್ವಸ್ಥತೆಗಳು ಅಥವಾ ಆನುವಂಶಿಕ ಕಾರಣಗಳಿಂದಾಗಿ ಈ ಪರಿಸ್ಥಿತಿ ಬರಬಹುದು. ಮಾತ್ರವಲ್ಲದೆ, ಏಟುಗಳು ಅಥವಾ ಕಾಯಿಲೆಗಳಿಗಾಗಿ ಬಳಸುವ ಕೆಲವು ಔಷಧಿಗಳಿಂದಾಗಿ ನವಜಾತ ಶಿಶುವಿನ ಹಂತದ ಅನಂತರ ಶ್ರವಣ ನಷ್ಟ ಕಾಣಿಸಿಕೊಳ್ಳಬಹುದು. ಈ ಕಾರಣಕ್ಕಾಗಿ ಮಗು ವಿನ ಕೇಳುವಿಕೆಯ ಮಟ್ಟ ಹೇಗಿದೆ ಎಂಬುದನ್ನು ಗಮನಿಸಲು ಮತ್ತು ಮಗು ವಿನ ಕೇಳುವ ನಡವಳಿಕೆಯನ್ನು (ಆಡಿಟರಿ ಬಿಹೇ ವಿಯರ್ಸ್) ಅಂದರೆ ವಿವಿಧ ಶಬ್ದಗಳಿಗೆ ಮಗುವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ವಿವರವಾಗಿ ವಿಶ್ಲೇ ಷಿಸಲು ನಿಯ ಮಿತ ಆಡಿಯೋಲಾಜಿಕಲ್ ಪರೀಕ್ಷೆಗೆ (ಶ್ರವಣ ಪರೀಕ್ಷೆ) ಶಿಫಾರಸು ಮಾಡಲಾಗುತ್ತದೆ.
ಹಿಯರಿಂಗ್ ಸ್ಕ್ರೀನಿಂಗ್ ಅಥವಾ ಶ್ರವಣ ಪರೀಕ್ಷೆ ಎನ್ನುವುದು ಸರಳ, ಸುರಕ್ಷಿತ ಮತ್ತು ನೋವು ರಹಿತ ಪರೀಕ್ಷೆ ಆಗಿದ್ದು, ಎಲ್ಲಾ ನವಜಾತ ಶಿಶುಗಳಿಗೂ ಈ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು ಯಾಕೆಂದರೆ ಈ ಪರೀಕ್ಷೆಯು ಮಗುವಿನ ಶ್ರವಣ ನಷ್ಟವನ್ನು ಆರಂಭದಲ್ಲೇ ಪತ್ತೆ ಮಾಡುವ ಮೂಲಕ ಮಗುವಿನ ಭವಿಷ್ಯವನ್ನು ಬದಲಾಯಿಸುತ್ತದೆ.
ಯೂನಿವರ್ಸಲ್ ನಿಯೋನೇಟಲ್ ಹಿಯರಿಂಗ್ ಸ್ಕ್ರೀನಿಂಗ್‌ನ ಉದ್ದೇಶಗಳನ್ನು ಸಂಕ್ಷಿಪ್ತವಾಗಿ, 1-3-6 ಉದ್ದೇಶಗಳಾಗಿ ವಿವರಿಸಲಾಗಿದೆ
1 ತಿಂಗಳ ವಯಸ್ಸಿನಲ್ಲಿ ಸ್ಕ್ರೀನ್ ಮಾಡಬೇಕಾಗಿರುವ ಮಕ್ಕಳು. 3 ತಿಂಗಳ ವಯಸ್ಸಿನಲ್ಲಿ ಪೂರ್ಣ ಮಾಡಬೇಕಾಗಿರುವ ಆಡೊಯಾಲಾಜಿಕಲ್ ವಿಶ್ಲೇಷಣೆಗಳು. 6 ತಿಂಗಳ ಪ್ರಾಯದಲ್ಲಿ ಆರಂಭಿಸುವ ಸೂಕ್ತ ವೈದ್ಯಕೀಯ ಮತ್ತು ಆಡಿಯೋಲಾಜಿಕಲ್ ಸೇವೆಗಳು, ಆರಂಭಿಕ ಪರಿಹಾರೋಪಾಯಗಳ ಬಗ್ಗೆ ಅರಿವು ನೀಡುವ ಸೇವೆಗಳು. -ಡಾ| ಅರ್ಚನಾ ಜಿ.,
ಶ್ರವಣ ತಜ್ಞರು, ಸ್ಪೀಚ್ ಎಂಡ್ ಹಿಯರಿಂಗ್ ವಿಭಾಗ, ಡಾ| ಟಿ ಎಂ ಎ ಪೈ ಆಸ್ಪತ್ರೆ ಉಡುಪಿ ಮತ್ತು SOAHS, ಮಣಿಪಾಲ.