ಶಿವಮೊಗ್ಗ : ಸೂಕ್ತ ಸಮಯಕ್ಕೆ ಅಂಬುಲೆನ್ಸ್ ಸೇವೆ ದೊರಕದೇ ನವಜಾತ ಶಿಶು ಸಾವನ್ನಪ್ಪಿದ ದಾರುಣ ಘಟನೆ ಜಿಲ್ಲೆಯ ಸಾಗರ ತಾಲೂಕಿನ ತುಮರಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ತುಮರಿ ಸಮೀಪದ ಚದರವಳ್ಳಿಯ ಚೈತ್ರ ಎಂಬುವರ ಹೆಣ್ಣುಮಗು ಸಾವನ್ನಪ್ಪಿದ್ದು, ನಿನ್ನೆ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ವೇಳೆ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕುಟುಂಬಸ್ಥರು ಕರೆತಂದಿದ್ದರು.
ಮಾನವೀಯತೆಯಿಂದ ತುರ್ತು ಸಮಯದಲ್ಲಿ ತಡರಾತ್ರಿಯೂ ಲಾಂಚ್ ಓಡಿಸಿ ಸಿಬ್ಬಂದಿ ಆಸ್ಪತ್ರೆಗೆ ಕರೆ ತರುವಲ್ಲಿ ನೆರವಾಗಿದ್ದರು.
ಅ್ಯಂಬುಲೆನ್ಸ್ ಇಲ್ಲದೇ ಖಾಸಗಿ ವಾಹನದಲ್ಲಿ ಗರ್ಭಿಣಿಯನ್ನು ಕರೆತಂದಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ಜನ್ಮ ನೀಡಿದ್ದರು. ತಡವಾಗಿ ಬಂದಿದ್ದರಿಂದ ತಾಯಿ- ಹಾಗೂ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಸಾಗರ ತಾಲೂಕು ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಖಾಸಗಿ ವಾಹನದಲ್ಲಿ ಸಾಗರಕ್ಕೆ ತೆರಳುವ ಮಾರ್ಗ ಮಧ್ಯೆಯೇ ನವಜಾತ ಶಿಶು ಸಾವನ್ನಪ್ಪಿದೆ.
108 ಅಂಬುಲೆನ್ಸ್ ಸಮಪರ್ಕ ಸೇವೆ ನೀಡದೇ ನವಜಾತ ಶಿಶು ಬಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ತಡರಾತ್ರಿಯೂ ಲಾಂಚ್ ಸೇವೆ ಒದಗಿಸಿ ಸಹಕರಿಸಿದ್ದ ಸಿಬ್ಬಂದಿಯ ಶ್ರಮ ವ್ಯರ್ಥವಾಗಿದೆ.