Advertisement

ಗಪ್ಟಿಲ್‌ಗೆ ಗಾಯ: ಭಾರತ ವಿರುದ್ಧದ ಪಂದ್ಯಕ್ಕೆ ಅನುಮಾನ

08:58 PM Oct 27, 2021 | Team Udayavani |

ಶಾರ್ಜಾ: ನ್ಯೂಜಿಲೆಂಡಿನ ಅನುಭವಿ ಆರಂಭಕಾರ ಮಾರ್ಟಿನ್‌ ಗಪ್ಟಿಲ್‌ ಕಳೆದ ರಾತ್ರಿಯ ಪಾಕಿಸ್ತಾನ ವಿರುದ್ಧದ ಮುಖಾಮುಖಿ ವೇಳೆ ಕಾಲ್ಬೆರಳಿನ ಗಾಯಕ್ಕೆ ಸಿಲುಕಿದ್ದು, ಭಾರತದೆದುರಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.

Advertisement

ಬ್ಯಾಟಿಂಗ್‌ ವೇಳೆ ಹ್ಯಾರಿಸ್‌ ರೌಫ್ ಅವರ ಎಸೆತವೊಂದು ಗಪ್ಟಿಲ್‌ ಪಾದಕ್ಕೆ ಬಡಿದು ಈ ಘಟನೆ ಸಂಭವಿಸಿದೆ.

ಮುಂದಿನ 24ರಿಂದ 48 ಗಂಟೆಗಳ ಕಾಲ ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂಬುದಾಗಿ ನ್ಯೂಜಿಲೆಂಡ್‌ ತಂಡದ ಕೋಚ್‌ ಗ್ಯಾರಿ ಸ್ಟೆಡ್‌ ತಿಳಿಸಿದ್ದಾರೆ.

ಇದನ್ನೂ ಓದಿ:ಟಿ20 ಶ್ರೇಯಾಂಕ: ಕೊಹ್ಲಿ, ರಾಹುಲ್‌ ಕುಸಿತ

ಭಾರತ-ನ್ಯೂಜಿಲೆಂಡ್‌ ನಡುವಿನ ಪಂದ್ಯ ಭಾನುವಾರ ನಡೆಯಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ವೇಗಿ ಲಾಕಿ ಫ‌ರ್ಗ್ಯುಸನ್‌ ಗಾಯಾಳಾಗಿ ಹೊರಬಿದ್ದ ಬೆನ್ನಲ್ಲೇ ನ್ಯೂಜಿಲೆಂಡಿಗೆ ಎದುರಾದ ದೊಡ್ಡ ಆಘಾತ ಇದಾಗಿದೆ. ಫ‌ರ್ಗ್ಯುಸನ್‌ ಬದಲು ಆಡಮ್​ ಮಿಲ್ನೆ ಅವರನ್ನು ಸೇರಿಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next