Advertisement

ಟಿ20 ಪಂದ್ಯವನ್ನೂ ಗೆದ್ದ ನ್ಯೂಜಿಲ್ಯಾಂಡ್‌

12:45 AM Jan 12, 2019 | Team Udayavani |

ಆಕ್ಲೆಂಡ್‌: ಪ್ರವಾಸಿ ಶ್ರೀಲಂಕಾ ವಿರುದ್ಧದ ಏಕೈಕ ಟಿ20 ಪಂದ್ಯ ನ್ಯೂಜಿಲ್ಯಾಂಡ್‌ ಪಾಲಾಗಿದೆ. ಶುಕ್ರವಾರ ಆಕ್ಲೆಂಡ್‌ನ‌ಲ್ಲಿ ನಡೆದ ಮುಖಾಮುಖೀಯಲ್ಲಿ ಕಿವೀಸ್‌ 35 ರನ್ನುಗಳ ಜಯ ಸಾಧಿಸಿತು.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್‌ 7 ವಿಕೆಟಿಗೆ 179 ರನ್‌ ಪೇರಿಸಿ ಸವಾಲೊಡ್ಡಿದರೆ, ಭರ್ಜರಿಯಾಗಿಯೇ ಚೇಸಿಂಗ್‌ ನಡೆಸಿದ ಶ್ರೀಲಂಕಾ 16.5 ಓವರ್‌ಗಳಲ್ಲಿ 144ಕ್ಕೆ ಆಲೌಟ್‌ ಆಯಿತು. 12 ಓವರ್‌ಗಳಲ್ಲಿ 118 ರನ್‌ ಪೇರಿಸುವ ಮೂಲಕ ಲಂಕಾ ಉತ್ತಮ ರನ್‌ರೇಟ್‌ ಕಾಯ್ದುಕೊಂಡಿತ್ತು. ಆದರೆ ಕೊನೆಯ 6 ವಿಕೆಟ್‌ಗಳನ್ನು ಕೇವಲ 26 ರನ್‌ ಅಂತರದಲ್ಲಿ ಕಳೆದುಕೊಂಡು ಶರಣಾಯಿತು.

ಇದಕ್ಕೂ ಮೊದಲು ನಡೆದ 3 ಪಂದ್ಯಗಳ ಏಕದಿನ ಸರಣಿಯನ್ನು ನ್ಯೂಜಿಲ್ಯಾಂಡ್‌ ಕ್ಲೀನ್‌ಸಿÌàಪ್‌ ಆಗಿ ತನ್ನದಾಗಿಸಿಕೊಂಡಿತ್ತು. ಟೆಸ್ಟ್‌ ಸರಣಿ 1-1ರಿಂದ ಡ್ರಾ ಆಗಿತ್ತು.

55 ರನ್ನಿಗೆ ಉರುಳಿತ್ತು 5 ವಿಕೆಟ್‌
ಮರಳಿ ತಂಡವನ್ನು ಸೇರಿಕೊಂಡ ಡಗ್‌ ಬ್ರೇಸ್‌ವೆಲ್‌ ಮತ್ತು ಮೊದಲ ಪಂದ್ಯವಾಡಿದ ಸ್ಕಾಟ್‌ ಕ್ಯುಗೆಲೀನ್‌ ಸೇರಿಕೊಂಡು ಕುಸಿದ ನ್ಯೂಜಿಲ್ಯಾಂಡನ್ನು ಹೋರಾಟಕ್ಕೆ ಅಣಿಗೊಳಿಸಿದರು. ತಂಡ 55ಕ್ಕೆ 5 ವಿಕೆಟ್‌ ಕಳೆದುಕೊಂಡು ಪರದಾಡುತ್ತಿದ್ದಾಗ ಈ ಬೌಲರ್‌ಗಳಿಬ್ಬರು ಸೇರಿ ಬ್ಯಾಟಿಂಗ್‌ ಪರಾಕ್ರಮ ಮೆರೆದದ್ದು ವಿಶೇಷವಾಗಿತ್ತು.

ಬ್ರೇಸ್‌ವೆಲ್‌ 26 ಎಸೆತಗಳಿಂದ ಪಂದ್ಯದಲ್ಲೇ ಸರ್ವಾಧಿಕ 44 ರನ್‌ ಹೊಡೆದರೆ (1 ಬೌಂಡರಿ, 5 ಸಿಕ್ಸರ್‌), ಕ್ಯುಗೆಲೀನ್‌ 15 ಎಸೆತ ಎದುರಿಸಿ ಅಜೇಯ 35 ರನ್‌ ಸಿಡಿಸಿದರು (1 ಬೌಂಡರಿ, 4 ಸಿಕ್ಸರ್‌). ಟಯ್ಲರ್‌ 33 ರನ್‌ ಮಾಡಿದರು.
ಶ್ರೀಲಂಕಾ ಸರದಿಯಲ್ಲಿ 43 ರನ್‌ ಮಾಡಿದ ತಿಸರ ಪೆರೆರ ಅವರದೇ ಅಧಿಕ ಗಳಿಕೆ. ಕಾಲಂ ಫ‌ರ್ಗ್ಯುಸನ್‌ 21 ರನ್ನಿತ್ತು 3 ವಿಕೆಟ್‌ ಉರುಳಿಸಿದರು.

Advertisement

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-7 ವಿಕೆಟಿಗೆ 179 (ಬ್ರೇಸ್‌ವೆಲ್‌ 44, ಕ್ಯುಗೆಲೀನ್‌ ಔಟಾಗದೆ 35, ಟಯ್ಲರ್‌ 33, ರಜಿತ 44ಕ್ಕೆ 3, ಮಾಲಿಂಗ 24ಕ್ಕೆ 2). ಶ್ರೀಲಂಕಾ-16.5 ಓವರ್‌ಗಳಲ್ಲಿ 144 (ಪೆರೆರ 43, ಫ‌ರ್ಗ್ಯುಸನ್‌ 21ಕ್ಕೆ 3). ಪಂದ್ಯಶ್ರೇಷ್ಠ: ಡಗ್‌ ಬ್ರೇಸ್‌ವೆಲ್‌.

Advertisement

Udayavani is now on Telegram. Click here to join our channel and stay updated with the latest news.

Next