Advertisement

T20; ನ್ಯೂಜಿಲ್ಯಾಂಡ್ ನಲ್ಲಿ ಮೊದಲ ಟಿ 20 ಗೆಲುವು ಸಾಧಿಸಿದ ಬಾಂಗ್ಲಾದೇಶ

04:45 PM Dec 27, 2023 | Team Udayavani |

ನೇಪಿಯರ್ : ಕೆಲವು ದಿನಗಳ ಹಿಂದಷ್ಟೇ ನ್ಯೂಜಿಲ್ಯಾಂಡ್ ನಲ್ಲಿ ತಮ್ಮ ಮೊದಲ ಏಕದಿನ ಪಂದ್ಯದ ಗೆಲುವನ್ನು ಸಾಧಿಸಿದ್ದ ಬಾಂಗ್ಲಾದೇಶ ತಂಡ ತಮ್ಮ ಮೊದಲ ಟಿ 20 ಗೆಲುವನ್ನು ಬುಧವಾರ ದಾಖಲಿಸಿದೆ.

Advertisement

3 ಟಿ 20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡು ನ್ಯೂಜಿಲ್ಯಾಂಡ್ ತಂಡದ 9 ವಿಕೆಟ್ ಗಳನ್ನು ಕಿತ್ತು 134 ರನ್ ಗಳಿಗೆ ನಿಯಂತ್ರಿಸಿತು. ಬಿಗಿ ದಾಳಿ ನಡೆಸಿದ ಮಹೇದಿ ಹಸನ್ 2 ವಿಕೆಟ್ ಕಿತ್ತರು. ಶೋರಿಫುಲ್ ಇಸ್ಲಾಂ3, ಮುಸ್ತಫಿಜುರ್ 2, ತಂಜಿಮ್ ಹಸನ್ ಸಾಕಿಬ್ ಮತ್ತು ರಿಶಾದ್ ಹೊಸೈನ್ ತಲಾ 1 ವಿಕೆಟ್ ಕಿತ್ತರು. ನ್ಯೂಜಿಲ್ಯಾಂಡ್ ಪರ ನೀಶಮ್ 48 ರನ್ ಮತ್ತು ನಾಯಕ ಸ್ಯಾಂಟ್ನರ್ 23 ಗರಿಷ್ಠ ಸ್ಕೋರ್.

ಗುರಿ ಬೆನ್ನಟ್ಟಿದ ಬಾಂಗ್ಲಾ 18.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿ ಸುಲಭ ಜಯ ಗಳಿಸಿತು. ಲಿಟ್ಟನ್ ದಾಸ್ ಔಟಾಗದೆ 42, ಮಹೇದಿ ಹಸನ್ ಔಟಾಗದೆ 19 ರನ್ ಗಳಿಸಿ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಮಹೇದಿ ಹಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Advertisement

Udayavani is now on Telegram. Click here to join our channel and stay updated with the latest news.

Next