Advertisement

ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ಹಿಂದೆ ಸರಿದ ನ್ಯೂಜಿಲ್ಯಾಂಡ್‌

07:34 PM Nov 18, 2021 | Team Udayavani |

ವೆಲ್ಲಿಂಗ್ಟನ್‌: ಮುಂದಿನ ವರ್ಷ ವೆಸ್ಟ್‌ ಇಂಡೀಸ್‌ನಲ್ಲಿ ಆಡಲಾಗುವ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಿಂದ ನ್ಯೂಜಿಲ್ಯಾಂಡ್‌ ಹಿಂದೆ ಸರಿದಿದೆ. ಕೂಟ ಮುಗಿಸಿ ಬಂದ ಬಳಿಕ ಯುವ ಕ್ರಿಕೆಟಿಗರು ತವರಲ್ಲಿ ಕಠಿನ ಕ್ವಾರಂಟೈನ್‌ ನಿಯಮ ಪಾಲಿಸಬೇಕಾದುದೇ ಇದಕ್ಕೆ ಕಾರಣ.

Advertisement

ನ್ಯೂಜಿಲ್ಯಾಂಡ್‌ ಸ್ಥಾನಕ್ಕೆ ಐಸಿಸಿ ಬದಲಿ ತಂಡವನ್ನು ಪ್ರಕಟಿಸಿದ್ದು, ಈ ಅದೃಷ್ಟ ಸ್ಕಾಟ್ಲೆಂಡ್‌ ಪಾಲಾಗಿದೆ. ಅದು ಆತಿಥೇಯ ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯ ಮತ್ತು ಶ್ರೀಲಂಕಾವನ್ನು ಒಳಗೊಂಡ  ಡಿ’ ವಿಭಾಗದಲ್ಲಿ ಸ್ಥಾನ ಪಡೆದಿದೆ. 4 ಬಾರಿಯ ಚಾಂಪಿಯನ್‌ ಭಾರತ  ಬಿ’ ವಿಭಾಗದಲ್ಲಿದೆ. ಇಲ್ಲಿನ ಉಳಿದ ತಂಡಗಳೆಂದರೆ ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಮತ್ತು ಉಗಾಂಡ.

2022ರ ಜ. 14ರಿಂದ ಫೆ. 5ರ ತನಕ ಕೆರಿಬಿಯನ್‌ ದ್ವೀಪಗಳ 10 ತಾಣಗಳಲ್ಲಿ ಈ ಟೂರ್ನಿ ನಡೆಯಲಿದೆ. ಮೊದಲ ಸಲ ಅತ್ಯಧಿಕ 16 ತಂಡಗಳು ಪಾಲ್ಗೊಳ್ಳುತ್ತಿರುವುದು ವಿಶೇಷ. 14 ಆವೃತ್ತಿಗಳ ಇತಿಹಾಸಲ್ಲಿ ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುವ ಮೊದಲ ಅಂಡರ್‌-19 ವಿಶ್ವಕಪ್‌ ಪಂದ್ಯಾವಳಿ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next