Advertisement

ಸೋಲನ್ನು ಅಂತಿಮ ದಿನಕ್ಕೆ ಮುಂದೂಡಿದ ಶ್ರೀಲಂಕಾ

12:30 AM Dec 30, 2018 | Team Udayavani |

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ಎದುರಿನ ಕ್ರೈಸ್ಟ್‌ಚರ್ಚ್‌ ಟೆಸ್ಟ್‌ ಪಂದ್ಯದಲ್ಲಿ ಗೆಲುವಿಗೆ 660 ರನ್ನುಗಳ ಬೃಹತ್‌ ಗುರಿ ಪಡೆದಿರುವ ಶ್ರೀಲಂಕಾ, 4ನೇ ದಿನದಾಟವನ್ನು ಯಶಸ್ವಿಯಾಗೇನೋ ನಿಭಾಯಿಸಿದೆ. ಆದರೆ ಅಂತಿಮ ದಿನ ಸೋಲನ್ನು ಎದುರಿಸಲೇಬೇಕಾದ ಸ್ಥಿತಿಗೆ ತಲುಪಿದೆ.

Advertisement

2 ವಿಕೆಟಿಗೆ 24 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿದ ಶ್ರೀಲಂಕಾ ನಿಧಾನ ಗತಿಯ ಬ್ಯಾಟಿಂಗ್‌ ನಡೆಸಿ 6 ವಿಕೆಟಿಗೆ 231 ರನ್‌ ಗಳಿಸಿದೆ. ಈ ನಡುವೆ ಏಂಜೆಲೊ ಮ್ಯಾಥ್ಯೂಸ್‌ ಸ್ನಾಯು ಸೆಳೆತಕ್ಕೊಳಗಾಗಿ ನಿವೃತ್ತರಾಗಿದ್ದಾರೆ. ಅಲ್ಲಿಗೆ ಲಂಕಾ ಬಳಿ ಇನ್ನೂ 5 ವಿಕೆಟ್‌ ಉಳಿದಂತಾಗಿದೆ. ಆದರೂ ಮೊದಲ ಟೆಸ್ಟ್‌ನಂತೆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದು ಸುಲಭವಲ್ಲ.

ಲಂಕಾ ನಾಯಕ ದಿನೇಶ್‌ ಚಂಡಿಮಾಲ್‌ ಮತ್ತು ಕುಸಲ್‌ ಮೆಂಡಿಸ್‌ 3ನೇ ವಿಕೆಟಿಗೆ ದಿಟ್ಟ ಹೋರಾಟವೊಂದನ್ನು ನಡೆಸಿ 117 ರನ್‌ ಪೇರಿಸಿದರು. ಇಬ್ಬರಿಂದಲೂ ಅರ್ಧ ಶತಕ ದಾಖಲಾಯಿತು. ಚಂಡಿಮಾಲ್‌ 228 ಎಸೆತ ಎದುರಿಸಿ 56 ರನ್‌ ಹೊಡೆದರೆ (5 ಬೌಂಡರಿ), ಮೆಂಡಿಸ್‌ 147 ಎಸೆತಗಳಿಂದ 67 ರನ್‌ ಬಾರಿಸಿದರು (10 ಬೌಂಡರಿ). ದಿಲುÅವಾನ್‌ ಪೆರೆರ 22 ಹಾಗೂ ಸುರಂಗ ಲಕ್ಮಲ್‌ 16 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ನ್ಯೂಜಿಲ್ಯಾಂಡ್‌ ಪರ ನೀಲ್‌ ವ್ಯಾಗ್ನರ್‌ 3, ಟಿಮ್‌ ಸೌಥಿ 2 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-178 ಮತ್ತು 4 ವಿಕೆಟಿಗೆ ಡಿಕ್ಲೇರ್‌. ಶ್ರೀಲಂಕಾ-104 ಮತ್ತು 6 ವಿಕೆಟಿಗೆ 231.

Advertisement
Advertisement

Udayavani is now on Telegram. Click here to join our channel and stay updated with the latest news.

Next