ವೆಲ್ಲಿಂಗ್ಟನ್: ಏಕದಿನ ಹಾಗೂ ಟಿ20 ಸರಣಿಗಾಗಿ ಭಾರತಕ್ಕೆ ಆಗಮಿಸಿರುವ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡವನ್ನು ಈಗ ಪರಿಪೂರ್ಣಗೊಳಿಸಲಾಗಿದೆ. ಬಾಕಿ ಇರಿಸಿಕೊಳ್ಳಲಾಗಿದ್ದ 6 ಸ್ಥಾನವನ್ನು ಭರ್ತಿ ಮಾಡಲಾಗಿದೆ. ಇವರೆಲ್ಲರೂ ಭಾರತ ಪ್ರವಾಸದಲ್ಲಿರುವ ಕಿವೀಸ್ “ಎ’ ತಂಡದ ಸದಸ್ಯರಾಗಿದ್ದಾರೆ.
ವಿಜಯವಾಡದಲ್ಲಿ ಶುಕ್ರವಾರ ನಡೆದ 4ನೇ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ಆರಂಭಕಾರ ಜಾರ್ಜ್ ವರ್ಕರ್, ಬ್ಯಾಟ್ಸ್‌ಮನ್‌ಗಳಾದ ಕಾಲಿನ್ ಮುನ್ರೊ, ಹೆನ್ರಿ ನಿಕೋಲ್ಸ್, 2ನೇ ಏಕದಿನದಲ್ಲಿ ಸೆಂಚುರಿ ಹೊಡೆದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್, ಲೆಗ್‌ಸ್ಪಿನ್ನರ್ ಟಾಡ್ ಆ್ಯಸ್ಲೆ, ವೇಗಿ ಮ್ಯಾಟ್ ಹೆನ್ರಿ ಅವರೆಲ್ಲ ನ್ಯೂಜಿಲ್ಯಾಂಡ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲ್ಯಾಂಡ್ ತಂಡ ಈಗಾಗಲೇ ಭಾರತಕ್ಕೆ ಆಗಮಿಸಿದೆ. ಆದರೆ ತಂಡದ 6 ಸ್ಥಾನಗಳನ್ನು ಖಾಲಿ ಇಡಲಾಗಿತ್ತು. ಭಾರತ “ಎ’ ವಿರುದ್ಧ ಸರಣಿ ಆಡುತ್ತಿರುವ ನ್ಯೂಜಿಲ್ಯಾಂಡ್ “ಎ’ ತಂಡದ ಸಾಧಕರನ್ನು ಗುರುತಿಸಿ ಉಳಿದ ಆಟಗಾರರನ್ನು ಭರ್ತಿ ಮಾಡಲು ನ್ಯೂಜಿಲ್ಯಾಂಡ್ ನಿರ್ಧರಿಸಿತ್ತು.
ಭಾರತ-ನ್ಯೂಜಿಲ್ಯಾಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿ ಅ. 22ರಿಂದ ಮುಂಬಯಿಯಲ್ಲಿ ಆರಂಭವಾಗಲಿದೆ. ಟಿ20 ಸರಣಿ ನ. ಒಂದರಿಂದ ಹೊಸದಿಲ್ಲಿಯಲ್ಲಿ ಮೊದಲ್ಗೊಳ್ಳಲಿದೆ.
ಏಕದಿನ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆ್ಯಸ್ಲೆ, ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಂ, ಹೆನ್ರಿ ನಿಕೋಲ್ಸ್, ಆ್ಯಡಂ ಮಿಲೆ°, ಕಾಲಿನ್ ಮುನ್ರೊ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ರಾಸ್ ಟಯ್ಲರ್, ಜಾರ್ಜ್ ವರ್ಕರ್.
ಟ20 ತಂಡ: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆ್ಯಸ್ಲೆ, ಟ್ರೆಂಟ್ ಬೌಲ್ಟ್, ಟಾಮ್ ಬ್ರೂಸ್, ಕಾಲಿನ್ ಡಿ ಗ್ರ್ಯಾಂಡ್ ಹೋಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಂ, ಹೆನ್ರಿ ನಿಕೋಲ್ಸ್, ಆ್ಯಡಂ ಮಿಲೆ°, ಕಾಲಿನ್ ಮುನ್ರೊ, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಐಶ್ ಸೋಧಿ, ಟಿಮ್ ಸೌಥಿ.