Advertisement

ನ್ಯೂಜಿಲ್ಯಾಂಡ್‌ ಏಕದಿನ ತಂಡದಲ್ಲಿ ಐಶ್‌ ಸೋಧಿ

06:30 AM Feb 23, 2018 | Team Udayavani |

ವೆಲ್ಲಿಂಗ್ಟನ್‌: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ರವಿವಾರದಿಂದ ಆರಂಭವಾಗಲಿರುವ ಏಕದಿನ ಸರಣಿಗಾಗಿ ಪ್ರಕಟಿಸಲಾದ ನ್ಯೂಜಿಲ್ಯಾಂಡ್‌ ತಂಡದಲ್ಲಿ ಲೆಗ್‌ಬ್ರೇಕ್‌ ಬೌಲರ್‌ ಐಶ್‌ ಸೋಧಿಗೆ ಅವಕಾಶ ನೀಡಲಾಗಿದೆ. ಸೋಧಿ ಕಳೆದ ವರ್ಷ ಮೇ ತಿಂಗಳಲ್ಲಿ ಕೊನೆಯ ಸಲ ಏಕದಿನ ಪಂದ್ಯವನ್ನಾಡಿದ್ದರು.

Advertisement

5 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗೆ ತಂಡವನ್ನು ಅಂತಿಮಗೊಳಿಸಲಾಗಿದ್ದು, ಗಾಯದಿಂದ ಚೇತರಿಸಿಕೊಂಡ ಮಿಚೆಲ್‌ ಸ್ಯಾಂಟ್ನರ್‌ ಮತ್ತು ಟಾಡ್‌ ಆ್ಯಸ್ಟಲ್‌ ವಾಪಸಾಗಿದ್ದಾರೆ. ಜಾರ್ಜ್‌ ವರ್ಕರ್‌ ಅವರನ್ನು ಕೈಬಿಡಲಾಗಿದೆ.

ಐಶ್‌ ಸೋಧಿ ನ್ಯೂಜಿಲ್ಯಾಂಡಿನ ಮೊದಲ ಆಯ್ಕೆಯ ಟಿ20 ಕ್ರಿಕೆಟಿಗನಾಗಿದ್ದು, ನಂ.1 ಬೌಲರ್‌ ಕೂಡ ಆಗಿದ್ದಾರೆ. ಈ ವರ್ಷದ 10 ಟಿ20 ಪಂದ್ಯಗಳಿಂದ 9 ವಿಕೆಟ್‌ ಉರುಳಿಸಿದ್ದಾರೆ. ಏಕದಿನದಲ್ಲೂ ಸೋಧಿ ಇದೇ ಫಾರ್ಮ್ ಮುಂದುವರಿಸಿಕೊಂಡು ಹೋಗಬಹುದೆಂಬ ವಿಶ್ವಾಸ ಆಯ್ಕೆ ಮಂಡಳಿ ಅಧ್ಯಕ್ಷ ಗವಿನ್‌ ಲಾರ್ಸೆನ್‌ ಅವರದು.

ನ್ಯೂಜಿಲ್ಯಾಂಡ್‌ ತಂಡ: ಕೇನ್‌ ವಿಲಿಯಮ್ಸನ್‌ (ನಾಯಕ), ಟಾಡ್‌ ಆ್ಯಸ್ಟಲ್‌, ಟ್ರೆಂಟ್‌ ಬೌಲ್ಟ್, ಲಾಕಿ ಫ‌ರ್ಗ್ಯುಸನ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್‌ ಹೆನ್ರಿ, ಟಾಮ್‌ ಲ್ಯಾಥಂ, ಕಾಲಿನ್‌ ಮುನ್ರೊ, ಹೆನ್ರಿ ನಿಕೋಲ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಐಶ್‌ ಸೋಧಿ, ಟಿಮ್‌ ಸೌಥಿ, ರಾಸ್‌ ಟಯ್ಲರ್‌.

Advertisement

Udayavani is now on Telegram. Click here to join our channel and stay updated with the latest news.

Next