Advertisement
ನ್ಯೂಜಿಲ್ಯಾಂಡ್ ಸತತ 4 ಪಂದ್ಯ ಗಳನ್ನು ಗೆದ್ದು ಸೆಮಿಫೈನಲ್ ಖಚಿತ ಎಂಬ ಸುಭದ್ರ ಸ್ಥಿತಿಯಲ್ಲಿತ್ತು. ಆದರೆ ಭಾರತದ ಕೈಯಲ್ಲಿ ಏಟು ತಿಂದ ಬಳಿಕ ಗೆಲುವಿನ ಮುಖವನ್ನೇ ಕಂಡಿಲ್ಲ. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಮುಗ್ಗರಿಸಿದೆ. ಅರ್ಥಾತ್, ಹ್ಯಾಟ್ರಿಕ್ ಸೋಲಿನಿಂದಾಗಿ ನ್ಯೂಜಿಲ್ಯಾಂಡ್‌ನ 4ನೇ ಸ್ಥಾನವೂ ಅಲುಗಾಡಲಾರಂಭಿಸಿದೆ. ಇದು ನಿಲ್ಲ ಬೇಕಾದರೆ ಪಾಕಿಸ್ಥಾನವನ್ನು ಮಣಿ ಸಲೇ ಬೇಕು. ಇದು ನ್ಯೂಜಿ ಲ್ಯಾಂಡ್‌ನ 8ನೇ ಪಂದ್ಯ. ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಎರಡನ್ನೂ ಗೆದ್ದರೆ ಕಿವೀಸ್ ಅಂಕ 12ಕ್ಕೆ ಏರಲಿದೆ. ರನ್‌ರೇಟ್ ಉತ್ತಮವಾಗಿ ರುವುದರಿಂದ ಸೆಮಿಫೈನಲ್‌ಗೆ ಧಾರಾಳ ಎಂಬುದು ಸದ್ಯದ ಲೆಕ್ಕಾಚಾರ.
ಬಹುತೇಕ ಆಟಗಾರರು ಗಾಯದ ಸಮಸ್ಯೆಗೆ ಸಿಲುಕಿರುವುದು ನ್ಯೂಜಿ ಲ್ಯಾಂಡ್‌ಗೆ ಎದುರಾಗಿರುವ ದೊಡ್ಡ ಆತಂಕ. ಪ್ರಧಾನ ವೇಗಿ ಮ್ಯಾಟ್ ಹೆನ್ರಿ ಸ್ನಾಯು ಸೆಳೆತಕ್ಕೆ ಸಿಲುಕಿದ್ದಾರೆ. ಜಿಮ್ಮಿ ನೀಶಮ್‌ಗೆ ದಕ್ಷಿಣ ಆಫ್ರಿಕಾ ಪಂದ್ಯದ ವೇಳೆ ಮಣಿಗಂಟಿಗೆ ಏಟು ಬಿದ್ದಿದೆ. ನಾಯಕ ಕೇನ್ ವಿಲಿಯಮ್ಸನ್ ಅವರ ಹೆಬ್ಬೆರಳಿನ ನೋವು ಇನ್ನೂ ವಾಸಿಯಾಗಿಲ್ಲ. ಮಾರ್ಕ್ ಚಾಪ್‌ಮನ್ ಅನಾರೋಗ್ಯದಿಂದ ಚೇತರಿಸಿಕೊಂಡಿಲ್ಲ. ಇವರ್ಯಾರೂ ಪಾಕಿಸ್ಥಾನ ವಿರುದ್ಧ ಕಣಕ್ಕಿಳಿಯುವುದಿಲ್ಲ. ಹೆನ್ರಿ ಬದಲು ಕೈಲ್ ಜೇಮಿಸನ್ ಬಂದಿದ್ದಾರೆ.
Related Articles
Advertisement
ಪಾಕ್ ಅನಿಶ್ಚಿತ ಆಟಪಾಕಿಸ್ಥಾನ ಆನಿಶ್ಚಿತ ಪ್ರದರ್ಶನ ನೀಡುತ್ತ ಬಂದಿದೆ. ವಿಶ್ವಕಪ್‌ಗ್ೂ ಮೊದಲು ಉತ್ತಮ ಫಾರ್ಮ್ನಲ್ಲಿದ್ದ ಬ್ಯಾಟರ್ ಮತ್ತು ಬೌಲರ್ ಈ ಪ್ರತಿಷ್ಠಿತ ಕೂಟದಲ್ಲಿ ಕೈಕೊಡುತ್ತಿದ್ದಾರೆ. ಆರಂಭಕಾರ ಅಬ್ದುಲ್ಲ ಶಫೀಕ್, ಕೀಪರ್ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಆಜಂ ಬ್ಯಾಟಿಂಗ್ ಸರದಿಯನ್ನು ಆಧರಿಸಬೇಕಿದೆ. ಇವರಲ್ಲಿ ಶಫೀಕ್ ಮತ್ತು ರಿಜ್ವಾನ್ ಮುನ್ನೂರರ ಗಡಿ ದಾಟಿದರೆ, ಆಜಂ 3 ಅರ್ಧ ಶತಕ ಬಾರಿಸಿದ್ದಾರೆ. ಮಧ್ಯಮ ಕ್ರಮಾಂಕದ ಇಫ್ತಿಕಾರ್ ಅಹ್ಮದ್ ಮತ್ತು ಸೌದ್ ಶಕೀಲ್ ಅವರಿಗೆ ಇನ್ನೂ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
ಪಾಕಿಸ್ಥಾನದ ಬೌಲಿಂಗ್ ಕೂಡ ಘಾತಕವಾಗಿ ಪರಿಣಮಿಸುತ್ತಿಲ್ಲ. ಅಫ್ರಿದಿ ವೈಫಲ್ಯ ಉಳಿದ ಬೌಲರ್‌ಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.