ವೆಲ್ಲಿಂಗ್ಟನ್: ಐಸಿಸಿ ಟಿ20 ರ್‍ಯಾಂಕಿಂಗ್‌ನ ಬೌಲರ್ ಮತ್ತು ಬ್ಯಾಟ್ಸ್‌ಮನ್‌ಗಳ ಸರದಿಯಲ್ಲಿ ನ್ಯೂಜಿಲ್ಯಾಂಡಿನ ಕಾಲಿನ್ ಮುನ್ರೊà ಮತ್ತು ಐಶ್ ಸೋಧಿ ಅಗ್ರಸ್ಥಾನಕ್ಕೇರಿದ್ದಾರೆ. ಇದೇ ವೇಳೆ ವೆಸ್ಟ್ ಇಂಡೀಸ್ ತಂಡವನ್ನು 2-0 ಅಂತರದಿಂದ ಮಣಿಸಿದ ನ್ಯೂಜಿಲ್ಯಾಂಡ್ ನಂಬರ್ ವನ್ ಸ್ಥಾನವನ್ನು ಮರಳಿ ಪಡೆದಿದೆ.
ಟಿ20 ಸರಣಿಯಲ್ಲಿ ಒಟ್ಟು 223 ರನ್ ಗಳಿಸುವ ಮೂಲಕ 137 ಅಂಕ ಪಡೆದ ಮುನ್ರೊà 11 ಸ್ಥಾನ ಮೇಲಕ್ಕೇರಿ ಇದೇ ಮೊದಲ ಬಾರಿ ಅಗ್ರ ಸ್ಥಾನಕ್ಕೆ ಏರಿದರು. ಅಗ್ರಸ್ಥಾನ ಪಡೆದಿರುವುದು ಆಶ್ಚರ್ಯ ತಂದಿದೆ. ಆದರೆ ಆ ಸ್ಥಾನವನ್ನು ಯಾರು ಬೇಕಾದರೂ ಪಡೆಯಬಹುದು. ಅಗ್ರಸ್ಥಾನ ಪಡೆಯುವುದು ನನ್ನ ಗುರಿಯಾಗಿತ್ತು ಮತ್ತು ಇದೀಗ ನಂ. 1 ಸ್ಥಾನ ದೊರೆತಿರುವ ಖುಷಿ ನನಗೆ ವಿಶೇಷವೆನಿಸಿದೆ’ ಎಂದು ಮುನ್ರೊà ಹೇಳಿದ್ದಾರೆ.
ಟಿ20 ಪಂದ್ಯಾವಳಿಯ ಮೊದಲ ಎರಡು ಪಂದ್ಯಗಳಲ್ಲಿ ಅರ್ಧ ಶತಕ ಬಾರಿಸಿದ್ದ ಮುನ್ರೊà ಅಂತಿಮ ಪಂದ್ಯದಲ್ಲಿ 53 ಎಸೆತಗಳಲ್ಲಿ 104 ರನ್ ಪೇರಿಸಿದ್ದರು. ಅವರ ಈ ಶತಕದ ಸಾಧನೆಯಿಂದ ಟಿ20 ಪಂದ್ಯಾವಳಿಯಲ್ಲಿ ಮೂರು ಶತಕ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರರಾದರು.
ಟಿ20 ವಿಶ್ವ ರ್‍ಯಾಂಕಿಂಗ್‌ನಲ್ಲಿ ಸೋಧಿ ಇದೇ ಮೊದಲ ಬಾರಿಗೆ ನಂ. 1 ಬೌಲರ್ ಆಗಿ ಗುರುತಿಸಿಕೊಂಡ ಖುಷಿ ಅನುಭವಿಸಿದ್ದಾರೆ. 18 ರನ್ನಿಗೆ 3 ವಿಕೆಟ್ ಪಡೆದ ಸಾಧನೆ ನೆರವಿನಿಂದ ಸೋಧಿ 10ನೇ ಸ್ಥಾನದಿಂದ ನಂ.1 ಸ್ಥಾನಕ್ಕೇರಿದ್ದಾರೆ. ಈ ಸರಣಿಯಲ್ಲಿ 70 ಅಂಕ ಗಳಿಸಿದ 25ರ ಹರೆಯದ ಸ್ಪಿನ್ನರ್ ಸೋಧಿ ಪಾಕಿಸ್ಥಾನದ ಇಮದ್ ವಾಸಿಮ್ ಅವರಿಂದ 7 ಅಂಕಗಳಿಂದ ಮುನ್ನಡೆಯಲ್ಲಿದ್ದಾರೆ.
“ನಂ. 1 ಸ್ಥಾನಕ್ಕೇರಿರುವುದಕ್ಕೆ ನಿಜಕ್ಕೂ ಖುಷಿಯೆನಿಸಿದೆ. ಇದು ಒಮ್ಮಲೇ ದೊರೆತ ಗೆಲುವಲ್ಲ. ಪ್ರತಿ ದಿನದ ಶ್ರಮದಿಂದ ಒದಗಿದ ಗೆಲುವಿದು. ದಾಳಿ ಮತ್ತು ರಕ್ಷಣೆ ನಡುವೆ ಉತ್ತಮ ಸಮತೋಲನ ಕಂಡುಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ ಮತ್ತು ಹೆಚ್ಚೆಚ್ಚು ಆಟ ಆಡುವ ಮೂಲಕ ಇದನ್ನು ಸಾಧಿಸಬಹುದು’ ಎಂದು ಸೋಧಿ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ಪರ ಡೇನಿಯಲ್ ವೆಟರಿ, ಶೇನ್ ಬಾಂಡ್ ಅವರ ಅನಂತರ ಸೋಧಿ ವಿಶ್ವದ ನಂ. 1 ಬೌಲರ್ ಎನಿಸಿಕೊಂಡ ಮೂರನೇ ಬೌಲರ್ ಆಗಿದ್ದಾರೆ.