ಆಕ್ಲಂಡ್: ಅನುಭವಿ ಆಟಗಾರರಾದ ಎಚ್‌ಎಸ್ ಪ್ರಣಯ್ ಮತ್ತು ಸೌರಭ್ ವರ್ಮ ಅವರು ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೋಲುವುದರೊಂದಿಗೆ ನ್ಯೂಜಿಲ್ಯಾಂಡ್ ಓಪನ್ ಗ್ರ್ಯಾನ್‌ಪ್ರಿ ಬ್ಯಾಡ್ಮಿಂಟನ್ ಕೂಟ ದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಕಳೆದ ತಿಂಗಳು ಯುಎಸ್ ಓಪನ್ ಪ್ರಶಸ್ತಿ ಜಯಿಸಿದ್ದ 4ನೇ ಶ್ರೇಯಾಂಕದ ಪ್ರಣಯ್ ಗೆಲುವಿಗಾಗಿ ಕಠಿನ ಹೋರಾಟ ನಡೆಸಿದರು. ಆದರೆ 11ನೇ ಶ್ರೇಯಾಂಕದ ಚೈನೀಸ್ ತೈಪೆಯ ಲಿನ್ ಯು ಸಿಯೆನ್ ಅಮೋಘ ವಾಗಿ ಆಡಿ 10-21, 22-20, 21-23 ಗೇಮ್‌ಗಳಿಂದ ಪಂದ್ಯ ಗೆದ್ದು ಸೆಮಿಫೈನಲ್ ತಲುಪಿದರು. ಈ ಪಂದ್ಯ ಒಂದು ತಾಸು ಮತ್ತು ಆರು ನಿಮಿಷಗಳವರೆಗೆ ಸಾಗಿತ್ತು.
ಇದೇ ವೇಳೆ ಏಳನೇ ಶ್ರೇಯಾಂಕದ ಸೌರಭ್ ವರ್ಮ ಹಾಂಕಾಂಗ್‌ನ ಶ್ರೇಯಾಂಕರಹಿತ ಆಟಗಾರ ಲೀ ಚ್ಯುಕ್ ಯಿಯು ಅವರೆದುರು ಕೇವಲ 42 ನಿಮಿಷಗಳ ಹೋರಾಟದಲ್ಲಿ 19-21, 16-21 ಗೇಮ್‌ಗಳಿಂದ ಶರಣಾ ದರು. ಈ ಹಿಂದಿನ ಪಂದ್ಯದಲ್ಲಿ ತನ್ನ ದೇಶದವರೇ ಆದ ಪಾರುಪಳ್ಳಿ ಕಶ್ಯಪ್ ಅವರನ್ನು ಉರುಳಿಸಿದ್ದ ವರ್ಮ ಕ್ವಾರ್ಟರ್‌ಫೈನಲ್‌ನ ಮೊದಲ ಗೇಮ್‌ನಲ್ಲಿ ಪ್ರಬಲ ಹೋರಾಟ ಸಂಘಟಿಸಿದ್ದರು. ಆದರೆ ಮೊದಲ ಗೇಮ್ ಸೋತ ಬಳಿಕ ಅವರ ಆಟದಲ್ಲಿ ಯಾವುದೇ ಮೊನಚು ಕಾಣಲಿಲ್ಲ. ಯಾವುದೇ ಹಂತದಲ್ಲೂ ಮೇಲುಗೈ ಸಾಧಿ ಸಲು ವಿಫಲರಾದರು. 5-1 ಮುನ್ನಡೆಯೊಂದಿಗೆ ಸಾಗಿದ ಲೀ 11-6 ಹಂತಕ್ಕೆ ಮುನ್ನಡೆಯನ್ನು ಏರಿಸಿದ್ದರು. ಆಬಳಿಕ ವರ್ಮ ಸ್ವಲ್ಪ ಮಟ್ಟಿಗೆ ಪ್ರತಿಹೋರಾಟ ನೀಡಲು ಪ್ರಯತ್ನಿಸಿದರು.
ಪ್ರಣಯ್, ಲಿನ್ ಮೊದಲ ಗೇಮ್‌ನಲ್ಲಿ ತೀವ್ರ ಹೋರಾಟ ನಡೆಸಿದ್ದರು. ಆರಂಭದಲ್ಲಿ 8-8 ಸಮಬಲ ಸಾಧಿಸಿದ್ದ ಅವರಿಬ್ಬರು ಮಧ್ಯಾಂತರ ವೇಳೆಗೆ 11-10 ಅಂಕಗಳ ಮುನ್ನಡೆ ಸಾಧಿಸಿದ್ದರು. ಆದರೆ ವಿರಾಮದ ಬಳಿಕ ಪ್ರಣಯ್ ಅಂಕ ಗಳಿಸಲು ವಿಫಲ ರಾದರೆ ಸತತ 10 ಅಂಕ ಗಳಿಸಿದ
ಲಿನ್ ಮೊದಲ ಗೇಮ್‌ತನ್ನ ದಾಗಿಸಿ ಕೊಂಡಿದ್ದರು. 2ನೇ ಗೇಮ್‌ನಲ್ಲಿ ಇಬ್ಬರೂ ಉಗ್ರವಾಗಿ ಹೋರಾಡಿದರು. ಇದರಿಂದಾಗಿ 5-5, 13-8, 17-17, 20-20 ಹೀಗೆ ಸಮಬಲದೊಂದಿಗೆ ಹೋರಾಟ ಸಾಗಿತ್ತು. ಅಂತಿಮ ವಾಗಿ ಪ್ರಣಯ್ 22-20ರಿಂದ ಗೇಮ್ ಗೆದ್ದರು. ನಿರ್ಣಾಯಕ 3ನೇ ಗೇಮ್‌ನಲ್ಲೂ ತೀವ್ರವಾಗಿ ಹೋರಾಡಿ ದರು. ಅಂತಿಮವಾಗಿ 23-21 ರಿಂದ ಗೇಮ್ ಗೆದ್ದ ಲಿನ್ ಮುನ್ನಡೆದರು.