Advertisement

ಬೌಲರ್‌ಗಳಿಗೂ ಹೆಲ್ಮೆಟ್‌: ಬಾರ್ನೆಸ್‌ ಮನವಿ

08:15 AM Feb 24, 2018 | |

ವೆಲ್ಲಿಂಗ್ಟನ್‌: ಹೊಡಿಬಡಿ ಯುಗದಲ್ಲಿ ಕ್ರಿಕೆಟ್‌ ಎನ್ನುವುದು ಆಗಾಗ ಅಪಾಯಕ್ಕೆ ಆಹ್ವಾನ ನೀಡುತ್ತಲೇ ಇರುತ್ತದೆ. ಚೆಂಡಿನೇಟಿನ ದುರಂತದಿಂದ ಪಾರಾಗುವ ಸಲುವಾಗಿ ಕೆಲವು ಅಂಪಾಯರ್‌ಗಳು ಶಿರಸ್ತ್ರಾಣ ಧರಿಸಿ ಕರ್ತವ್ಯ ನಿಭಾಯಿಸಿದ್ದವನ್ನು ಕಂಡಿದ್ದೇವೆ. ಬ್ರೂಸ್‌ ಆಕ್ಸೆನ್‌ಫೋರ್ಡ್‌ ಇದಕ್ಕೊಂದು ಉತ್ತಮ ಉದಾಹರಣೆ. 

Advertisement

ಈಗ ಬೌಲರ್‌ಗಳ ಸರದಿ. ಚುಟುಕು ಕ್ರಿಕೆಟ್‌ ಪಂದ್ಯಗಳ ವೇಳೆ ಬ್ಯಾಟ್ಸ್‌ಮನ್‌ಗಳು ಅತ್ಯಂತ ಬಿರುಸಿನಿಂದ ಬಾರಿಸಿದ ಚೆಂಡನ್ನು ತಡೆಯಲು ಬೌಲರ್‌ಗಳೂ ಹೆಲ್ಮೆಟ್‌ ಧರಿಸುವುದನ್ನು ನ್ಯೂಜಿಲ್ಯಾಂಡಿನಲ್ಲಿ ಕಾಣಬಹುದಾಗಿದೆ. ಇಲ್ಲಿನ ದೇಶಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಒಟಾಗೊ ತಂಡದ ಬೌಲರ್‌ ವಾರೆನ್‌ ಬಾರ್ನೆಸ್‌ ಅವರು ಕ್ಯಾಂಟರ್‌ ಬರಿ ವಿರುದ್ಧದ ಟಿ20 ಪಂದ್ಯದ ವೇಳೆ ಹೆಲ್ಮೆಟ್‌ ಧರಿಸಿ ಬೌಲಿಂಗ್‌ ನಡೆಸಿದ್ದಾರೆ. ಎಲ್ಲ ಬೌಲರ್‌ಗಳೂ ಇದನ್ನು ಧರಿಸಬೇಕೆಂಬುದು ಬಾರ್ನೆಸ್‌ ಮನವಿ.

“ಬೌಲರ್‌ಗಳೂ ಚೆಂಡನ್ನು ತಡೆಯುವಾಗ ಅಪಾಯಕ್ಕೆ ಸಿಲುಕುವುದಿದೆ. ಟಿ20 ಪಂದ್ಯ ಗಳಲ್ಲಿ ಅಪಾಯ ಜಾಸ್ತಿ. ಇಲ್ಲಿ ಚೆಂಡನ್ನು ಹೆಚ್ಚು ಬಿರುಸಿನಿಂದ ಬಡಿದಟ್ಟುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಬೌಲರ್‌ಗಳೇ ಬ್ಯಾಟ್ಸ್‌ ಮನ್‌ಗಳ ಸಮೀಪದ ಆಟಗಾರರಾಗಿರುತ್ತಾರೆ. ಹೀಗಾಗಿ ನಮಗೆ ಅಪಾಯ ಜಾಸ್ತಿ. ಇದರಿಂದ ನಾನು ಹೆಲ್ಮೆಟ್‌ ಉಪಯೋಗಿಸ ಲಾರಂಭಿಸಿದ್ದೇನೆ’ ಎಂದು ಬಾರ್ನೆಸ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next