Advertisement

ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಮಣಿಸಿ ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

07:51 PM Mar 07, 2021 | Team Udayavani |

ವೆಲ್ಲಿಂಗ್ಟನ್: ಐದನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯವನ್ನು 7 ವಿಕೆಟ್‌ಗಳಿಂದ ಪರಾಭವಗೊಳಿಸಿದ ಆತಿಥೇಯ ನ್ಯೂಜಿಲ್ಯಾಂಡ್‌ 3-2 ಅಂತರದಿಂದ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

Advertisement

ಸತತ 2 ಪಂದ್ಯಗಳನ್ನು ಗೆದ್ದು ಸರಣಿಯನ್ನು ಸಮಬಲಕ್ಕೆ ತಂದ ಹುರುಪಿನಲ್ಲಿದ್ದ ಕಾಂಗರೂ ಪಡೆ ರವಿವಾರದ ಮುಖಾಮುಖೀಯಲ್ಲಿ “ಫೈನಲ್‌ ಜೋಶ್‌’ ತೋರುವಲ್ಲಿ ವಿಫ‌ಲವಾಯಿತು. ಮೊದಲು ಬ್ಯಾಟಿಂಗ್‌ ಆಯ್ದುಕೊಂಡೂ 8 ವಿಕೆಟಿಗೆ ಕೇವಲ 142 ರನ್‌ ಮಾಡಿತು. ಜವಾಬಿತ್ತ ನ್ಯೂಜಿಲ್ಯಾಂಡ್‌ 15.3 ಓವರ್‌ಗಳಿಂದ ಮೂರೇ ವಿಕೆಟಿಗೆ 143 ರನ್‌ ಬಾರಿಸಿತು.

ಆರಂಭಕಾರ ಮಾರ್ಟಿನ್‌ ಗಪ್ಟಿಲ್‌ ಗಟ್ಟಿಯಾಗಿ ಬೇರೂರಿ ನಿಂತು 71 ರನ್‌ ಬಾರಿಸಿದರು. 46 ಎಸೆತಗಳ ಈ ಆಕ್ರಮಣಕಾರಿ ಆಟದಲ್ಲಿ 7 ಫೋರ್‌ ಹಾಗೂ 4 ಸಿಕ್ಸರ್‌ ಸೇರಿತ್ತು. ಜತೆಗಾರ ಡೇವನ್‌ ಕಾನ್ವೆ 35 ರನ್‌ ಮಾಡಿದರು. ಮೊದಲ ವಿಕೆಟಿಗೆ 11.5 ಓವರ್‌ಗಳಿಂದ 106 ರನ್‌ ಒಟ್ಟುಗೂಡಿತು. ಇವರ ಅಬ್ಬರಕ್ಕೆ ಕಾಂಗರೂ ಬೌಲಿಂಗ್‌ ಸಿಕ್ಕಾಪಾಲಾಯಿತು. ನಾಯಕ ವಿಲಿಯಮ್ಸನ್‌ ಅವರನ್ನು “ಗೋಲ್ಡನ್‌ ಡಕ್‌’ಗೆ ಕೆಡವಿದ್ದಷ್ಟೇ ಆಸ್ಟ್ರೇಲಿಯದ ದೊಡ್ಡ ಸಾಧನೆ.

ಆಸೀಸ್‌ ಬ್ಯಾಟಿಂಗ್‌ ಸರದಿಯಲ್ಲಿ ವೇಡ್‌ ಸರ್ವಾಧಿಕ 44, ನಾಯಕ ಫಿಂಚ್‌ 36 ರನ್‌ ಮಾಡಿದರು. ಸೋಧಿ ಮತ್ತೂಂದು ಘಾತಕ ಸ್ಪೆಲ್‌ ನಡೆಸಿ 24ಕ್ಕೆ 3 ವಿಕೆಟ್‌ ಉರುಳಿಸಿದರು.

Advertisement

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-8 ವಿಕೆಟಿಗೆ 142 (ವೇಡ್‌ 44, ಫಿಂಚ್‌ 36, ಸ್ಟೊಯಿನಿಸ್‌ 26, ಸೋಧಿ 24ಕ್ಕೆ 3, ಬೌಲ್ಟ್ 26ಕ್ಕೆ 2, ಸೌಥಿ 38ಕ್ಕೆ 2). ನ್ಯೂಜಿಲ್ಯಾಂಡ್‌-15.3 ಓವರ್‌ಗಳಲ್ಲಿ 3 ವಿಕೆಟಿಗೆ 143 (ಗಪ್ಟಿಲ್‌ 71, ಕಾನ್ವೆ 36, ಫಿಲಿಪ್‌ 34, ಮೆರೆಡಿತ್‌ 39ಕ್ಕೆ 2). ಪಂದ್ಯಶ್ರೇಷ್ಠ: ಮಾರ್ಟಿನ್‌ ಗಪ್ಟಿಲ್‌.

ಸರಣಿಶ್ರೇಷ್ಠ: ಐಶ್‌ ಸೋಧಿ.

Advertisement

Udayavani is now on Telegram. Click here to join our channel and stay updated with the latest news.

Next