Advertisement
ಕೈಯಲ್ಲಿನ್ನೂ 4 ವಿಕೆಟ್ ಉಳಿಸಿಕೊಂಡು 191 ರನ್ ಮುನ್ನಡೆಯೊಂದಿಗೆ ದಕ್ಷಿಣ ಆಫ್ರಿಕಾ 4ನೇ ದಿನದಾಟ ಮುಗಿಸಿತ್ತು. ಹೀಗಾಗಿ ರವಿವಾರದ ಆಟ ಅತ್ಯಂತ ಕುತೂಹಲ ಹುಟ್ಟಿಸಿತ್ತು. ಆದರೆ ಬೆಳಗ್ಗಿನಿಂದಲೇ ಸುರಿಯ ತೊಡಗಿದ ಮಳೆ ಈ ಕುತೂಹಲವನ್ನೆಲ್ಲ ನೀರುಪಾಲು ಮಾಡಿತು.ಸರಣಿಯ ದ್ವಿತೀಯ ಟೆಸ್ಟ್ ಮಾ. 16ರಿಂದ ಹ್ಯಾಮಿ ಲ್ಟನ್‌ನಲ್ಲಿ ಆರಂಭವಾಗಲಿದೆ.
ನ್ಯೂಜಿಲ್ಯಾಂಡಿನ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟಯ್ಲರ್ ಕಾಲು ನೋವಿನಿಂದಾಗಿ ದ್ವಿತೀಯ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಈ ಸ್ಥಾನಕ್ಕೆ ಬಲಗೈ ಬ್ಯಾಟ್ಸ್‌ಮನ್ ನೀಲ್ ಬ್ರೂಮ್ ಅವರನ್ನು ಕರೆಸಿಕೊಳ್ಳಲಾಗಿದೆ. 33ರ ಹರೆಯದ ಬ್ರೂಮ್ ಈವರೆಗೆ ಟೆಸ್ಟ್ ಆಡಿಲ್ಲ. ಆದರೆ 30 ಏಕದಿನ ಹಾಗೂ 11 ಟಿ-20 ಪಂದ್ಯಗಳಲ್ಲಿ ನ್ಯೂಜಿಲ್ಯಾಂಡನ್ನು ಪ್ರತಿನಿಧಿಸಿದ್ದಾರೆ. ಏಕದಿನದಲ್ಲೂ ಅವರು ಭಾರೀ ಸಮಯದ ಬಳಿಕ “ದ್ವಿತೀಯ ಇನ್ನಿಂಗ್ಸ್’ ಆಡಲಿಳಿದಿರುವುದು ಉಲ್ಲೇಖನೀಯ. 2010ರ ಬಳಿಕ ಅವರು ಏಕದಿನಕ್ಕೆ ಮರಳಿದ್ದು ಕಳೆದ ವರ್ಷ. ಈ ಅವಧಿಯಲ್ಲೇ ಬ್ರೂಮ್ ತಮ್ಮ ಮೊದಲ ಹಾಗೂ ಏಕೈಕ ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದರು.
ಹ್ಯಾಮಿಲ್ಟನ್‌ನಲ್ಲಿ ನೀಲ್ ಬ್ರೂಮ್ ಟೆಸ್ಟ್ ಪಾದಾರ್ಪಣೆ ಮಾಡಲಿದ್ದಾರೆಂದು ನಾಯಕ ಕೇನ್ ವಿಲಿಯಮ್ಸನ್ ಮತ್ತು ಕೋಚ್ ಮೈಕ್ ಹೆಸ್ಸನ್ ಹೇಳಿದ್ದಾರೆ.
Related Articles
Advertisement