Advertisement

ಕ್ಲೀವರ್‌ ಶತಕ; ಒತ್ತಡದಲ್ಲಿ ಭಾರತ “ಎ’

09:42 AM Feb 01, 2020 | Sriram |

ಕ್ರೈಸ್ಟ್‌ಚರ್ಚ್‌: ಆತಿಥೇಯ ನ್ಯೂಜಿಲ್ಯಾಂಡ್‌ “ಎ’ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಭಾರತ “ಎ’ ಭಾರೀ ಒತ್ತಡಕ್ಕೆ ಸಿಲುಕಿದೆ. ಭಾರತದ 216 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ನ್ಯೂಜಿಲ್ಯಾಂಡ್‌ 5 ವಿಕೆಟಿಗೆ 385 ರನ್‌ ಪೇರಿಸಿ ದ್ವಿತೀಯ ದಿನದಾಟ ಮುಗಿಸಿದೆ. ಇನ್ನೂ 5 ವಿಕೆಟ್‌ಗಳನ್ನು ಕೈಲಿರಿಸಿಕೊಂಡಿರುವ ಕಿವೀಸ್‌ ಈಗಾಗಲೇ 169 ರನ್ನುಗಳ ಮುನ್ನಡೆಯಲ್ಲಿದೆ.

Advertisement

ನ್ಯೂಜಿಲ್ಯಾಂಡ್‌ 2ಕ್ಕೆ 105 ರನ್‌ ಮಾಡಿದಲ್ಲಿಂದ ಶುಕ್ರವಾರದ ಆಟ ಮುಂದುವರಿಸಿತ್ತು. ವಿಕೆಟ್‌ ಕೀಪರ್‌ ಡೇನ್‌ ಕ್ಲೀವರ್‌ ಅಜೇಯ 111 ರನ್‌ ಬಾರಿಸಿ ತಂಡಕ್ಕೆ ಭರ್ಜರಿ ಮುನ್ನಡೆ ಒದಗಿಸಿದರು (194 ಎಸೆತ, 16 ಬೌಂಡರಿ). ಮಾರ್ಕ್‌ ಚಾಪ್‌ಮನ್‌ 85 ರನ್ನುಗಳ ಕೊಡುಗೆ ಸಲ್ಲಿಸಿದ್ದು, ಕ್ಲೀವರ್‌ ಜತೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (187 ಎಸೆತ, 8 ಬೌಂಡರಿ). ಇವರಿಬ್ಬರ ಮುರಿಯದ 6ನೇ ವಿಕೆಟ್‌ ಜತೆಯಾಟ ದಲ್ಲಿ 209 ರನ್‌ ಒಟ್ಟುಗೂಡಿದೆ. ವಿಲ್‌ ಯಂಗ್‌ 54 ರನ್‌ ಬಾರಿಸಿ ಔಟಾದ ಬಳಿಕ ಕಿವೀಸ್‌ ಸಣ್ಣ ಕುಸಿತವೊಂದನ್ನು ಕಂಡಿತು. ಪಟೇಲ್‌ (38), ಗ್ಲೆನ್‌ ಫಿಲಿಪ್ಸ್‌ (4) ಬೇಗನೇ ಔಟಾದರು.

ಸಂಕ್ಷಿಪ್ತ ಸ್ಕೋರ್‌: ಭಾರತ “ಎ’-216. ನ್ಯೂಜಿಲ್ಯಾಂಡ್‌ “ಎ’-5 ವಿಕೆಟಿಗೆ 385 (ಕ್ಲೀವರ್‌ ಬ್ಯಾಟಿಂಗ್‌ 111, ಚಾಪ್‌ಮನ್‌ ಬ್ಯಾಟಿಂಗ್‌ 85, ವಾರಿಯರ್‌ 74ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next