Advertisement

ನ್ಯೂಯಾರ್ಕ್‌: ಸಮಾಧಿ ಮಾಡಲು ಜಾಗವೇ ಇಲ್ಲ

02:44 PM May 01, 2020 | sudhir |

ನ್ಯೂಯಾರ್ಕ್‌ : ಕೋವಿಡ್‌-19ಗೆ ತತ್ತರಿಸಿ ಹೋಗಿರುವ ನ್ಯೂಯಾರ್ಕ್‌ನಲ್ಲಿ ವಿಚಿತ್ರ ಘಟನೆ ನಡೆದಿದ್ದು,
ಬ್ರೂಕ್ಲಿನ್‌ ನಗರದ ಸ್ಮಶಾನ ಸಮೀಪದಲ್ಲಿ ಶವಗಳು ತುಂಬಿದ ಟ್ರಕ್‌ ಪತ್ತೆಯಾಗಿದೆ. ಈ ಕುರಿತು ಸ್ಥಳೀಯರು
ಪೊಲೀಸ್‌ ಇಲಾಖೆಗೆ ದೂರು ನೀಡಿದ್ದು, ಪರಿಶೀಲನೆ ನಡೆಸಿದ ವೇಳೆ ಟ್ರಕ್‌ ತುಂಬಾ ಶವಗಳಿರುವುದು ದೃಢಪಟ್ಟಿದೆ.

Advertisement

ಎಷ್ಟು ದಿನಗಳಿಂದ ಮೃತ ದೇಹಗಳನ್ನು ಹೀಗೆ ಇಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಜತೆಗೆ ಇವರು
ಕೋವಿಡ್‌-19 ಸೋಂಕಿನಿಂದ ಮೃತಪಟ್ಟವರೇ ಎಂಬ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಶವಗಳ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಆದರೆ ತನಿಖಾ ವೇಳೆ ಬ್ರೂಕ್ಲಿನ್‌ ನಗರದ ಸ್ಮಶಾನ ಕೇಂದ್ರ ಶವಗಳನ್ನು ಇಡಲು ನಾಲ್ಕು ಟ್ರಕ್‌ಗಳನ್ನು ಬಾಡಿಗೆ ಪಡೆದಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದು, ಈ ಹಿಂದೆ ಬಲವಾದ ಕಾರಣವೂ ಇದೆ ಎಂದು ಹೇಳಿದ್ದಾರೆ ಎಂದು
ಅಲ್‌ ಜಜೀರಾ ವರದಿ ಮಾಡಿದೆ.

ಸಂಸ್ಕಾರ ಮಾಡಲು ಸ್ಥಳದ ಅಭಾವ
ನ್ಯೂಯಾರ್ಕ್‌ನಲ್ಲಿ ಸದ್ಯ ಶವಗಳನ್ನು ಸಂಸ್ಕಾರ ಮಾಡಲು ಜಾಗವಿಲ್ಲದಂತಾಗಿದೆ. ಸತ್ತವರನ್ನು ಸಮಾಧಿ ಮಾಡಲು ಅಥವಾ ಅಂತ್ಯಸಂಸ್ಕಾರ ಮಾಡಲು ವಾರಗಳವರೆಗೆ ಕಾಯುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದ್ದು, ಹೆಣಗಳನ್ನು ಬಾಡಿಗೆ ಟ್ರಕ್‌ಗಳಲ್ಲಿ ಇಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳವನ್ನು ಪರಿಶೀಲಿಸಿರುವ ಬ್ರೂಕ್ಲಿನ್‌ ಬರೋ ಅಧ್ಯಕ್ಷ ಎರಿಕ್‌ ಆಡಮ್ಸ್ ಕೂಡ ಯಾವುದನ್ನೂ ಬಹಿರಂಗ ಪಡಿಸಲು ಹಿಂದೇಟು ಹಾಕಿದ್ದಾರೆ. ಈ ವಿಚಾರದ ಕುರಿತು ತನಿಖೆ ನಡೆಯುತ್ತಿದ್ದು, ಈಗ ನಾನು ಏನನ್ನೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಇದೇ ಮಾರ್ಗವನ್ನೇ ಪೊಲೀಸ್‌ ಇಲಾಖೆ ಮತ್ತು ವೈದ್ಯಕೀಯ ಇಲಾಖೆ ಅನುಸರಿಸುತ್ತಿದ್ದು, ಈ ಕುರಿತು ಪ್ರತಿಕ್ರಿಯಿಸಲು ಹಿಂದೇಟು ಹಾಕಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next