ಕೋವಿಡ್ 19 ಸಾವಿನ ಸಂಖ್ಯೆ ಕಳವಳಕಾರಿಯಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನಲ್ಲಿ ಮೃತರನ್ನು
ಸಾಮೂಹಿಕ ದಫನ ಮಾಡಲಾಗುತ್ತಿದೆ.
ಕೋವಿಡ್ 19 ನಿಂದಾಗಿ ಮೃತಪಟ್ಟವರನ್ನು ಗರಿಷ್ಠ ಸುರಕ್ಷತೆಯಲ್ಲಿ ದಫನ ಮಾಡಬೇಕು. ಅಲ್ಲದೆ ಸಾವಿನ ಸಂಖ್ಯೆ ಹೆಚ್ಚಿರುವುದರಿಂದ ಎಲ್ಲ ಹೆಣಗಳಿಗೆ ಸಕಾಲಕ್ಕೆ ಅಂತ್ಯಕ್ರಿಯೆ ನೆರವೇರಿಸಲು ಜನರು ಸಿಗುತ್ತಿಲ್ಲ. ತೀರಾ ಹತ್ತಿರದ ಸಂಬಂಧಿಕರಿಗೂ ದಫನ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಇಲ್ಲ. ಕೆಲವು ಕುಟುಂಬಗಳು ಅಂತ್ಯಕ್ರಿಯೆ ನಡೆಸುವಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ. ಈ ಎಲ್ಲ ಕಾರಣದಿಂದ ಆಡಳಿತವೇ ಸಾಮೂಹಿಕ ದಫನ ಕಾರ್ಯಕ್ಕೆ ಮುಂದಾಗಿದೆ.
ಒಂದೊಂದು ಗೋರಿಯಲ್ಲಿ 30ರಿಂದ 40 ಮೃತದೇಹಗಳನ್ನು ದಫನ ಮಾಡಲಾಗುತ್ತದೆ. ಗುರುವಾರ ಒಂದೇ ದಿನ 40 ಮೃತದೇಹಗಳನ್ನು ದಫನ ಮಾಡಲಾಗಿದೆ. ಹಾರ್ಟ್ ಐಲ್ಯಾಂಡ್‌ನಲ್ಲಿ ಇಂಥ ಹಲವಾರು ಗೋರಿಗಳಿವೆ ಎಂದು ಬಿಬಿಸಿ ವರದಿ ಮಾಡಿದೆ.ಡ್ರೋನ್ ಮೂಲಕ ಸೆರೆಹಿಡಿದಿರುವ ಇಂಥ ಕೆಲವು ಗೋರಿಗಳ ಚಿತ್ರಗಳನ್ನು ಬಿಬಿಸಿ ಬಿಡುಗಡೆ ಮಾಡಿದೆ.
ಕೋವಿಡ್ 19 ಪಿಡುಗು ನಿಯಂತ್ರಣಕ್ಕೆ ಬರುವ ತನಕ “ತಾತ್ಕಾಲಿಕ ದಫನ ಪದ್ಧತಿ’ ಅನಿವಾರ್ಯ ಎಂದು ಕಳೆದ ವಾರವಷ್ಟೇ ನ್ಯೂಯಾರ್ಕ್ ಮೇಯರ್ ಬಿಲ್ ಡೆ º$Éಸಿಯೊ ಹೇಳಿದ್ದರು. ನ್ಯೂಯಾರ್ಕ್‌ನಲ್ಲಿ ಬುಧವಾರಕ್ಕಾಗುವಾಗ ಸುಮಾರು 800 ಮಂದಿ ಕೋವಿಡ್ 19 ವೈರಸ್‌ಗೆ ಬಲಿಯಾಗಿದ್ದಾರೆ.