ವಾಷಿಂಗ್ಟನ್: ಆರ್ಥಿಕ ಕುಸಿತದಿಂದಾಗಿ ಮುಚ್ಚಿಹೋಗುವ ಹಂತದಲ್ಲಿರುವ ಅಮೆರಿಕದ ಸಿಗ್ನೇಚರ್ ಬ್ಯಾಂಕನ್ನು ನ್ಯೂಯಾರ್ಕ್ ಕಮ್ಯೂನಿಟಿ ಬ್ಯಾಂಕ್ ಖರೀದಿಸಲು ಮುಂದಾಗಿದ್ದು, ಈ ಸಂಬಂಧಿಸಿದಂತೆ 2.7ದಶಲಕ್ಷ ಡಾಲರ್ ಮೌಲ್ಯದ ಒಪ್ಪಂದ ಮಾಡಿಕೊಂಡಿದೆ. ನ್ಯೂಯಾರ್ಕ್ ಕಮ್ಯೂನಿಟಿ ಬ್ಯಾಂಕ್ನ ಅಂಗಸಂಸ್ಥೆಗಳಲ್ಲಿ ಒಂದಾಗಿರುವ ಫ್ಲ್ಯಾಗ್ಸ್ಟರ್ ಬ್ಯಾಂಕ್ನೊಂದಿಗೆ ಸಿಗ್ನೇಚರ್ ಬ್ಯಾಂಕ್ ವಿಲೀನಗೊಳ್ಳಲಿದೆ.
ಅದರ 40 ಶಾಖೆಗಳೂ ಕೂಡ ಇನ್ನುಮುಂದೆ ಫ್ಲ್ಯಾಗ್ಸ್ಟರ್ ಬ್ಯಾಂಕ್ಗಳೆಂದೇ ಗುರುತಿಸಲ್ಪಡುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಪ್ಪಂದದಲ್ಲಿ ಬ್ಯಾಂಕ್ಗಳ ಆಸ್ತಿ ಖರೀದಿಯೂ ಸೇರಿವೆ. ಬ್ಯಾಂಕ್ ಬಿಕ್ಕಟ್ಟಿನಿಂದ ಅಮೆರಿಕದ ಖ್ಯಾತ ಸಿಲಿಕಾನ್ ವ್ಯಾಲಿ ಬ್ಯಾಂಕ್ ಪತನವಾದ 48 ಗಂಟೆಗಳ ಅವಧಿಯಲ್ಲೇ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿರುವ ಸಿಗ್ನೇಚರ್ ಕೂಡ ಮುಚ್ಚುವ ಹಂತಕ್ಕೆ ತಲುಪಿತು.