Advertisement
ಹೊಸ ವರ್ಷ ಬರುತಿದೆ. ಹೊಸ ಹರುಷ ತರುತ್ತಿದೆ. ಹಾಗಿ¨ªಾಗ, ಈ ಜನ್ಮದಲ್ಲಿ ಮುಂದೆ ಎಂದೂ ಉಡಲು ಸಾಧ್ಯವಾಗದ ಹಳೇ ಫ್ಯಾಷನ್‌ನ ಉಡುಪುಗಳನ್ನು ಕಪಾಟಿನಲ್ಲಿ ಇನ್ನೂ ಯಾಕೆ ಇಟ್ಟುಕೊಂಡಿದ್ದೀರಾ? ಹಳೇ ಬಟ್ಟೆಗಳನ್ನು ದಾನ ಮಾಡಿ. ಹೊಸ ಬಟ್ಟೆಗಳನ್ನು ಸ್ವಾಗತಿಸಿ. ಇಲ್ಲವೇ ಹಳೇ ಬಟ್ಟೆಯನ್ನು ಎಕ್ಸ್‌ಚೇಂಜ… ಮಾಡಿ, ಹೊಸ ಬಟ್ಟೆ ಕೊಳ್ಳಿ. ಹಾಗೆಂದ ಮಾತ್ರಕ್ಕೆ ವರ್ಷ ಮುಗಿಯುವಷ್ಟರಲ್ಲಿ ದುಡ್ಡನ್ನೆÇÉಾ ಬಟ್ಟೆ ಖರೀದಿಗೆ ಖರ್ಚು ಮಾಡಿ ಕೈ ಖಾಲಿ ಮಾಡಿಕೊಳ್ಳಿ ಎಂದಲ್ಲ! ಹೊಸ ವರ್ಷಕ್ಕೆ ನಿಮ್ಮ ಕಪಾಟಿನಲ್ಲಿ ಇರಬೇಕಾದ ವಸ್ತುಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ. ಹೊಸ ವರ್ಷವನ್ನು ಹೊಸ ಸ್ಟೈಲ… ನೊಂದಿಗೆ ಆರಂಭಿಸಿ.
ಬಿಸಿಲು, ಧೂಳು ಅಥವಾ ಚಳಿಯಿಂದ ಕಣ್ಣುಗಳನ್ನು ರಕ್ಷಿಸಲು ನಮ್ಮ ಮುಖಕ್ಕೆ ಒಪ್ಪುವ ಒಳ್ಳೆಯ ಆಕಾರ ಮತ್ತು ಗಾತ್ರದ ಕನ್ನಡಕ ಇಟ್ಟುಕೊಂಡರೆ ಉತ್ತಮ. ತಂಪು ಕನ್ನಡಕ ಕಪ್ಪು ಬಣ್ಣದ್ದೇ ಆಗಬೇಕೆಂದು ಏನೂ ಇಲ್ಲ. ಕಂದು, ನೀಲಿ, ಗುಲಾಬಿ, ಸ್ವರ್ಣ, ಹೀಗೆ ಬಗೆ- ಬಗೆಯ ಆಯ್ಕೆಗಳಿವೆ. ಫ್ಲಿಪ್- ಪ್ಲಾ±Õ…, ಸ್ಯಾಂಡಲ್ಸ್, ಓಪನ್ ಶೂನಂಥ ಪಾದರಕ್ಷೆಗಳು ಇರಲಿ. ಇವು ಪಾಶ್ಚಾತ್ಯ ಮತ್ತು ಭಾರತೀಯ ಉಡುಗೆಗಳ ಜೊತೆ ಮ್ಯಾಚ್ ಆಗುತ್ತವೆ. ಪಾದರಕ್ಷೆಗಳು ನೋಡಲು ಮಾತ್ರವೇ ಅಂದವಿದ್ದು, ತೊಡಲು ಕಷ್ಟ ಎನಿಸಿದರೆ ಅಂಥವನ್ನು ತಿರಸ್ಕರಿಸಿ. ಏಕೆಂದರೆ, ಅಂಥ ಪಾದರಕ್ಷೆಗಳು ಪಾದಗಳಿಗೆ ಗಾಯವನ್ನು ಉಂಟುಮಾಡಬಲ್ಲವು. ಸ್ಟೈಲ್ ಜೊತೆ ಕಂಫರ್ಟ್ ಕೂಡ ಮುಖ್ಯ ಎಂಬುದು ನೆನಪಿದ್ದರೆ ಸಾಕು. ಹೊಸ ವರ್ಷಕ್ಕೆ ಹೊಸ ಸ್ಟೈಲ್
ಇನ್ನು ಹೊಸ ವರ್ಷದಾರಂಭದ ಪಾರ್ಟಿ, ಪಿಕ್ನಿಕ್, ಸಮಾರಂಭಗಳು, ಕ್ಯಾಶುಯಲ… ಔಟಿಂಗ್ ಎಲ್ಲವಕ್ಕೂ ಸೇರಿದಂತೆ ಒಂದು ದಿರಿಸನ್ನು ಮೀಸಲಿಡಿ. ಫ್ಲೋರಲ್ (ಹೂವಿನ ಮುದ್ರೆಯುಳ್ಳ) ಪ್ರಿಂಟ್ ಇರುವ ಅಥವಾ ಸಾಲಿಡ್ ಕಲರ್x (ಒಂದೇ ಬಣ್ಣದ) ದಿರಿಸು ಇಟ್ಟುಕೊಳ್ಳಿ. ಫ್ಲೋರಲ್, ಅನಿಮಲ… ಪ್ರಿಂಟ್ ಮತ್ತು ಸಾಂಪ್ರದಾಯಿಕ ವಿನ್ಯಾಸದ 3, 4 ಸ್ಕಾಫ್ìಗಳು ಬೋರಿಂಗ್ ಬಟ್ಟೆ ತೊಟ್ಟರೂ ನೀವು ಇಂಟೆರೆಸ್ಟಿಂಗ್ ಆಗಿ ಕಾಣುವಂತೆ ಮಾಡುತ್ತವೆ!
Related Articles
ಬಿಳಿ ಶರ್ಟ್ ಅಥವಾ ಟಾಪ್‌ಗೆ ನೀಲಿ ಬಣ್ಣದ ಪ್ಯಾಂಟ್ ಒಳ್ಳೆ ಕಾಂಬಿನೇಶನ್. ಆದ್ದರಿಂದ ಉತ್ತಮ ಫಿಟ್ ಮತ್ತು ಕಂಫರ್ಟ್ (ಆರಾಮ) ಇರುವ ಜೀ®Õ… ಪ್ಯಾಂಟ್ ಕೊಳ್ಳಬಹುದು. ಖಾದಿ ಕುರ್ತಾ ಚಳಿಗಾಲ, ಬೇಸಿಗೆ, ಎಲ್ಲದರಲ್ಲೂ ಉಪಯುಕ್ತ. ಕುರ್ತಾವನ್ನು ಡೆನಿಮ್ಸ…, ಲೆಗ್ಗಿಂಗ್ಸ್, ಪಟಿಯಾಲ ಪ್ಯಾಂಟ್, ಪಲಾಝೊà ಅಥವಾ ಲಂಗದ ಮೇಲೂ ಧರಿಸಬಹುದು. ತುಂಬಾ ಬಿಗಿಯಾಗಿರದ, ಸಡಿಲ ಕುರ್ತಾ ತೊಟ್ಟರೆ, ಆರಾಮದಾಯಕವಾಗಿಯೂ ಇರುತ್ತದೆ. ಕಪ್ಪು ಬಣ್ಣದ ಪ್ಯಾಂಟ್ ಬಹುತೇಕ ಎಲ್ಲ ಟಾಪ್‌ಗ್ಳ ಜೊತೆ ಹೊಂದುತ್ತದೆ. ಆದ್ದರಿಂದ ಕಪ್ಪು ಬಣ್ಣದ ಲೆಗ್ಗಿಂಗ್ಸ್, ಹಾರೆಮ… ಅಥವಾ ಚೂಡಿದಾರ ಪ್ಯಾಂಟ್ ಇಟ್ಟುಕೊಳ್ಳಿ. ಗಡಿಬಿಡಿಯಲ್ಲಿ ಹೊರಗಡೆ ಹೋಗುವ ಸಂದರ್ಭದಲ್ಲಿ, ದಿರಿಸುಗಳನ್ನು ಮಿಕÕ…- ಮ್ಯಾಚ್ ಮಾಡಲು ಪುರುಸೊತ್ತು ಇಲ್ಲದಿರುವಾಗ, ಕೊನೆ ಕ್ಷಣದಲ್ಲಿ ಟೈಲರ್ ಅಂಗಡಿ ಹುಡುಕಿಕೊಂಡು ಹೋಗಲು ಆಗುವುದಿಲ್ಲ. ಅಂಥ ಸಮಯದಲ್ಲಿ ಇವಿಷ್ಟೂ ಉಪಯೋಗಕ್ಕೆ ಬರುತ್ತವೆ.
Advertisement
ಕಪಾಟಿನಲ್ಲಿ ಇವಿದ್ದರೆ ಚೆನ್ನ 1. ತಂಪು ಕನ್ನಡಕ (ಸನ್ ಗ್ಲಾಸ್)
2. ಪಾದರಕ್ಷೆ
3. ಶಾಲು ಅಥವಾ ಸ್ಕಾರ್ಫ್
4. ವೈಟ್ ಕಾಟನ್ ಶರ್ಟ್, ನೀಲಿ ಬಣ್ಣದ ಡೆನಿಮ್ಸ್ (ಜೀನ್ಸ್ ಪ್ಯಾಂಟ್)
5. ಖಾದಿ ಕುರ್ತಾ
6. ಕಪ್ಪು ಬಣ್ಣದ ಲೆಗ್ಗಿನ್ಸ್ ಅಥವಾ ಪ್ಯಾಂಟ್