Advertisement

ಲಬುಶೇನ್‌ ಮತ್ತೆ ಶೈನ್‌; ಬೃಹತ್‌ ಮೊತ್ತದತ್ತ ಆಸೀಸ್‌

09:52 AM Jan 04, 2020 | Sriram |

ಸಿಡ್ನಿ: ಕಾಡ್ಗಿಚ್ಚಿನ ಹೊಗೆಯ ಹೊರತಾಗಿಯೂ ಸಿಡ್ನಿಯಲ್ಲಿ ಶುಕ್ರವಾರ ಆರಂಭಗೊಂಡ ಆಸ್ಟ್ರೇಲಿಯ- ನ್ಯೂಜಿಲ್ಯಾಂಡ್‌ ನಡುವಿನ “ನ್ಯೂ ಇಯರ್‌ ಟೆಸ್ಟ್‌’ ಪಂದ್ಯದ ಮೊದಲ ದಿನದಾಟ ಪೂರ್ತಿ 90 ಓವರ್‌ ಕಾಣುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್‌ ನಡೆಸುತ್ತಿರುವ ಆಸೀಸ್‌ ಮಾರ್ನಸ್‌ ಲಬುಶೇನ್‌ ಅವರ ಅಜೇಯ ಶತಕದ ನೆರವಿನಿಂದ 3 ವಿಕೆಟಿಗೆ 283 ರನ್‌ ಪೇರಿಸಿದೆ.

Advertisement

ಮೊದಲೆರಡು ಪಂದ್ಯಗಳನ್ನು ಸೋತು ಈಗಾಗಲೇ ಸರಣಿ ಕಳೆದುಕೊಂಡಿರುವ ನ್ಯೂಜಿಲ್ಯಾಂಡ್‌ ಪಾಲಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿದೆ. ಆದರೆ ನಾಯಕ ಕೇನ್‌ ವಿಲಿಯಮ್ಸನ್‌ ಗಾಯಾಳಾಗಿ ಹೊರಗುಳಿದದ್ದು ಪ್ರವಾಸಿಗರ ಪಾಲಿಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.

ದ.ಆಫ್ರಿಕಾ ಮೂಲದ ಲಬುಶೇನ್‌ 2019ರ ಟೆಸ್ಟ್‌ ಪಂದ್ಯಗಳಲ್ಲಿ 64.94ರ ಸರಾಸರಿಯೊಂದಿಗೆ 1,104 ರನ್‌ ಪೇರಿಸಿ ಮಿಂಚಿದ್ದರು. ಈ ಅಮೋಘ ಬ್ಯಾಟಿಂಗ್‌ ಫಾರ್ಮನ್ನು ಹೊಸ ವರ್ಷದಲ್ಲೂ ವಿಸ್ತರಿಸುವ ಸ್ಪಷ್ಟ ಸೂಚನೆ ನೀಡಿರುವ ಅವರು ಮತ್ತೆ ಶತಕದೊಂದಿಗೆ ಮೆರೆದಾಡಿದ್ದಾರೆ. ಕಿವೀಸ್‌ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತ ಸಾಗಿ 130 ರನ್‌ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ. ಸ್ಮಿತ್‌ ಗಳಿಕೆ 63 ರನ್‌.

Advertisement

Udayavani is now on Telegram. Click here to join our channel and stay updated with the latest news.

Next