Advertisement

ಹೊಸ ವರ್ಷ-ಹೊಸ ಭರವಸೆ: ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ ನಾಡಿನ ಜನತೆಗೆ ಶುಭಾಶಯ

11:01 AM Jan 01, 2021 | Team Udayavani |

ಬೆಂಗಳೂರು: ದೇಶದೆಲ್ಲೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, 2020ರ ಕಹಿ ಘಟನೆಗಳನ್ನು ಮರೆತು, ಹೊಸ ಭರವಸೆಯೊಂದಿಗೆ 2021ಕ್ಕೆ ದಾಪುಗಾಲಿಟ್ಟಿದ್ದೇವೆ. ಏತನ್ಮಧ್ಯೆ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಹಲವಾರು ಗಣ್ಯರು ಶುಭಹಾರೈಸಿದ್ದು, ಸ್ಯಾಂಡಲ್ ವುಡ್ ತಾರೆಯರೂ ಕೂಡ ನಾಡಿನ ಜನತೆಗೆ ಶುಭ ಕೋರಿದ್ದಾರೆ.

Advertisement

ಚಾಲೆಂಜಿಂಗ್ ಸ್ಟಾರ್ ದರ್ಶನ್: ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕೋವಿಡ್ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ.  ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

ಜಗ್ಗೇಶ್: ಹೊಸವರ್ಷದ ಮೊದಲ ಮೆಟ್ಟಿಲ ದಿನದ ಶುಭಾಷಯಗಳು.  ಇಂದಿನಿಂದ ನಿಮ್ಮ ಬಾಳು ಹಸನಾಗಿ ಮನಸ್ಸಿನ ಸಕಲ ಇಷ್ಟಾರ್ಥ ನೆರವೇರಲಿ, ಶುಭಮಸ್ತು.

Advertisement

ಪುನೀತ್ ರಾಜ್ ಕುಮಾರ್: ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. Happy New Year 2021

Advertisement

Udayavani is now on Telegram. Click here to join our channel and stay updated with the latest news.

Next