Advertisement

ಹೊಸ ವರ್ಷಾಚರಣೆ: ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ದಂಡು

03:02 PM Dec 31, 2022 | Team Udayavani |

ಚಿಕ್ಕಮಗಳೂರು: ವಾರಾಂತ್ಯ ಮತ್ತು ವರ್ಷಾಂತ್ಯ ಒಟ್ಟಿಗೆ ಬಂದಿದ್ದು, ಯುವ ಜನತೆಗೆ ಪ್ರವಾಸದತ್ತ ಮುಖ ಮಾಡಿದ್ದಾರೆ. ಕಾಫಿನಾಡು ಮುಳ್ಳಯ್ಯನಗಿರಿಯಲ್ಲಿ ಪ್ರವಾಸಿಗರ ದಂಡೇ ಏರ್ಪಟ್ಟಿದೆ.

Advertisement

ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಗಿರಿ ಪ್ರದೇಶಕ್ಕೆ ಲಗ್ಗೆ ಇಟ್ಟಿದ್ದಾರೆ. ಮಧ್ಯಾಹ್ನ ಒಂದು ಗಂಟೆ ವೇಳೆಗೆ 1000ಕ್ಕೂ ಅಧಿಕ ವಾಹನಗಳ ಬಂದಿದ್ದು, ಮುಳ್ಳಯ್ಯನಗಿರಿ ರಸ್ತೆಯಲ್ಲಿ ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.

ಇದನ್ನೂ ಓದಿ:ಬಿಜೆಪಿ ನನ್ನ ಗುರು, ಅವರು ನನಗೆ ದಾರಿ ತೋರಿಸುತ್ತಿದ್ದಾರೆ..!: ರಾಹುಲ್ ಗಾಂಧಿ

ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಕೋವಿಡ್ ನಾಲ್ಕನೇ ಅಲೆಯ ಆತಂಕದ ನಡುವೆಯೂ ರಾಜ್ಯ-ಹೊರ ರಾಜ್ಯಗಳಿಂದ ಆಗಮಿಸಿರುವ ಪ್ರವಾಸಿಗರು ತುಂಬಿ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next