Advertisement

New Year celebrations; ಬಾಂಬ್ ಸ್ಫೋಟದ ಬೆದರಿಕೆ; ಮುಂಬೈನಲ್ಲಿ ಹೈ ಅಲರ್ಟ್

10:24 AM Dec 31, 2023 | Team Udayavani |

ಮುಂಬೈ: ಹೊಸ ವರ್ಷಾಚರಣೆಯ ನಡುವೆಯೇ ಅಪರಿಚಿತ ಕರೆಯೊಂದು ಮುಂಬೈ ಪೊಲೀಸರಿಗೆ ಬಂದಿದ್ದು, ನಗರದ ಹಲವೆಡೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಮುಂಬೈ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

Advertisement

ಶನಿವಾರ ಸಂಜೆ ಸುಮಾರು 6 ಗಂಟೆಗೆ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಬಂದಿತ್ತು.

ವಿವರಗಳ ಪ್ರಕಾರ, ಕರೆ ಮಾಡಿದವರು “ಮುಂಬೈನಲ್ಲಿ ಸ್ಫೋಟಗಳು ಸಂಭವಿಸುತ್ತವೆ” ಎಂದಷ್ಟೇ ಹೇಳಿ ಕರೆಯನ್ನು ಕಟ್ ಮಾಡಿದ್ದಾರೆ.

ಕರೆ ಬಂದ ನಂತರ ಹಲವು ತಪಾಸಣೆ ನಡೆಸಲಾಗಿದೆ. ಆದರೆ, ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಪೊಲೀಸರು ಕರೆ ಮಾಡಿದವರ ಪತ್ತೆಗೆ ಯತ್ನಿಸುತ್ತಿದ್ದಾರೆ.

Advertisement

ಈತನ್ಮಧ್ಯೆ, ಹೊಸ ವರ್ಷದ ಆಚರಣೆಯನ್ನು ಪರಿಗಣಿಸಿ, ಮುಂಬೈ ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next