Advertisement

ಚರ್ಚ್‌ಗಳಲ್ಲಿ ಹೊಸ ವರ್ಷಾಚರಣೆ : ವಿಶೇಷ ಬಲಿ ಪೂಜೆ, ಪರಮ ಪ್ರಸಾದದ ಆರಾಧನೆ

10:21 AM Jan 02, 2020 | sudhir |

ಮಂಗಳೂರು / ಉಡುಪಿ: ಕ್ರೈಸ್ತರು ಮಂಗಳವಾರ ರಾತ್ರಿ ನಿಕಟಪೂರ್ವ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ (2020)ವನ್ನು ಸ್ವಾಗತಿಸಿ ಚರ್ಚ್‌ಗಳಲ್ಲಿ ಪರಮ ಪ್ರಸಾದದ ಆರಾಧನೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಿದರು, ಬಲಿಪೂಜೆ ಯಲ್ಲಿ ಪಾಲ್ಗೊಂಡರು. ಬಳಿಕ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Advertisement

ಮಂಗಳೂರಿನ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅವರು ಕೊಡಿಯಾಲ್‌ಬೈಲ್‌ನ ಬಿಷಪ್ಸ್‌ ಹೌಸ್‌ ಚಾಪೆಲ್‌ನಲ್ಲಿ ನಡೆದ ಪರಮ ಪ್ರಸಾದದ ಆರಾಧನೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ಮಂಗಳೂರು ಧರ್ಮ ಪ್ರಾಂತವು ಈ ವರ್ಷದಲ್ಲಿ ಮನುಷ್ಯ ಜೀವ‌ಕ್ಕೆ ಗೌರವ ಕೊಡುವಂತಹ, ರಕ್ಷಿಸುವಂತಹ ಹಾಗೂ ಉನ್ನತಿಯ ಮಟ್ಟಕ್ಕೆ ಏರಿಸಲು ಪೂರಕವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.

ಪ್ರಧಾನ ಗುರು ಮೊ| ಮ್ಯಾಕ್ಸಿಂ ಎಲ್‌. ನೊರೊನ್ಹಾ, ಸಾರ್ವಜನಿಕರ ಸಂಪರ್ಕ ಅಧಿಕಾರಿ ಫಾ| ವಿಕ್ಟರ್‌ ವಿಜ¿å ಲೋಬೊ, ಛಾನ್ಸಲರ್‌ ಫಾ| ವಿಕ್ಟರ್‌ ಜಾರ್ಜ್‌ ಡಿ’ಸೋಜಾ ಸಹಭಾಗಿತ್ವ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next