Advertisement

ಮೇ 5ರಿಂದ ನ್ಯೂ ಇಯರ್‌ ಸೆಲೆಬ್ರೆಶನ್‌

11:45 AM Apr 23, 2017 | |

ಬಿ.ಸಿ.ಪಾಟೀಲ್‌ ನಿರ್ಮಾಣದ, ಪನ್ನಗಭರಣ ನಿರ್ದೇಶನದ “ಹ್ಯಾಪಿ ನ್ಯೂ ಇಯರ್‌’ ಚಿತ್ರ ಮೇ  5 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರತಂಡ ಖುಷಿಯಾಗಿದೆ. ಇದೇ ರೀತಿ ಚಿತ್ರವನ್ನೂ ಜನ ಸ್ವೀಕರಿಸುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಮಾತನಾಡಿದೆ …

Advertisement

“ರಜಾ ಮಜಾವನ್ನು ಈ ಚಿತ್ರದೊಂದಿಗೆ “ಹ್ಯಾಪಿ’ಯಾಗಿ ಕಳೆಯಬಹುದು …- ಹೀಗೆ ಖುಷಿಯಿಂದ ಹೇಳಿಕೊಳ್ಳುತ್ತಾರೆ ನಿರ್ದೇಶಕ ಪನ್ನಗಭರಣ. ಅವರು ಹೀಗೆ ಹೇಳಲು ಕಾರಣ “ಹ್ಯಾಪಿ ನ್ಯೂ ಇಯರ್‌’ ಚಿತ್ರ. ಪನ್ನಗ ಭರಣ ನಿರ್ದೇಶನದ ಚೊಚ್ಚಲ ನಿರ್ದೇಶನದ “ಹ್ಯಾಪಿ ನ್ಯೂ ಇಯರ್‌’ ಚಿತ್ರ ಮೇ 5 ರಂದು ಬಿಡುಗಡೆಯಾಗುತ್ತಿದೆ. ಮೊದಲ ಚಿತ್ರದಲ್ಲಿ ತುಂಬು ತಾರಾಗಣವಿರುವ ಚಿತ್ರ ನಿರ್ದೇಶಿಸಿದ ಖುಷಿ ಇದೆ. ಜೊತೆಗೆ ಇದು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಕೂಡಾ ಅವರಿಗಿದೆ.

“ಇತ್ತೀಚೆಗೆ ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾಗಳನ್ನು ಜನ ಇಷ್ಟಪಡುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಕೆಲವು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಹಾಗಾಗಿ, ನಮ್ಮ ಸಿನಿಮಾ ಕೂಡಾ ಜನರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ. ಇದು ಕೂಡಾ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌. ಒಂದೊಳ್ಳೆಯ ಕಥೆಯನ್ನು ಬೇರೆ ರೀತಿಯಲ್ಲಿ ಹೇಳಲು ಪ್ರಯತ್ನಿಸಿದ್ದೇವೆ’ ಎನ್ನುತ್ತಾರೆ ಪನ್ನಗಭರಣ.

ಮೊದಲೇ ಹೇಳಿದಂತೆ ಇದು ಬಹುತಾರಾಗಣದ ಚಿತ್ರ. ಈ ಚಿತ್ರದಲ್ಲಿ 10 ಪ್ರಮುಖ ಕಲಾವಿದರು ನಟಿಸಿದ್ದಾರೆ. ವಿಜಯ್‌ ರಾಘವೇಂದ್ರ, ಸಾಯಿಕುಮಾರ್‌, ಧನಂಜಯ್‌, ದಿಗಂತ್‌, ಶ್ರುತಿ ಹರಿಹರನ್‌, ಮಾರ್ಗರಿಟ, ರಾಶಿ ಪೊನ್ನಪ್ಪ, ಸೋನು ಗೌಡ ಮತ್ತು ಸೃಷ್ಟಿ ಪಾಟೀಲ್‌ ಅಭಿನಯಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕ ಬಿ.ಸಿ.ಪಾಟೀಲ್‌ ಕೂಡಾ ಇಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಮೊದಲ ನಿರ್ದೇಶನದಲ್ಲೇ ಇಷ್ಟೊಂದು ದೊಡ್ಡ ತಾರಾಬಳಗದ ಜೊತೆ ಕೆಲಸ ಮಾಡಿದ ಖುಷಿ ಕೂಡಾ ಪನ್ನಗಭರಣ ಅವರಿಗಿದೆ.

“ಇದು ಐದು ಜೋಡಿಗಳ ಸುತ್ತ ಸುತ್ತುವ ಕಥೆ. ಒಂದೊಂದು ಟ್ರ್ಯಾಕ್‌ಗಳು ಕೂಡಾ ಅದರ ಪಾಡಿಗೆ ನಡೆಯುತ್ತಿರುತ್ತವೆ. ಒಂದು ಹಂತದಲ್ಲಿ ಎಲ್ಲವೂ ಕನೆಕ್ಟ್ ಆಗುತ್ತದೆ ಮತ್ತು ಪ್ರೇಕ್ಷಕ ಕೂಡಾ ಅದನ್ನು ಇಷ್ಟಪಡುತ್ತಾನೆಂಬ ವಿಶ್ವಾಸವಿದೆ’ ಎನ್ನುವ ಪನ್ನಗಭರಣ ತಮ್ಮ ನಿರ್ದೇಶನ ಕನಸು, ಪಾತ್ರಗಳ ಆಯ್ಕೆಯ ಬಗ್ಗೆಯೂ ಮಾತನಾಡುತ್ತಾರೆ. “ನನಗೆ ನಿರ್ದೇಶನ, ಬಹಳ ಇಷ್ಟವಾದ ವಿಷಯ.

Advertisement

ಅದಕ್ಕಾಗಿ ಇಷ್ಟು ವರ್ಷ ಕಾದೆ ಮತ್ತು ಅದೀಗ ನಿಜವಾಗಿದೆ. ಒಂದೊಂದು ಪಾತ್ರ ಬರೆಯುವಾಗಲೂ, ಆ ಪಾತ್ರಕ್ಕೆ ಯಾರಿದ್ದರೆ ಚೆನ್ನ ಎಂದು ನಾನು ಆಸೆ ಪಟ್ಟಿದ್ದೆನೋ, ಅದು ನಿಜವಾಗಿದೆ. ಒಳ್ಳೆಯ ತಂಡವೊಂದು ಸಿಕ್ಕಿದೆ. ಇದು ಇಂಥಾ ಜಾನರ್‌ನ ಸಿನಿಮಾ ಎಂದು ಹೇಳುವುದು ಕಷ್ಟ. ಕಾಮಿಡಿ, ಥ್ರಿಲ್ಲರ್‌ ಎಲ್ಲಾ ಅಂಶಗಳೂ ಈ ಚಿತ್ರದಲ್ಲಿದೆ. ಐದು ಕಥೆಗಳ ಮಿಕÏ$cರ್‌ ಈ ಚಿತ್ರ ಎಂದರೆ ತಪ್ಪಿಲ್ಲ’ ಎಂದು ಸಿನಿಮಾ ಬಗ್ಗೆ ಮಾತನಾಡುತ್ತಾರೆ ಪನ್ನಗಭರಣ. 

“ಸೆಲ್ಯೂಟ್‌’ ನಂತರ ಬಿ.ಸಿ.ಪಾಟೀಲ್‌ ನಿರ್ಮಾಣ ಮಾಡಿದ ಸಿನಿಮಾವಿದು. ಪನ್ನಗ ಅವರು ಮಾಡಿಕೊಂಡಿರುವ ಕಥೆ ಕೇಳಿ ಖುಷಿಯಾದ ಬಿ.ಸಿ.ಪಾಟೀಲ್‌, ಈಗ “ಹ್ಯಾಪಿ’ಯಾಗಿದ್ದಾರಂತೆ. ಅದು ಪನ್ನಗಭರಣ ಅವರಿಗೂ ಖುಷಿ ಕೊಟ್ಟಿದೆ.  “ಬಿ.ಸಿ.ಪಾಟೀಲ್‌ ಅವರಲ್ಲೂ ಒಬ್ಬ ನಿರ್ದೇಶಕ ಇರುವುದರಿಂದ ಅವರಿಗೆ ಸಿನಿಮಾಕ್ಕೆ ಏನೇನು ಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಹಾಗಾಗಿ, “ಹ್ಯಾಪಿ ನ್ಯೂ ಇಯರ್‌’ ಕೂಡಾ ನನ್ನ ಕನಸಿನಂತೆ ಮೂಡಿಬಂದಿದೆ’ ಎಂದು ಬಿ.ಸಿ.ಪಾಟೀಲ್‌ ಬಗ್ಗೆ ಹೇಳುತ್ತಾರೆ ಪನ್ನಗ. 

ಅದ್ಧೂರಿ ಬಿಡುಗಡೆ
ಚಿತ್ರ ಮೇ 5 ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರ ಎಲ್ಲಾ ಕಡೆಗೂ ತಲುಪಬೇಕೆಂಬ ಉದ್ದೇಶದಿಂದ ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡುತ್ತಿದ್ದಾರೆ ಪಾಟೀಲರು. ಜಯಣ್ಣ ಈ ಸಿನಿಮಾದ ವಿತರಣೆ ಪಡೆದಿದ್ದಾರೆ. ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ “ಹ್ಯಾಪಿ ನ್ಯೂ ಇಯರ್‌’ ಬಿಡುಗಡೆಯಾಗುತ್ತಿದೆ. ಚಿತ್ರ ವಿದೇಶದಲ್ಲೂ ಬಿಡುಗಡೆಯಾಗುತ್ತಿದ್ದು, ಅಲ್ಲಿನ ವಿತರಣಾ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗಿದೆಯಂತೆ.  

ಇನ್ನು, ಸಿನಿಮಾ ಜನರಿಗೆ ತಲುಪಬೇಕೆಂಬ ಕಾರಣಕ್ಕಾಗಿ ಚಿತ್ರತಂಡ ಕೂಡಾ ವಿವಿಧ ಯೋಜನೆಗಳನ್ನು ರೂಪಿಸಿದೆ. ಈಗಾಗಲೇ “ಹ್ಯಾಪಿ ನ್ಯೂ ಇಯರ್‌ ರಥ’ ಎಂಬ ಕಾನ್ಸೆಪ್ಟ್ನಲ್ಲಿ ಎಲ್ಲಾ ಕಡೆ ಚಿತ್ರದ ಪ್ರಚಾರ ಕೈಗೊಳ್ಳಲಾಗುತ್ತಿದೆ. ಈ ರಥದಲ್ಲಿ ಚಿತ್ರದ ಹಾಡು, ಟ್ರೇಲರ್‌ಗಳನ್ನು ಪ್ರದರ್ಶಿಸುವ ಜೊತೆಗೆ ಚಿತ್ರದಲ್ಲಿ ನಟಿಸಿದ ಕಲಾವಿದರು ಕೂಡಾ ಹೋಗಿ ತಮ್ಮ ಸಿನಿಮಾ ಬಗ್ಗೆ ಪ್ರಚಾರ ಮಾಡಲಾಗಿದೆ.

ಪಾಟೀಲರ ಕನಸು
“ಸೆಲ್ಯೂಟ್‌’ ಆದ ನಂತರ ಪಾಟೀಲ್‌ ಯಾವುದೇ ಸಿನಿಮಾ ನಿರ್ಮಿಸಿಲ್ಲ. ಈಗ “ಹ್ಯಾಪಿ ನ್ಯೂ ಇಯರ್‌’ ಮಾಡಿದ್ದಾರೆ. ಇದು ಅವರ ನಿರ್ಮಾಣದ 15 ನೇ ಸಿನಿಮಾ.  ಪಾಟೀಲರು ಮತ್ತೆ ಸಿನಿಮಾ ಮಾಡಲು ಕಾರಣ ಜನಗಳ ಪ್ರೀತಿಯಂತೆ. “ಒಂದೇ ಒಂದು ದಿನಕ್ಕೂ ಜನ ಮತ್ತೆ ಯಾವಾಗ ಚುನಾವಣೆಗೆ ನಿಲ್ತಿàರಾ ಅಂತಾಗಲೀ ಅಥವಾ ಬೇರೆ ಪ್ರಶ್ನೆಯನ್ನಾಗಲೀ ಕೇಳುವುದಿಲ್ಲ. ಎಲ್ಲರೂ ನಾನ್ಯಾಕೆ ಸಿನಿಮಾ ಮಾಡುತ್ತಿಲ್ಲ ಅಂತ ಕೇಳುತ್ತಾರೆ.

ಹಾಗಾಗಿ ಚಿತ್ರರಂಗದಿಂದ ದೂರ ಉಳಿಯಬಾರದು ಎಂಬ ಕಾರಣಕ್ಕೆ ಮತ್ತೆ ಸಿನಿಮಾ ಮಾಡುವುದಕ್ಕೆ ಬಂದಿದ್ದೇನೆ’ ಎಂದು ತಾವು ನಿರ್ಮಾಣಕ್ಕೆ ವಾಪಾಸಾದ ಬಗ್ಗೆ ಹೇಳುತ್ತಾರೆ ಪಾಟೀಲ್‌. ಇನ್ನು, ಸಿನಿಮಾ ಚೆನ್ನಾಗಿ ಮೂಡಿಬಂದ ಖುಷಿ ಕೂಡಾ ಅವರಿಗಿದೆ. “ಹ್ಯಾಪಿ ನ್ಯೂ ಇಯರ್‌’ ಟೈಟಲ್‌ನಂತೆ ಚಿತ್ರದಲ್ಲೊಂದು ಒಳ್ಳೆಯ ಪಾರ್ಟಿ ಸಾಂಗ್‌ ಬೇಕೆಂಬ ಆಸೆ ಪಾಟೀಲರಿಗಿತ್ತಂತೆ. ಅದು ಕೂಡಾ ಈಗ ಈಡೇರಿದೆ. “ಚಿತ್ರದಲ್ಲಿ ತುಂಬಾ ಜನ ಕಲಾವಿದರಿದ್ದಾರೆ.

ಆದರೆ, ಎಲ್ಲರಿಗೂ ಒಟ್ಟಿಗೆ ಸೇರುವ ಅವಕಾಶ ಸಿಕ್ಕಿರಲಿಲ್ಲ. ನ್ಯೂ ಇಯರ್‌ ಹಾಡಿನ ಮೂಲಕ ಆ ಅವಕಾಶ ಸಿಕ್ಕಿದೆ. ನಾವೆಲ್ಲರೂ ಆ ಹಾಡಿನಲ್ಲಿ ಕಾಣಿಸಿಕೊಂಡಿದ್ದೇವೆ’ ಎನ್ನಲು ಅವರು ಮರೆಯೋದಿಲ್ಲ. ಈ ಚಿತ್ರದ ಮೂಲಕ ಬಿ.ಸಿ.ಪಾಟೀಲ್‌ ಮಗಳು ಸೃಷ್ಟಿ ಪಾಟೀಲ್‌ ಚಿತ್ರರಂಗಕ್ಕೆ ಲಾಂಚ್‌ ಆಗುತ್ತಿದ್ದಾರೆ. ಅವರಿಗೂ ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ತುಂಬಾ ಲೈವಿÉಯಾಗಿರುವ, ಲೈಫ್ ಅನ್ನು ಬೇರೆ ತರಹ ನೋಡುವ ಹಾಗೂ  ಸ್ವತಂತ್ರಳಾಗಿ ಓಡಾಡಿಕೊಂಡಿರುವ ಪಾತ್ರವಂತೆ. 

Advertisement

Udayavani is now on Telegram. Click here to join our channel and stay updated with the latest news.

Next