ಮಂಡ್ಯ: ಹೊಸ ವರ್ಷಾಚರಣೆ ಸಂಭ್ರಮವನ್ನು ಇಮ್ಮಡಿಗೊಳಿಸುವ ಆಚರಣೆಗಾಗಿ ಜನರ ಅಭಿರುಚಿಗೆ ತಕ್ಕಂತೆ ನಗರದ ಬಿಜೆಪಿ ಮುಖಂಡ ಹಾಗೂ ಬೇಕ್ ಪಾಯಿಂಟ್‌ನ ಮಾಲೀಕ ಅರವಿಂದ್ ಕೇಕ್‌ಗಳ ಪ್ರದರ್ಶನ ಮಾರಾಟ ಮೇಳ ಆಯೋಜಿಸಿದ್ದಾರೆ.
ಎರಡು ದಿನಗಳ ಕಾಲ ತಮ್ಮ ಬೇಕರಿ ಆವರಣದಲ್ಲೇ ಬೇಕರಿಯ 21ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ 11ನೇ ವರ್ಷದ ಬೃಹತ್ ಕೇಕ್ ಮೇಳ ಆಯೋಜಿಸಿದ್ದಾರೆ. ಇದು ಕೇಕ್ ಪ್ರಿಯರು ಮತ್ತು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ಒಂದಕ್ಕೊಂದು ವಿಭಿನ್ನ: ವಿಶೇಷವೆಂದರೆ ಮೇಳದಲ್ಲಿ ಗ್ರಾಹಕರ ಸಮ್ಮುಖದಲ್ಲೇ ಕೇಕ್‌ಗಳನ್ನು ತಯಾರಿಸಿ ವಿತರಿಸಲಾಗುತ್ತಿದೆ. ಬ್ರೆಡ್, ಕ್ರೀಮ್, ಹಣ್ಣುಗಳು, ಚಾಕೋಲೇಟ್ ಚಿಪ್ಸ್, ಅಲಂಕಾರಿಕ ಸಿಹಿ ಸಿನಿಸುಗಳನ್ನು ಬಳಸಿ ಕೇಕ್ ತಯಾರಿಸಲಾಗುತ್ತಿದೆ. ಒಂದಕ್ಕೊಂದು ವಿಭಿನ್ನವಾಗಿರುವ ಕೇಕ್‌ಗಳು ಜನರ ಗಮನ ಸೆಳೆಯುತ್ತಿವೆ.
ಮೊಸಳೆ, ಹೂವಿನ ಬೊಕ್ಕೆ ಮಾದರಿಯ ಕೇಕ್: ಗಿಟಾರ್, ಡಾಲ್, ಬಾರ್ಬಿ,, ಹಾರ್ಟ್, ಗಂಡು ಭೇರುಂಡ, ಚೋಟಾಭೀಮ್, ಪಿರಮಿಡ್, ಗಿಫ್ಟ್ ಬ್ಯಾಗ್, ಪೆಂಗ್ವಿನ್, ಮಿಕ್ಕಿಮೌಸ್, ಸೂರ್ಯ, ನವಿಲು, ಪಾರಿವಾಳ ಸೇರಿದಂತೆ ಹಕ್ಕಿ ಪಕ್ಷಿಗಳು, ಮೊಸಳೆ, ಹೂವಿನ ಬೊಕ್ಕೆ ಮಾದರಿಯ ಕೇಕ್‌ಗಳು, ರುಚಿಕರ ಪೇಸ್ಟ್ರಿಗಳು ಸಿಗುತ್ತಿದೆ. ಅಲ್ಲದೆ, ಕಲ್ಲಂಗಡಿ, ಹಲಸಿನ ಹಣ್ಣು ಮಾದರಿಯ ಕೇಕ್‌ಗಳು ಜನರನ್ನು ಆಕರ್ಷಿಸುತ್ತಿವೆ. ನಾನಾ ಫ್ಲೇವರ್‌ಗಳ ಕ್ರೀಮ್ ಕೇಸ್‌ಗಳ ಜತೆಗೆ ಕಿಲೋ ತೂಕದ ಹನಿಕೇಕ್ ಗಳಲ್ಲಿ ಮೇಳದಲ್ಲಿಡಲಾಗಿದೆ.
1ರಿಂದ 5 ಕಿಲೋ ತೂಕದ ಕೇಕ್‌ಗಳು ಮಾರಾಟಕ್ಕಿವೆ. ಕೇಕ್ ಮೇಳಕ್ಕೆ ಆಗಮಿಸಿದ್ದ ಗ್ರಾಹಕರು ಕೇಕ್‌ಗಳ ವೀಕ್ಷಣೆ ಮಾಡುವುದಲ್ಲದೆ, ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು. ಕೇಕ್ ತಯಾರಿಕೆ ಖುದ್ದು ನೋಡಿ ತಮ ಗಿಷ್ಟವಾದ ಕೇಕ್ ಖರೀದಿಸಿ ದ್ದೇವೆ. ಮೇಳ ಚೆನ್ನಾಗಿದ್ದು, ಈ ವರ್ಷ ಸ್ಪೆಷಲ್ ಆಗಿ ಹೊಸ ವರ್ಷವನ್ನು ಸ್ವಾಗತಿ ಸಲು ಕೇಕ್ ಕೊಂಡೊ ಯ್ಯುತ್ತಿದ್ದೇವೆ ಎಂದು ಗ್ರಾಹಕರೊಬ್ಬರು ಹೇಳಿದರು.