Advertisement
ಸಿಂಹಕೂಡ ತಾನು ನಡೆದುಬಂದ ದಾರಿಯನ್ನು ಆಗಾಗ್ಗೆ ತಿರುಗಿ ನೋಡುತ್ತದೆ. ನಾನು ಎಷ್ಟು ದೂರ ನಡೆದೆ? ಈ ದಾರಿಯುದ್ದಕ್ಕೂ ಏನಿತ್ತು? ಏನಿರಲಿಲ್ಲ? ಎಂಬುದನ್ನು ತಿಳಿಯಲು ಮಾಡಿಕೊಳ್ಳುವ ಒಂದು ಸಣ್ಣ ಟೆಸ್ಟ್ ಅದು. ನಮ್ಮಪ್ಪ- “ಯಾವ ವಸ್ತುವೇ ಆಗಿರಲಿ, ಅದನ್ನು ತಿಪ್ಪೆಗೆ ಹಾಕಿದ್ರೂ ಲೆಕ್ಕ ಇಡಬೇಕು’ ಅಂತ ಹೇಳ್ತಿದ್ರು. ವಚನಕಾರರು- “ಹಿಂದಣ ಹೆಜ್ಜೆಯನ್ನರಿತಲ್ಲದೆ ಮುಂದಣ ಹೆಜ್ಜೆಯನ್ನು ಇಡಲಾಗದು’ ಎಂದಿದ್ದ ಮಾತು ಈ ಸಂದರ್ಭದಲ್ಲಿ ಬಿಟ್ಟೂಬಿಡದೆ ನೆನಪಾಗುತ್ತದೆ.
Related Articles
Advertisement
ಹಾಗೆ ನೋಡಿದರೆ, ಪ್ರತಿದಿನವೂ ಹೊಸದೇ! ಪ್ರತಿಕ್ಷಣವೂ ಒಳ್ಳೆಯದೇ.ಕೆಲವರು ಈ ದಿನವೇ ಶುಭದಿನವು ಅನ್ನುತ್ತಾಕೆಲಸ ಆರಂಭಿಸಿ ಯಶಕಾಣುತ್ತಾರೆ. ಅದು ಟೂ ಗುಡ್! ಇನ್ನು ಕೆಲವರು ಒಂದುಕೆಲಸವನ್ನು ಇಂಥದೇ ದಿನದಲ್ಲಿ, ಇಷ್ಟೇ ಸಮಯದಲ್ಲಿ ಆರಂಭಿಸಬೇಕು ಎಂದು ಕಾಯುತ್ತಾರೆ. ಅದನ್ನು ಕೂಡ ತಪ್ಪೆನ್ನಲು ಸಾಧ್ಯವಿಲ್ಲ.ಕಾರಣ, ಅವರವರ ನಂಬಿಕೆ ಅವರಿಗೆ ದೊಡ್ಡದು. ಗಮನಾರ್ಹ ಸಂಗತಿ ಎಂದರೆ- ಹೀಗೆ ಕಾದು ಕಾದು ಶುರುವಿಟ್ಟುಕೊಂಡ ಹಲವು ಕೆಲಸಗಳಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿದೆ. ಹಾಗೊಂದು ವೇಳೆ ನೀವು “ಒಂದು ಶುಭ ದಿನಕ್ಕಾಗಿ’ ಹುಡುಕುತ್ತಿದ್ದರೆ ಹೀಗೆ ಮಾಡಿ. ಕ್ಯಾಲೆಂಡರ್ ಬದಲಾವಣೆಯ ಮೊದಲ ದಿನವನ್ನು ಆಯ್ದುಕೊಳ್ಳಿ. ಮುನ್ನೂರ ಅರವತ್ತೈದು ದಿನಗಳ ಒಂದು ಪ್ಯಾಕನ್ನುಕೈಯಲ್ಲಿಟ್ಟುಕೊಂಡು ಪ್ರತಿಯೊಂದನ್ನೂ ಸಾರ್ಥಕವಾಗಿ ಬಳಸಿಕೊಳ್ಳುತ್ತಾ ಹೊರಡಿ.
ಉಳಿದಿದ್ದೆಷ್ಟು? ಜಾರಿದ್ದೆಷ್ಟು? :
ಮಳೆ, ಗಾಳಿ, ಬಿಸಿಲು, ಚಳಿ ಈ ಯಾವುದರಲ್ಲಿ ಏನೇ ವ್ಯತ್ಯಾಸವಾದರೂ,ಕಾಲ ನಿಲ್ಲುವುದಿಲ್ಲ. ಅದುಕೊಟ್ಟು ಹೋಗುವ ಉಡುಗೊರೆಗಳು ಮತ್ತುಕಲೆಗಳು ಮಾತ್ರ ಉಳಿಯುತ್ತವೆ.ಕಾಲದ ಹರಿವಿನಿಂದ ತುಂಬಿಕೊಂಡಬೊಗಸೆಯಲ್ಲಿ ಉಳಿದಿದ್ದುಮತ್ತು ಜಾರಿದ್ದನ್ನು ಲೆಕ್ಕ ಹಾಕಿಕೊಳ್ಳಬೇಕು. ಜಾರಿ ಹೋಗಿದ್ದರಲ್ಲಿ ಬೇಕಾದ್ದೆಷ್ಟು? ಉಳಿದಿದ್ದರಲ್ಲಿ ಬೇಡವಾದದ್ದೆಷ್ಟು? ನೋಡಿಕೊಳ್ಳಿ. ಒಂದು ಸಣ್ಣ ಅವಲೋಕನ, ನಾಳೆಯ ದಿನಗಳಿಗೆ ಒಂದು ಗೈಡ್ ಆಗುತ್ತದೆ. ಕಳೆದ ವರ್ಷ ಮೊದಲ ದಿನ ತೂಕ ಇಳಿಸಬೇಕು ಅಂದುಕೊಂಡಿದ್ದೆ. ಅದುಸಾಧ್ಯವಾಯಿತಾ? ಅವಳನ್ನು ಮರೆಯುವ ನಿರ್ಧಾರ ಮಾಎಇದ್ದೆ. ಅದರಲ್ಲಿ ಯಶ ಸಿಕ್ಕಿತಾ? ಸಣ್ಣ ಉಳಿತಾಯ ಮಾಡಬೇಕೆಂದಿದ್ದೆ, ಅದು ಸಾಧ್ಯವಾಯಿತಾ?… ಹೀಗೆ ನೂರಾರು ಇರುತ್ತವೆ. ಬೇಡವಾದ್ದನ್ನು ಡಿಲೀಟ್ ಮಾಡಿ. ಬೇಕಾದ್ದನ್ನು ಜತನ ಮಾಡಿಕೊಳ್ಳಿ.
ಹೊಸ ದಿನ- ಹೊಸ ನಿರ್ಧಾರ :
ಬಹುತೇಕರ ಮನಸ್ಸಿನಲ್ಲಿ ಈ ವರ್ಷ ನಾನು ಏನೆಲ್ಲಾ ಮಾಡಬೇಕು ಅನ್ನುವುದರ ಬಗ್ಗೆ ಪ್ರತಿವರ್ಷವೂ ಒಂದು ಪ್ಲಾನ್ ಸಿದ್ಧವಾಗಿರುತ್ತದೆ. ಅಷ್ಟೇ ಏಕೆ, ಮೊದಲ ದಿನ ಅದು ಯಶಸ್ವಿಯಾಗಿಜಾರಿಯಾಗುತ್ತದೆ. ಎರಡನೇ ಮತ್ತು ಮೂರನೇ ದಿನವೂಕೂಡ ಯಶಸ್ವಿ ಆಟವೇ. ಆದರೆ ನಾಲ್ಕನೇ ದಿನ ಸ್ವಲ್ಪಕುಂಟುತ್ತದೆ.ಐದನೇ ದಿನ ಸ್ವಘೋಷಿತ ರಜಾ. ಆರನೇ ದಿನ ಮತ್ತೆ ಪ್ರಯತ್ನ ಶುರುವಾಗುತ್ತದೆ. ಆದರೆ ಪೂರ್ತಿಯಶಸ್ಸಾಗುವುದಿಲ್ಲ! ಹದಿನೈದು ದಿನಕಳೆಯುವ ಹೊತ್ತಿಗೆ ಹೊಸ ವರ್ಷದ ಮೊದಲದಿನ ಮಾಡಿಕೊಂಡಿದ್ದ ಸಂಕಲ್ಪಗಳು ಮರೆತೇ ಹೋಗಿರುತ್ತವೆ. ಇದನ್ನು ಆರಂಭ ಶೂರತ್ವ ಅನ್ನುತ್ತಾರೆ.
ನಮ್ಮಲ್ಲಿ ಹೆಚ್ಚಿನವರು ಆರಂಭಶೂರರು. ಮೊದಲ ದಿನದ ನಿರ್ಧಾರವೇ ವರ್ಷವಿಡೀ ಉಳಿಯಬೇಕು. ಹಾಗೆ ಬದುಕುವುದು ಸುಲಭವಲ್ಲ. ಹಾಗಂತಕಷ್ಟಕೂಡ ಅಲ್ಲ. ಈ ವರ್ಷ ಖಂಡಿತ ಈ ಬಾರಿ ನನಗೊಂದು ರ್‍ಯಾಂಕ್ ದಕ್ಕುತ್ತದೆ. ಅಪ್ಪ- ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನನ್ನ ಸಂಸಾರಕ್ಕೆ ಇನ್ನಷ್ಟು ಸಮಯಕೊಡ್ತೀನಿ. ಈ ವರ್ಷದಲ್ಲಿ ಇಷ್ಟೆಲ್ಲವನ್ನುಓದಿ ಮುಗಿಸಬೇಕು. ಇನ್ಮೆàಲೆ ಖಂಡಿತ ಬೆಳಗ್ಗೆ ಐದಕ್ಕೇ ಎದ್ದು ವಾಕ್ ಹೊರಡಬೇಕು, ಸಿಗರೇಟ್ ಬಿಡಬೇಕು, ಮನೆಯ ಜವಾಬ್ದಾರಿ ತಗೋಬೇಕು… ಈ ತರಹದ ಪ್ಲಾನ್‌ಗಳು ಎಲ್ಲರ ಮನಸ್ಸಿನಲ್ಲಿರುತ್ತವೆ. ಅವನ್ನೆಲ್ಲಾ ಜಾರಿಗೆ ತರುವ ಗಟ್ಟಿ ಮನಸ್ಸು ಜೊತೆಗಿರಬೇಕು. ಹೊಸ ಸಂಕಲ್ಪಗಳನ್ನು ಈಡೇರಿಸುವಂಥ ಮನಸ್ಥಿತಿಯನ್ನು ನಿಮ್ಮದಾಗಿಸಿಕೊಳ್ಳಲು, ಮಾನಸಿಕವಾಗಿ ಈ ಕ್ಷಣದಿಂದಲೇ ಸಿದ್ಧರಾಗಿ. ಇಷ್ಟರೆಲ್ಲಾ ಜೊತೆಯಾಗುವ ಹೊಸ ವರ್ಷ ನಿಮಗೆ ಶುಭವನ್ನು ತರಲಿ, ಹೆಜ್ಜೆಹೆಜ್ಜೆಗೂ ಗೆಲುವನ್ನು ಕೊಡಲಿ
– ಸದಾಶಿವ್ ಸೊರಟೂರು