ಕಳೆದ ವರ್ಷ ಅಯೋಧ್ಯೆ ವಿಚಾರದಲ್ಲಿ ಸುಪ್ರೀಂ ಕೋರ್ಟಿನಿಂದ ತೀರ್ಪು ಹೊರಬಿತ್ತು. ಈ ಹೊಸ ವರ್ಷದಲ್ಲೇ ಅಯೋಧ್ಯೆಯಲ್ಲಿ ರಾಮ ದೇಗುಲ ನಿರ್ಮಾಣ ಕಾರ್ಯಾರಂಭವಾಗಲಿದೆ. ಈಗಾಗಲೇ ಶಿಲಾನ್ಯಾಸ ನೆರವೇರಿರುವುದರಿಂದ ಸಂಕ್ರಾಂತಿ ಅಥವಾ ಶ್ರೀರಾಮನವಮಿಗೆ ಮಂದಿರ ನಿರ್ಮಾಣದ ಕೆಲಸ ಅಧಿಕೃತವಾಗಿ ಶುರುವಾಗಲಿದೆ. 1.25 ಲಕ್ಷ ಕ್ಯೂಬಿಕ್ ಫೀಟ್ ಕಂಬಗಳು ಸಿದ್ಧವಾಗಿವೆ. ಅಗತ್ಯವಿರುವುದು 1.75 ಕ್ಯೂಬಿಕ್ ಫೀಟ್ ಮರಳು ಕಂಬಗಳು ಮಾತ್ರ. ಕ್ರೌಡ್ ಫಂಡಿಂಗ್(ಜನರಿಂದ ದೇಣಿಗೆ) ಮೂಲಕ ಹೈಟೆಕ್ ನಿರ್ಮಾಣಕ್ಕೆ ಸರ್ಕಾರ ತೀರ್ಮಾನಿಸಿದೆ. 2024ರ ಹೊತ್ತಿಗೆ ದೇಗುಲ ಸಂಪೂರ್ಣ.
Advertisement
ಆಟೊಮೊಬೈಲ್ಕಳೆದ ವರ್ಷ ಜಿನೇವಾದಲ್ಲಿ ಜರುಗಿದ ಆಟೋ ಎಕ್ಸ್‌ಪೋನಲ್ಲಿ ಟಾಟಾ ಮೋಟಾರ್ ಸಂಸ್ಥೆ ಫ್ಯೂಚರಿಸ್ಟಿಕ್ ಆದ ಕಾನ್ಸೆಪ್ಟ್ ಕಾರೊಂದನ್ನು ಪ್ರದರ್ಶಿಸಿತ್ತು. ಎಚ್2ಎಕ್ಸ್ ಎಂಬ ಹೆಸರಿನ ಆ ಕಾರು ಆಗಸ್ಟ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸುದ್ದಿಯಿದೆ. ಇದರಲ್ಲಿ ಕೇವಲ ಪೆಟ್ರೋಲ್ ಆವೃತ್ತಿ ಮಾತ್ರವೇ ಲಭ್ಯವಾಗಲಿದೆ. ಮಹೀಂದ್ರಾ ಕೆಯುವಿ 100 ಕಾರಿಗೆ ಇದು ಪ್ರತಿಸ್ಪರ್ಧೆ ನೀಡಲಿದೆ.
Related Articles
Advertisement
ಒಂದು ಕಾಲದಲ್ಲಿ ಮಧ್ಯಮ ವರ್ಗದ ಭಾರತೀಯರ ಕಣ್ಮಣಿಯಾಗಿದ್ದ ಬಜಾಜ್ ಚೇತಕ್ ಮತ್ತೆ ರೀಎಂಟ್ರಿ ಕೊಡುತ್ತಿದೆ. ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿರುವ ಚೇತಕ್ ಈ ವರ್ಷದ ಮೊದಲಾರ್ಧದೊಳಗೆ ಮಾರುಕಟ್ಟೆಗೆ ಬರಲಿದ್ದು, ಮತ್ತೆ ತನ್ನ ಜಾದೂವನ್ನು ಮರುಕಳಿಸುವುದೇ ಇಲ್ಲವೇ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ದಕ್ಷಿಣ ಕೊರಿಯಾದ ಎರಡನೇ ಅತಿ ದೊಡ್ಡ ಅಟೊಮೊಬೈಲ್ ಸಂಸ್ಥೆ ಕಿಯಾ ಮಧ್ಯಮ ವರ್ಗದ ಗ್ರಾಹಕರಿಗಾಗಿ ರಿಯೋ ಹೆಸರಿನ ಕಾರನ್ನು ವಿನ್ಯಾಸಗೊಳಿಸಿದೆ. 2020ರ ಆಗಸ್ಟ್ ತಿಂಗಳಲ್ಲಿ ಕಾರು ಬಿಡುಗಡೆಯಾಗುವ ನಿರೀಕ್ಷೆ ಇದೆ. 6 ಏರ್‌ಬ್ಯಾಗುಗಳು, ಟೈರ್ ಪ್ರಷರ್ ಮಾನಿಟರಿಂಗ್ ಸಿಸ್ಟಮ್, ಆ್ಯಕ್ಸಿಡೆಂಟ್ ವಾರ್ನಿಂಗ್ ಸಿಸ್ಟಂ ಮುಂತಾದ ಸವಲತ್ತುಗಳನ್ನು ಸಂಸ್ಥೆ ಘೋಷಿಸಿರುವುದರಿಂದ ಕಾರು ಪ್ರಿಯರು ಕಾತರರಾಗಿದ್ದಾರೆ.
ಮಾರುತಿ ಸುಝುಕಿ ವ್ಯಾಗನ್‌ಆರ್ ಕಾರು ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಜಪಾನಿ ಆಟೊಮೊಬೈಲ್ ಸಂಸ್ಥೆ ಸುಝುಕಿ ಈಗಾಗಲೇ ಟೊಯೊಟಾ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು. ಎಲೆಕ್ಟ್ರಿಕ್ ಕಾರು ತಯಾರಿಕೆಯಲ್ಲಿ ಅವುಗಳ ನೆರವು ಪಡೆದುಕೊಳ್ಳುತ್ತಿದೆ. ಮೇ ತಿಂಗಳಲ್ಲಿ ಗ್ರಾಹಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಇದರ ಪ್ರಮುಖ ಭಾಗವಾದ ಲೀಥಿಯಂ ಬ್ಯಾಟರಿ ನಮ್ಮ ದೇಶದಲ್ಲೇ ಅಭಿವೃದ್ಧಿಗೊಳ್ಳುತ್ತಿರುವುದು ವಿಶೇಷ.
ಅಂತರಿಕ್ಷಭಾರತದ ಚಂದ್ರಯಾನ-2 ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ನಿಯಂತ್ರಣ ತಪ್ಪಿರಬಹುದು. ಆದರೆ ಈ ವರ್ಷ ಚಂದ್ರಯಾನ-3 ಯೋಜನೆಯಲ್ಲಿ ಮರಳಿ ಯತ್ನವ ಮಾಡುತ್ತಿರುವ ವಿಜ್ಞಾನಿಗಳು ಯಶಸ್ವಿಯಾಗಲಿರುವ ಆಶಾವಾದ ಸಮಸ್ತ ಭಾರತೀಯರದು. ನವೆಂಬರ್‌ನಲ್ಲಿ ಯೋಜನೆ ನೆರವೇರುವ ನಿರೀಕ್ಷೆ ಇದೆ. ಇಸ್ರೋ ಸೌರಮಂಡಲಕ್ಕೆ ಬೆಳಕು ನೀಡುತ್ತಿರುವ ಸೂರ್ಯನ ಬಳಿಗೆ ಅಂತರಿಕ್ಷನೌಕೆಯನ್ನು ಕಳಿಸುವ ಯೋಜನೆ “ಆದಿತ್ಯ ಎಲ್ 1 ಮಿಷನ್’. ಏಪ್ರಿಲ್ ತಿಂಗಳಲ್ಲಿ ಹಾರಿಬಿಡಲಾಗುವುದೆಂದುಕೊಂಡಿರುವ ಈ ಉಪಗ್ರಹ, ಸೂರ್ಯನ ವಾತಾವರಣವನ್ನು ಸಮೀಪದಿಂದ ಅಧ್ಯಯನ ನಡೆಸಲಿದೆ.