Advertisement

ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು

07:18 PM Jul 29, 2020 | Karthik A |

ಮಣಿಪಾಲ: ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್‌ ‌ ತನ್ನ ಪ್ಲಾಟ್ಫಾರ್ಮ್ ಅನ್ನು ನಿರಂತರವಾಗಿ ನವೀಕರಿಸುತ್ತಾ ಬಂದಿದೆ.

Advertisement

ಇದೀಗ ಫೇಸ್‌ಬುಕ್‌ ಒಡೆತನದ ಮೆಸೇಜಿಂಗ್‌ ಅಪ್ಲಿಕೇಶನ್‌ ಮತ್ತೊಂದು ವೈಶಿಷ್ಟ್ಯವನ್ನು ಜಾರಿಗೆ ತಂದಿದೆ.

ಸಾಮಾನ್ಯವಾಗಿ ಹೆಚ್ಚಿ ಕಿರಿಕಿರಿ ಆಗುವ ಗ್ರೂಪ್‌ಗಳನ್ನು ಇದು ನಿಯಂತ್ರಿಲಿದೆ. ಈ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ.

ವಾಟ್ಸ್ಯಾಪ್‌‌ ʼಮ್ಯೂಟ್‌ ಆಲ್ವೇಸ್‌’ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಈ ವಿಶೇಷ ಫೀಚರ್‌ ನಮಗೆ ಕಿರಿಕಿರಿ ಎನಿಸುವ ಗ್ರೂಪ್‌ಗಳ ನೋಟಿಫಿಕೇಶನ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಈಗಿನಂತೆ ಗ್ರೂಪ್‌ಗಳ ನೋಟಿಫಿಕೇಶನ್‌ಗಳನ್ನು ಮ್ಯೂಟ್‌ ಮಾಡಲು ವಾಟ್ಸ್ಯಾಪ್‌‌ ತನ್ನಬಳಕೆದಾರರಿಗೆ ಮೂರು ಆಯ್ಕೆಗಳನ್ನು ನೀಡುತ್ತದೆ. ಇದು ಎಂಟು ಗಂಟೆ, ಒಂದು ವಾರ ಮತ್ತು ಒಂದು ವರ್ಷವನ್ನು ಒಳಗೊಂಡಿದೆ. ಆದರೆ ಈಗ ಕಂಪನಿಯು ಈ ಮಿತಿಯನ್ನು ವಿಸ್ತರಿಸಲು ಮುಂದಾಗಿದೆ.

Advertisement

ಸದ್ಯದ ಮಾಹಿತಿ ಪ್ರಕಾರ ಈಗಿರುವ ಒಂದು ವರ್ಷದ ಆಯ್ಕೆಯನ್ನು ʼಮ್ಯೂಟ್‌ ಆಲ್ವೇಸ್‌’ ಬಟನ್ನೊಂದಿಗೆ ಬದಲಾಯಿಸಲು ವಾಟ್ಸ್ಯಾಪ್‌‌‌ ಯೋಜಿಸುತ್ತಿದೆ. ಅನಾವಶ್ಯಕ ಗ್ರೂಪ್‌ಗಳ ನೋಟಿಪಿಕೇಶನ್‌ಗಳನ್ನು ಶಾಶ್ವತವಾಗಿ ಮ್ಯೂಟ್‌ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ನೀವು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಬಯಸಿದರೆ, ನೀವು ಮಾಡಬೇಕಾದ್ದು Settings > then tap Account > Privacy > Groups and select one of three options: “Everyone,” “My Contacts,” or “My Contacts Except.

ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಆದರೆ ಬೀಟಾ ಆವೃತ್ತಿಯ ಬಳಕೆದಾರರಾಗಿದ್ದರೆ, ಆಂಡ್ರಾಯ್ಡ್‌ ಆವೃತ್ತಿ 2.20.197.3ಗಾಗಿ ವಾಟ್ಸ್ಯಾಪ್‌ ‌ ಬೀಟಾವನ್ನು ಡೌನ್‌ಲೋಡ್‌ ಮಾಡುವ ಮೂಲಕ ಇದನ್ನು ಪ್ರಯತ್ನಿಸಬಹುದಾಗಿದೆ. ವಾಟ್ಸ್ಯಾಪ್‌‌ ಗುಂಪು ಗೌಪ್ಯತೆ ಸೆಟ್ಟಿಂಗ್‌ಗಳ ವೈಶಿಷ್ಟ್ಯದೊಂದಿಗೆ ಬರುತ್ತದೆ. ಅದು ಹೊಸ ಗುಂಪುಗಳಿಗೆ ಯಾರು ಸೇರಿಸಬಹುದು ಎಂಬುದನ್ನು ನಿರ್ಧರಿಸುವ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next