Advertisement
ಪೂರ್ವ ಲಡಾಖ್‌ನ ಪೋಸ್ಟ್ 120 ಪ್ರದೇಶದಲ್ಲಿ ನಿರ್ಮಿಸಲಾದ ಹುತಾತ್ಮ ಯೋಧರ ಸ್ಮಾರಕ ಕಳೆದ ವಾರ ಉದ್ಘಾಟನೆಗೊಂಡಿದೆ ಎಂದು ಸೇನೆಯ ಮೂಲ ಗಳು ತಿಳಿಸಿವೆ. ಶೊಕ್- ದೌಲತ್ ಬೇಗ್ ಓಲ್ಡಿ (ಡಿಬಿಒ) ರಸ್ತೆ ಬದಿಯಲ್ಲಿರುವ “ಪೋಸ್ಟ್ 120′, ಗಾಲ್ವಾನ್ ನದಿಗೆ ಸಮೀಪದಲ್ಲಿದೆ.
ಭಾರತ- ಚೀನ ಗಡಿಬಿಕ್ಕಟ್ಟಿನ ನಡುವೆಯೇ ನೆರೆಯ ಮ್ಯಾನ್ಮರ್ ಜತೆಗಿನ ಸಂಬಂಧ ಬಲಪಡಿಸಲು ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಮತ್ತು ವಿದೇಶಾಂಗ ಕಾರ್ಯದರ್ಶಿ ಹರ್ಷ ಶ್ರಿಂಗ್ಲಾ ಶೀಘ್ರ ಮ್ಯಾನ್ಮಾರ್ ಪ್ರವಾಸ ಕೈಗೊಳ್ಳಲಿದ್ದಾರೆ. ಜ. ನರವಣೆ ಮತ್ತು ಹರ್ಷ ಅವರು ಮ್ಯಾನ್ಮಾರ್‌ನ ಹಿರಿಯ ಜ. ಮಿನ್ ಆಂಗ್ ಹೆಗ್ ಮತ್ತು ಸ್ಟೇಟ್ ಕೌನ್ಸೆಲರ್ ಆಂಗ್ ಸಾನ್ ಸೂ ಕಿ ಅವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಬಂದರು ಸರಕು ಸಾಗಣೆ ಮತ್ತು ಭದ್ರತಾ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಒಪ್ಪಂದಗಳಿಗೆ ಸಹಿಹಾಕುವ ನಿರೀಕ್ಷೆ ಇದೆ. ಮುಖ್ಯವಾಗಿ ಕಲಾದನ್ ಬಹುಮಾದರಿ ಯೋಜನೆ ಮತ್ತು ದಂಗೆಕೋರರ ನಿಯಂತ್ರಿಸುವ ಸಂಬಂಧದ ಭದ್ರತಾ ಒಪ್ಪಂದಗಳಿಗೆ ಅಂಕಿತ ಬೀಳಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.